ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ಜಾತ್ರೆಯ ಅಂಗವಾಗಿ ಬುಧವಾರ ಜರುಗಿದ ಭಾರ ಎತ್ತುವ ಕಸರತ್ತಿನ ಸ್ಪರ್ಧೆಗಳು ಗಮನ ಸೆಳೆದವು. ಶ್ರೀ ಬಸವೇಶ್ವರ ದೇವಾಲಯದ ಅಂತಾರಾಷ್ಟ್ರೀಯ ಶಾಲೆಯ ಆವರಣದಲ್ಲಿ ನೆರೆದಿದ್ದ ಜನರು ಭಾರವಾದ ಚೀಲ, ಗುಂಡು, ಕಬ್ಬಿಣದ ಹಾರಿ, ಸಂಗ್ರಾಣಿ ಕಲ್ಲುಗಳನ್ನು ಎತ್ತುವ ಜಟ್ಟಿಗಳನ್ನು ಹುರಿದುಂಬಿಸಿದರು. ಸ್ಪರ್ಧೆಯಲ್ಲಿ ಬಾಗಲಕೋಟೆ, ಬೆಳಗಾವಿ, ಬ್ಯಾಡಗಿ, ಬೀಳಗಿ ಸೇರಿದಂತೆ ವಿವಿಧ ಭಾಗಗಳ ಜಟ್ಟಿಗಳು ಭಾಗವಹಿಸಿದ್ದರು. ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಿಗೆ ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಬೆಳ್ಳಿ ಕಡಗ ತೊಡಿಸಿ ಸನ್ಮಾನಿಸಿದರು. ವಿವಿಧ ಭಾರ ಎತ್ತುವ ಸ್ಪರ್ಧೆಗಳಲ್ಲಿ ವಿಜೇತರು: ಸಂಗ್ರಾಣಿ ಕಲ್ಲು ಸಾಗ ಎತ್ತುವ ಸ್ಪರ್ಧೆ: ಕೊಣ್ಣೂರಿನ ಕರೆಪ್ಪ ಧರೆಪ್ಪ ಅಬ್ಬುನವರ ಪ್ರಥಮ, ಬೀಳಗಿಯ ಸಂಘಣ್ಣ ಕೊಂಚಿಕಲ್ಲ ದ್ವಿತೀಯ, ಹೊನವಾಡದ ಉಮೇಶ ಹರಗೆ ತೃತೀಯ ಸ್ಥಾನ ಪಡೆದರು. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ : ಹಳಗೇರಿಯ ಸಾಯಪ್ಪ ಕೆಂದೂರ ಪ್ರಥಮ, ಕುಂಟೋಜಿಯ ಮಲ್ಲು ತಳವಾರ ದ್ವಿತೀಯ, ಗುಳೇದಗುಡ್ಡದ ಮಂಜು ಸಂಗೋಣ್ಣಿ ತೃತೀಯ ಸ್ಥಾನ ಪಡೆದರು. ಗುಂಡು ಎತ್ತುವ ಸ್ಪರ್ಧೆ: ಗುನ್ನಾಪುರದ ಶಿವಲಿಂಗಪ್ಪ ಶಿರೂರ (ಪ್ರಥಮ), ಹಳ್ಳೂರಿನ ಚಂದ್ರಶೇಖರ ಯಾಳವಾರ (ದ್ವಿತೀಯ) ಗಪಳಸಂಗಿಯ ಕೃಷ್ಣಾ ಪವಾರ ತೃತೀಯ ಸ್ಥಾನ ಪಡೆದರು. ಉಸುಕಿನ ಚೀಲ ಎತ್ತುವ ಸ್ಪರ್ಧೆ: ಯಲಗೂರಿನ ಗಂಗಪ್ಪ ಶಿರೂರ ಪ್ರಥಮ, ಗೋನಾಳದ ವಿಠ್ಠಲ ಹಡಗಲಿ ದ್ವಿತೀಯ, ಸಂಗೋಂದಿಯ ಮಳೇಪ್ಪ ಮೇಟಿ ತೃತೀಯ ಸ್ಥಾನ ಪಡೆದರು.ವಿವಿಧ ಭಾರ ಎತ್ತುವ ಸ್ಪರ್ಧೆಯಲ್ಲಿ ಗುನ್ನಾಪುರದ ಬಾಲಕ ಬೀರಪ್ಪ ಲೋಣಿ ಮೆಟ್ನಾಲಿಗೆ ಮೇಲೆ ನಿಂತು 68 ಕೆ.ಜಿ. ತೂಕದ ಅಕ್ಕಿ ಚೀಲ ಎತ್ತುವ ಮೂಲಕ ಗಮನ ಸೆಳೆದರು. ಇಂಗಳಯ ಮಾಳಪ್ಪ ಪೂಜಾರಿ, ಮುಳಸಾವಳಗಿಯ ರಮೇಶ ಪಾಟೀಲ ಅವರು ಹಲ್ಲಿನ ಸಹಾಯದಿಂದ ಭಾರವಾದ ಕಬ್ಬಿಣದ ಹಾರಿ ಎತ್ತಿದರು. ನಾಗರಾಜ ಗಾಣಗೇರಿ, ನಿಜಾನಂದ ಹಳ್ಳಿ ಮೆಟನಾಲಿಗೆ ಮೇಲೆ ನಿಂತು. ಭಾರವಾದ ಚೀಲ ಎತ್ತಿದರು. ಪರಶುರಾಮ ಮನಗೂಳಿ ಮೆಟ್ ನಾಲಿಗೆ ಮೇಲೆ ನಿಂತು ಕಬ್ಬಿಣದ ಹಾರಿ ಎತ್ತುವ ಮೂಲಕ ಸ್ಪರ್ಧೆಯ ಮೆರಗು ಹೆಚ್ಚಿಸಿದರು. ವಿವಿಧ ಕಸರತ್ತಿನ ಸ ರ್ಧೆಗಳಲ್ಲಿ ವಿಜೇತರಾದವರಿಗೆ ನಾಗರಾಜ ಗುಂದಗಿ ಅವರು ಕಳೆದ 13 ವರ್ಷಗಳಿಂದ ಬೆಳ್ಳಿ ಕಡೆ ಬಹುಮಾನವಾಗಿ ನೀಡುತ್ತಿರುವುದು ವಿಶೇಷ. ಕಸರತ್ತಿನ ಸ್ಪರ್ಧೆಯಲ್ಲಿ ಸಿದ್ದಲಿಂಗ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಸಪ್ಪ ಹಾರಿವಾಳ, ಬಸವರಾಜ ಗೊಳಸಂಗಿ, ಬಸಣ್ಣ ದೇಸಾಯಿ, ಮೀರಾಸಾಬ್ ಕೊರಬು, ಅಪ್ಪು ಮಟ್ಟಿಹಾಳ, ಶರಣು ಕೂಡಗಿ, ಶ್ರೀಶೈಲ ಹಾರಿವಾಳ, ಸಂಗಪ್ಪ ಡಂಬಳ, ಸಂಗಯ್ಯ ಒಡೆಯರ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ಹಂಜಗಿ, ಸಂಗಮೇಶ ಓಲೇಕಾರ, ಬಸವರಾಜ ಕೋಟಿ, ಸಂಗಪ್ಪ ವಾಡೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.