Advertisement

ಆದಾಯ ತೆರಿಗೆ ಪಾವತಿದಾರರಿಗೆ ಬಂಪರ್ ಗಿಫ್ಟ್, ಸಣ್ಣ ಕೈಗಾರಿಕೆಗೆ ಅಡಮಾನ ಇಲ್ಲದೆ ಸಾಲ

08:51 AM May 14, 2020 | Nagendra Trasi |

ನವದೆಹಲಿ: ಕೋವಿಡ್ ಸೋಂಕು ತಡೆಯುವ ಸಂಬಂಧ ಲಾಕ್ ಡೌನ್ ಜಾರಿಯಲ್ಲಿದ್ದ ಪರಿಣಾಮ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆರ್ಥಿಕ ಚೇತರಿಕಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದು, ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದ್ದಾರೆ.

Advertisement

ಕಿರು, ಸಣ್ಣ ಮತ್ತು ಮಧ್ಯ ಕೈಗಾರಿಕಾ ವಲಯಗಳಿಗೆ ಮೂರು ಲಕ್ಷ ಕೋಟಿ ಸಾಲ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕಂಪನಿ ಮತ್ತು ವ್ಯವಹಾರಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು.

*ಸಣ್ಣ ಸಾಲ ನೀಡುವ ಕಂಪನಿಗಳಿಗೆ ಕೇಂದ್ರದಿಂದ ನೆರವು, ಇದುವರೆಗೆ 52 ಸಾವಿರ ಕೋಟಿ ರೂಪಾಯಿ ಜನ್ ಧನ್ ಖಾತೆಗಳಿಗೆ ವರ್ಗಾಯಿಸಿದ್ದೇವೆ.

* ವಿದ್ಯುತ್ ಸರಬರಾಜು ಕಂಪನಿಗಳು ಕೋವಿಡ್ ಸೋಂಕಿನಿಂದ ತೀವ್ರ ನಷ್ಟ ಅನುಭವಿಸಿವೆ.

*ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಿನ ಇಪಿಎಫ್ ಕಂತಿನ ಮೊತ್ತವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಇದರಿಂದ 72.22 ಲಕ್ಷ ನೌಕರರಿಗೆ ಲಾಭವಾಗಲಿದ್ದು, 2,500 ಕೋಟಿ ರೂಪಾಯಿ ನೆರವು ಸಿಕ್ಕಂತಾಗಿದೆ.

Advertisement

*ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 45 ಸಾವಿರ ಕೋಟಿ ರೂಪಾಯಿ. ಕೋವಿಡ್ ಅನ್ನು ನೈಸರ್ಗಿಕ ವಿಕೋಪ ಎಂದು ಪರಿಗಣಿಸಲು ಸೂಚನೆ.

*ಟಿಡಿಎಸ್/ಟಿಸಿಎಸ್ ನ ಶೇ.25ರಷ್ಟು ತೆರಿಗೆ ಕಡಿತ. ಇದರಿಂದ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

* 2019-20ನೇ ಸಾಲಿನ ಆದಾಯ ತೆರಿಗೆ ಪಾವತಿ ದಿನಾಂಕವನ್ನು ಜುಲೈ 31ರಿಂದ ಅಕ್ಟೋಬರ್, ನವೆಂಬರ್ 30ರವರೆಗೆ ವಿಸ್ತರಣೆ.

*ಮೇ 14ರಿಂದ 2021ರ ಮಾರ್ಚ್ 31ರವರೆಗಿನ ಟಿಡಿಎಸ್ ಮತ್ತು ಟಿಸಿಎಸ್ ಮೇಲಿನ ಶೇ.25ರಷ್ಟು ತೆರಿಗೆ ಕಡಿತ ಮಾಡಲಾಗಿದ್ದು, ಇದು ಎಲ್ಲಾ ತೆರಿಗೆದಾರರಿಗೂ ಅನ್ವಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next