Advertisement
ಮ್ಯಾನ್ಯುವಲ್ ಆಗಿ ಸಾರಿಗೆ ಇಲಾಖೆಯು ಆಗಾಗ್ಗೆ ನಿಗದಿಗಿಂತ ಅತಿ ಭಾರ ಹೊತ್ತೂಯ್ಯುವ ವಾಹನಗಳವಿರುದ್ಧ ಕಾರ್ಯಾಚರಣೆ ನಡೆಸುತ್ತದೆ.ಆದರೆ, ನಿರಂತರವಾಗಿ ಈ ಮಾದರಿಯವಾಹನಗಳ ಮೇಲೆ ಕಣ್ಗಾವಲಿಡುವ ಯಾವುದೇ ತಂತ್ರಜ್ಞಾನ ಇಲ್ಲ. ಟೋಲ್‌ಗಳಲ್ಲಿ ಇಂತಹ ವ್ಯವಸ್ಥೆ ಇದ್ದರೂ, ಅದರ ಬಳಕೆ ಆಗುತ್ತಿಲ್ಲ. ಹಾಗಾಗಿ, ರಾಜಾರೋಷವಾಗಿ ಕಾರ್ಯಾಚರಣೆ ಮಾಡುತ್ತವೆ. ಟನ್‌ಗಟ್ಟಲೆ ಹೆಚ್ಚುವರಿ ಭಾರ ಹೊತ್ತು ಸಂಚರಿಸುತ್ತವೆ.
Related Articles
Advertisement
ತಂತ್ರಜ್ಞಾನ ಬಳಕೆಯಾಗಲಿ; ಸಾರಿಗೆ ಇಲಾಖೆ: ಮ್ಯಾನ್ಯುವಲ್ ಆಗಿ ಪ್ರತಿಯೊಂದು ವಾಹನಗಳಮೇಲೆ ನಿಗಾ ಇಡುವುದು ಅಸಾಧ್ಯ. ಇದೇಕಾರಣಕ್ಕೆ ನಗರದ ಹೊರ ವಲಯಗಳಲ್ಲಿರುವ ಟೋಲ್‌ಗೇಟ್‌ಗಳಲ್ಲಿ “ವೇ ಇನ್ ಮೋಷನ್’ (WIM) ಯಂತ್ರಗಳನ್ನು ಅಳವಡಿಸಬೇಕು ಎಂಬ ನಿರ್ದೇಶನ ಇದೆ. ಇವುಗಳ ಅಳವಡಿಕೆ ಕೆಲವು ಕಡೆ ಆಗಿದೆ; ಇನ್ನು ಹಲವೆಡೆ ಆಗಿಲ್ಲ. ಈಗಾಗಲೇ ಯಂತ್ರಗಳನ್ನು ಅಳವಡಿಸಿದ್ದರೂ ಅಧಿಕ ಭಾರದ ವಾಹನಗಳ ತೂಕ ಮಾಡಲಾಗುತ್ತಿಲ್ಲ. ಒಂದು ವೇಳೆ ಈ ನಿಯಮ ಪಾಲನೆ ವ್ಯವಸ್ಥಿತವಾಗಿಆದರೆ, ರಸ್ತೆಗಳು ಹಾಳಾಗದಂತೆ ತಡೆಯಬಹುದು ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ(ಕಾರ್ಯಾಚರಣೆ) ನರೇಂದ್ರ ಹೋಳ್ಕರ್ ತಿಳಿಸುತ್ತಾರೆ.
“ಪ್ರತಿ ರಸ್ತೆಗಳ ಮೇಲೆ ಎಷ್ಟು ಭಾರ ಹೊತ್ತ ವಾಹನಗಳು ಸಂಚರಿಸಬೇಕು ಎಂಬುದನ್ನು ಆಯಾ ರಸ್ತೆಗಳ ಆರಂಭದಲ್ಲೇ ಫಲಕಗಳನ್ನು ಅಳವಡಿಸಲಾಗಿರುತ್ತದೆ. ಅದನ್ನು ಆಧರಿಸಿ ಸಾರಿಗೆ ಇಲಾಖೆಯು ಅಧಿಕ ಭಾರದ ವಾಹನಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತದೆ. ಪ್ರತಿ ವರ್ಷ ಸರಾಸರಿ 2,500-3,000 ವಾಹನಗಳ ವಿರುದ್ಧ ಪ್ರಕರಣಗಳು ದಾಖಲಾಗುತ್ತವೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಏನಾಗುತ್ತೆ? :
ಒಂದು ವೇಳೆ ಅಧಿಕ ಭಾರದ ವಾಹನಗಳು ನಿರಂತರವಾಗಿ ಫ್ಲೈಓವರ್‌ಗಳು ಅಥವಾ ರಸ್ತೆಗಳ ಮೇಲೆ ಸಂಚರಿಸುವುದರಿಂದ ಅವಧಿಗಿಂತ ಮೊದಲೇರಸ್ತೆಗಳು ಹಾಳಾಗುತ್ತವೆ. ಗುಂಡಿ ಬೀಳುವುದು, ಬಿರುಕು ಬಿಡಲುಕಾರಣವಾಗುತ್ತವೆ. ಇನ್ನು ಫ್ಲೈಓವರ್‌ಗಳಲ್ಲಿ ಕೇಬಲ್‌ಗಳು ಡ್ಯಾಮೇಜ್‌ಆಗುತ್ತವೆ. ಕಾಂಕ್ರೀಟ್ ಹಾಳಾಗ ಬಹುದು. ತುಮಕೂರು ರಸ್ತೆಯ ಪೀಣ್ಯಬಳಿಯ ಫ್ಲೈಓವರ್ ಬಾಳಿಕೆ 60 ರಿಂದ 100 ವರ್ಷ ಇತ್ತು. ಆದರೆ, 12 ವರ್ಷಕ್ಕೇ ಅದು ಹಾಳಾಗಿದೆ. ಇದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
–ವಿಜಯಕುಮಾರ ಚಂದರಗಿ