ಬೆಂಗಳೂರು : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಕೊಡಗು ಪ್ರವಾಹ ಸಂತ್ರಸ್ತ್ರರ ಸಮಸ್ಯೆಗಳನ್ನು ಆಲಿಸಿದರು.
ನಿತ್ಯವೂ ಆಗಮಿಸುವ ಸಮಯಕ್ಕಿಂತ ಮುಂಚಿತವಾಗಿ ಆಗಮಿಸಿರುವ ಸಿಎಂ ಸಂತ್ರಸ್ತ್ರರೊಂದಿಗೆ ಚರ್ಚೆ ನಡೆಸಿದರು.
ಹಲವು ಸಂತ್ರಸ್ತ್ರರು ತಮ್ಮ ನೋವನ್ನು ಸಿಎಂ ಬಳಿ ಹೇಳಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಸ್ಥಳದಲ್ಲೇ ಸಿಎಂ ಸೂಚನೆ ನೀಡಿದರು.
ಸಿಎಂ ಪರಿಹಾರ ನಿಧಿಗೆ ಖ್ಯಾತ ನಟರು, ರಾಜಕಾರಣಿಗಳು ಸೇರಿದಂತೆ ಹಲವರು ಹಣಕಾಸಿನ ನೆರವು ನೀಡುತ್ತಿದ್ದಾರೆ.
ಹಿರಿಯ ವ್ಯಕ್ತಿಯಿಂದ 3 ತಿಂಗಳ ಪಿಂಚಣಿ
ಸಭೆ ವೇಳೆ ಆಗಮಿಸಿದ ಹಿರಿಯ ವ್ಯಕ್ತಿ ವೆಂಕಟರಾಮ್ ಅವರು ಸಿಎಂ ಅವರನ್ನು ಭೇಟಿ ಮಾಡಿ ಇಳಿಗಾಲದ ಪಿಂಚಣಿಯನ್ನೇ ದಾನವಾಗಿ ನೀಡಿದರು. 3 ತಿಂಗಳ ಪಿಂಚಣಿ ಹಣವನ್ನು ಪರಿಹಾರ ನಿಧಿಗೆ ಚೆಕ್ ರೂಪದಲ್ಲಿ ನೀಡಿದರು.
ಸಚಿವ ಕೆ.ಜೆ. ಜಾರ್ಜ್ ಅವರು MISL ವತಿಯಿಂದ ಹಾಗೂ MCA ಯಿಂದ ತಲಾ ಒಂದು ಕೋಟಿ ರೂಪಾಯಿ ಹಣವನ್ನು ನೆರೆ ಸಂತ್ರಸ್ತ್ರರ ಪರಿಹಾರ ನಿಧಿಗೆ ನೀಡಿದರು
ಸಿಎಂ ಎಚ್‌ಡಿಕೆ ಅವರು ನಾಡಿನ ಜನತೆ ಕೊಡುಗೆ ನೀಡಲು ಮನವಿ ಮಾಡಿದ್ದಾರೆ.