Advertisement
ಬದುಕಿನಲ್ಲಿ ಇಂದು ನಾಳೆಯಾಗಿರುವುದಿಲ್ಲವೆನ್ನುವುದನ್ನು ಮೊದಲು ಮನುಷ್ಯ ಅರಿತುಕೊಳ್ಳಬೇಕು. ಆಗ ಮಾತ್ರ ಬದುಕಿನಲ್ಲಿ ಸುಖ ನೆಮ್ಮದಿಯ ಬದುಕನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ. ತುಂಬಾ ಮಾನಸಿಕ ಘರ್ಷಣೆಯನ್ನು ಅನುಭವಿಸಿ , ವಿದ್ಯಾರ್ಥಿ ದೆಸೆಯಿಂದಲೇ ವೃತ್ತಿ ಜೀವನದ ಬಗ್ಗೆ ಏನೋ ಶೃದ್ಧೆ ಇಟ್ಟುಕೊಂಡು ಏನೋ ಮಹತ್ತರವಾದದ್ದನ್ನು ಸಾಧಿಸಬೇಕೆಂದುಕೊಂಡು ಅನವಶ್ಯಕ ಭಯಗಳಿಗೆ ಗುರಿಯಾಗಿ ಜೀವನದಲ್ಲಿ ತುಂಬಾ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವವರು ನಮ್ಮೊಂದಿಗೆ ನಮ್ಮ ಸುತ್ತ ಮುತ್ತಾ ಅದೆಷ್ಟೋ ಮಂದಿ ನಮ್ಮ ಸುತ್ತ ಮುತ್ತಲಲ್ಲೇ ಇದ್ದಾರೆ.
Related Articles
Advertisement
ಯಾರಿಗೆ ಬದುಕಿನ ಬಗ್ಗೆ ಸ್ಪಷ್ಟತೆ ಹಾಗೂ ನಿಖರತೆ ಇಲ್ಲವೋ ಅವರಲ್ಲಿ ಬದುಕಿನ ಬಗ್ಗೆ ಹಾಗೂ ಭವಿಷ್ಯದ ಬಗ್ಗೆ ಸಹಜವಾಗಿ ಭಯ ಇದ್ದೇ ಇರುತ್ತದೆ. ಇದು ಒಂದು ರೀತಿಯಲ್ಲಿ ಕೊಲು ಕೊಟ್ಟು ಪೆಟ್ಟು ತಿಂದ ಹಾಗೆ. ಇಲ್ಲದ ಭಯವನ್ನು ಹುಟ್ಟಿಸಿಕೊಳ್ಳುವುದು. ಮತ್ತು ಇಂತಹ ಭಯಗಳು ಒಬ್ಬ ವ್ಯಕ್ತಿಯಲ್ಲಿ ಹುಟ್ಟಿಕೊಳ್ಳುವುದು ಆ ವ್ಯಕ್ತಿ ಬೆಳೆದು ಬಂದ ದಾರಿಯೂ ಕೂಡ ಪ್ರಭಾವ ಬೀರುತ್ತದೆ ಎನ್ನುವುದು ಕೂಡ ಸತ್ಯ.
ಈ ಭಯವಲ್ಲದ ಭಯದ ಕಾರಣದಿಂದಲೇ ಎಷ್ಟೋ ಮಂದಿ ತಮ್ಮ ಬದುಕಿನ ಅನೇಕ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತಾರೆ. ಬದುಕಿನ ಅರ್ಧ ಭಾಗವನ್ನೇ ಅವರು ಈ ರೀತಿಯಲ್ಲೇ ಕಳೆಯುವುದರಿಂದ ಬದುಕಿನ ಹಲವು ಮಜಲುಗಳನ್ನು ದುಃಖದಿಂದಲೇ ಕಳೆಯುತ್ತಾರೆ.
ಇದರಿಂದ ಹೊರ ಬರುವುದಕ್ಕೆ ಪ್ರಧಾನ ಕೆಲಸವೆಂದರೇ, ಬದುಕನ್ನು ಸಹಜವಾಗಿ ಸ್ವೀಕರಿಸುವುದಷ್ಟೇ ಒಂದು ಮಾರ್ಗ ಬಿಟ್ಟರೇ ಬೇರೇನೂ ಇಲ್ಲ.
ಬದುಕು ಬಂದ ಹಾಗೆ ಬದುಕಿ, ಭವಿಷ್ಯದ ಬಗ್ಗೆ ಚಿಂತಿಸದೇ, ಕೊರಗದೇ ಬದುಕುವುದನ್ನು ಕಲಿಯುವುದರಿಂದ ಯಾವ ಭಯ ಭೀತಿಗಳಿಲ್ಲದೆ ಬದುಕಲು ಸಾಧ್ಯವಾಗುತ್ತದೆ. ಎಲ್ಲಿಯ ತನಕ ನಾವು ನಮ್ಮ ಇಂದಿನ ಸಮಸ್ಯೆಯನ್ನು ನಾಳೆಯ ಸಮಸ್ಯೆ ಎಂದು ತಿಳಿದುಕೊಂಡಿರುತ್ತೇವೋ ಅಲ್ಲಿಯ ತನಕ ಈ ಭಯ ತಪ್ಪಿದ್ದಲ್ಲ.
ಇರುವಷ್ಟು ದಿನದ ಬದುಕು ನಿಮ್ಮದು ಎಂದು ಬದುಕಿದರೇ, ಯಾವ ಭಯವೂ ಇರದು. ನೆನಪಿರಲಿ, ನೀವಂದುಕೊಂಡದ್ದಕ್ಕಿಂತ ಬದುಕು ಬೇರೆನೇ ಇದೆ ಮತ್ತು ಮಜಬೂತಾಗಿದೆ.