Advertisement

ಟಾಯ್ಕನಮಿಯಲ್ಲಿ ಇರಲಿ ದೊಡ್ಡ ಸ್ಥಾನ

11:58 PM Jun 24, 2021 | Team Udayavani |

ಹೊಸದಿಲ್ಲಿ: ಬಾಯಿಮಾತಿನ ಮೂಲಕವೇ ಸ್ಥಳೀಯ ಆಟಿಕೆಗಳನ್ನು ಪ್ರಚುರಪಡಿಸಿ. “ಟಾಯ್ಕನಮಿ'(ಆಟಿಕೆ ಆರ್ಥಿಕತೆ)ಯಲ್ಲಿ ಭಾರತದ ಸ್ಥಾನವನ್ನು ಎತ್ತರಕ್ಕೇರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Advertisement

ಗುರುವಾರ ನಡೆದ “ಟಾಯ್ಕಥಾನ್‌-2021′ ಎಂಬ ಕಾರ್ಯಕ್ರಮದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿ ಮಾತನಾಡಿದ ಅವರು, ಸದ್ಯ ಭಾರತವು ಶೇ.80ರಷ್ಟು ಆಟಿಕೆಗಳನ್ನು ರಫ್ತು ಮಾಡುತ್ತಿದೆ. ಬರೋಬ್ಬರಿ 100 ಶತಕೋಟಿ ಡಾಲರ್‌(7.5 ಲಕ್ಷ ಕೋಟಿ ರೂ.) ಮೌಲ್ಯದ ಜಾಗತಿಕ ಆಟಿಕೆ ಮಾರುಕಟ್ಟೆಯ ಪೈಕಿ ಭಾರತದ ಪಾಲು ಕೇವಲ 1.5 ಶತಕೋಟಿ ಡಾಲರ್‌(ಸುಮಾರು 11 ಸಾವಿರ ಕೋಟಿ ರೂ. ) ಮಾತ್ರ. ಹೀಗಾಗಿ ಆಟಿಕೆ ಕ್ಷೇತ್ರದಲ್ಲಿ ಭಾರತದ ಪಾಲನ್ನು ಹೆಚ್ಚಿಸಬೇಕು ಮತ್ತು ಆಟಿಕೆ ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದು ಹೇಳಿದ್ದಾರೆ.

ಆಟಿಕೆ ಕ್ಷೇತ್ರವು ತನ್ನದೇ ಆದ ಸಣ್ಣ ಮಟ್ಟದ ಕೈಗಾರಿಕೆಯನ್ನು ಹೊಂದಿದೆ. ಇಲ್ಲಿ ಗ್ರಾಮೀಣ ಪ್ರದೇಶದ ದಲಿತ, ಬಡ ಹಾಗೂ ಬುಡಕಟ್ಟು ಜನಾಂಗದ ಕುಶಲಕರ್ಮಿಗಳು ಕೆಲಸ ಮಾಡುತ್ತಾರೆ. ಇದರಲ್ಲಿ ಮಹಿಳೆಯರ ಪಾಲೂ ಹೆಚ್ಚಿದೆ. ಈ ವರ್ಗಗಳಿಗೆ ಅನುಕೂಲ ಆಗಬೇಕೆಂದರೆ ನಾವೆಲ್ಲರೂ ಸ್ಥಳೀಯ ಆಟಿಕೆಗಳಿಗೆ ಉತ್ತೇಜನ ನೀಡಬೇಕು. ಜಾಗತಿಕ ಮಟ್ಟದಲ್ಲಿ ಭಾರತದ ಆಟಿಕೆಗಳು ಸ್ಪರ್ಧೆ ನೀಡುವಂತೆ ಹೊಸ ಹೊಸ ಸಂಶೋಧನೆಗಳು ಹಾಗೂ ನಾವೀನ್ಯವನ್ನು ಪರಿಚಯಿಸಬೇಕು ಎಂದೂ ಮೋದಿ ಸಲಹೆ ನೀಡಿದ್ದಾರೆ.

ಭಾರತೀಯತೆಯ ಸೊಗಡಿರಲಿ: ಜತೆಗೆ ಜಗತ್ತು ಭಾರತದ ಸಾಮರ್ಥ್ಯ, ಕಲೆ, ಸಂಸ್ಕೃತಿ ಮತ್ತು ಸಮಾ ಜದ ಬಗ್ಗೆ ಕಲಿಯಲು ಇಚ್ಛಿಸುತ್ತಿದೆ. ಇದರಲ್ಲಿ ಆಟಿಕೆ ಗಳು ಕೂಡ ದೊಡ್ಡ ಮಟ್ಟದ ಪಾತ್ರ ವಹಿಸುತ್ತವೆ. ಹೀಗಾಗಿ, ಭಾರತೀಯತೆಯನ್ನು ಮೈಗೂಡಿಸಿಕೊಂಡ ಆಟಿಕೆಗಳು ಹಾಗೂ ಗೇಮ್‌ಗಳನ್ನು ನಾವು ಪರಿಚಯಿಸ ಬೇಕಿದೆ. ಇದಕ್ಕಾಗಿ ಹೊಸ ಸ್ಟಾರ್ಟ್‌ಅಪ್‌ಗ್ಳು ಮತ್ತು ಯುವ ಸಂಶೋಧಕರು ಮುಂದೆ ಬರಬೇಕು.ದೇಶದ 75ನೇ ಸ್ವಾತಂತ್ರೊéàತ್ಸವದ ವೇಳೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು, ಆಗಿನ ಘಟನೆ ಗಳು, ಅವರ ದಿಟ್ಟತನ, ನಾಯಕತ್ವವನ್ನು ಬಿಂಬಿಸುವ “ಗೇಮ್‌’ಗಳನ್ನು ಅಭಿವೃದ್ಧಿಪಡಿಸು­ವಂತೆಯೂ ಮೋದಿ ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next