Advertisement
ಸೇರ್ಪಡೆ :
Related Articles
Advertisement
ಬೇಲಿ ಕಾಮಗಾರಿ :
ಹಂಗಳೂರಿನ ಅಂಕದಕಟ್ಟೆಯಿಂದ ಕೋಟೇಶ್ವರ ವರೆಗೆ ಹೆದ್ದಾರಿಯ ಎರಡೂ ಬದಿ, ಸರ್ವೀಸ್ ರಸ್ತೆಯ ಒಂದು ಬದಿಗೆ ಕಬ್ಬಿಣದ ಬೇಲಿ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಕೋಟೇಶ್ವರದಿಂದ ವಿನಾಯಕವರೆಗೆ ಅಲ್ಲಲ್ಲಿ ಹೆದ್ದಾರಿಗೆ ಸೇರಿಕೊಳ್ಳಲು ಅವಕಾಶ ಇದ್ದರೂ ವಿನಾಯಕದಿಂದ ಎಪಿಎಂಸಿವರೆಗೂ ಹೆದ್ದಾರಿ ಸೇರಿಕೊಳ್ಳಲು ಅವಕಾಶ ಇಲ್ಲ. ವಿನಾಯಕದಿಂದ ಬಸೂÅರು ಮೂರುಕೈ ಅಂಡರ್‌ಪಾಸ್ ಹೊರತಾಗಿಸಿ ದರೆ ಇನ್ನೆಲ್ಲೂ ಇನ್ನೊಂದು ಬದಿಯ ಸರ್ವೀಸ್ ರಸ್ತೆ ಯನ್ನೂ ಸೇರುವಂತಿಲ್ಲ. ಟಿ.ಟಿ. ರೋಡ್ ಬಳಿ ಸಣ್ಣ ವಾಹನಗಳು ಹೋಗುವಂತಹ ಪಾದಚಾರಿ ಮಾರ್ಗ ಇದ್ದು ನಂದಿಬೆಟ್ಟ ಬಳಿ ಜಾನುವಾರು ಹೋಗುವ ಮಾರ್ಗದಲ್ಲೂ ಸಣ್ಣ ವಾಹನಗಳು ಹೋಗಬಹುದು. ಉಳಿದಂತೆ ಘನವಾಹನಗಳಿಗೆ ಬಸೂÅರು ಮೂರುಕೈ ಹಾಗೂ ಶಾಸಿŒ ಸರ್ಕಲ್ ಬಳಿ ಮಾತ್ರ ಅವಕಾಶ.
ಗೋಡೆ ಮಾಡಿದಂತಾಗಿದೆ :
ಫ್ಲೈಓವರ್ ಕಾಮಗಾರಿ ಕುಂದಾಪುರಕ್ಕೆ ತಡೆಗೋಡೆ ಮಾಡಿದಂತಾಗಿದೆ. ವಿನಾಯಕ ಬಳಿ ಹೆದ್ದಾರಿಯಿಂದ ವಿಭಜನೆಯಾಗಲು ಅವಕಾಶ ಇದೆ. ಇನ್ನೊಂದು ಎಪಿಎಂಸಿ ಬಳಿ ಇದೆ. ಇವೆರಡನ್ನು ಹೊರತಾಗಿಸಿ ಎಲ್ಲೂ ಇಲ್ಲ. ಪರಿಣಾಮ ಕುಂದಾಪುರ ನಗರಕ್ಕೆ ಬರುವ ವಾಹನಗಳು ಇಲ್ಲೇ ಸರ್ವಿಸ್ ರಸ್ತೆಗೆ ತಿರುಗಿಸಬೇಕು. ಅದಿಲ್ಲದಿದ್ದರೆ ಹೆದ್ದಾರಿಯಲ್ಲಿ ಹೋಗುವ ವಾಹನ, ಪ್ರಯಾಣಿಕರಿಗೆ ನಗರದ ಸಂಪರ್ಕವೇ ಇಲ್ಲದಾಗುತ್ತದೆ. ಇದು ನಗರದ ವ್ಯಾಪಾರ, ಆರ್ಥಿಕ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಗರವನ್ನೇ ಹುಡುಕಿ ಬರುವವರಿಗಷ್ಟೇ ಸೀಮಿತವಾಗುತ್ತದೆ. ಇದು ನಗರದ ಬೆಳವಣಿಗೆಗೆ ಮಾರಕವೂ ಹೌದು.
ಪ್ರವೇಶ ನಿಷಿದ್ಧ :
ವಡೇರಹೋಬಳಿಯಲ್ಲಿ ಅತ್ಯಧಿಕ ಸರಕಾರಿ ಕಚೇರಿಗಳು, ಪಾರ್ಕ್, ಆಟದ ಮೈದಾನಗಳು, ಶಾಲಾ ಮಕ್ಕಳ ಹಾಸ್ಟೆಲ್‌ಗಳು, ಗ್ರಂಥಾಲಯ, ಅಂಗನವಾಡಿ, ಪ್ರಾಥಮಿಕ ಶಾಲೆಗಳಿಗೆ ಪ್ರವೇಶಿಸುವವರಿಗೆ ರಸ್ತೆ ದಾಟಲು “ಅಂಡರ್ ಪಾಸ್ ನಿರ್ಮಿಸಲು ಮರೆತಿರುವ’ ಹೆದ್ದಾರಿ ಪ್ರಾಧಿಕಾರದವರು, “ತಾಂತ್ರಿಕ ಕಾರಣದಿಂದ’ ಹೆದ್ದಾರಿ ಪ್ರವೇಶ ನಿರ್ಬಂಧಿಸಬೇಕಿದೆ ಎಂದು ಹೇಳಿಕೆ ನೀಡುತ್ತಾರೆ. ಅಂತೂ ಪ್ರತಿ ಬಾರಿ ಮಾ. 31ಕ್ಕೆ ಫ್ಲೈಓವರ್ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಕಳೆದ ಅನೇಕ ವರ್ಷಗಳಿಂದ ಹೇಳಿದಂತೆ ಈ ವರ್ಷವೂ ಎ. 1 ಮೂರ್ಖರ ದಿನವಾಗಿದೆ.
ಬೆಳಕಿಲ್ಲ :
ವಡೇರಹೋಬಳಿ ಶಾಂತಿನಿಕೇತನ ರಸ್ತೆ ಎದುರಿನಿಂದ ಬೊಬ್ಬರ್ಯಕಟ್ಟೆ ಮೂಲಕ ಹಾದು ಹೋಗುವ ಹೆದ್ದಾರಿಯ ಮಧ್ಯ ಭಾಗದಲ್ಲಿ ನಿರ್ಮಿಸಿರುವ ಡಿವೈಡರ್‌ನ ದಂಡೆಯ ಮೇಲೆ ರಾತ್ರಿ ಸಮಯದಲ್ಲಿ ದಾರಿದೀಪಕ್ಕಾಗಿ ಎಲೆಕ್ಟ್ರಿಕ್ ಕಂಬಗಳನ್ನು ಅಳವಡಿಸದೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಮೇಲೆ ಬೆಳಕಿನ ಕೊರತೆಯುಂಟಾಗುತ್ತದೆ. ಹಂಗಳೂರು, ಕೋಟೇಶ್ವರದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ನಲ್ಲಿ ಎದುರು-ಬದುರು ಬರುವ ವಾಹನಗಳ ಹೆಡ್‌ಲೈಟ್‌ನ ಪ್ರಖರ ಬೆಳಕನ್ನು ತಡೆಯಲು ಆ್ಯಂಟಿ ಹೆಡ್‌ಲೈಟ್ ರಿಫ್ಲೆಕ್ಟರ್‌ನ್ನು ಅಳವಡಿಸಿದಂತೆ ಕುಂದಾಪುರ ಪುರಸಭಾ ವ್ಯಾಪ್ತಿಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿಲ್ಲ. ಹೆದ್ದಾರಿಯಲ್ಲಿ ಬೀದಿದೀಪಗಳ ಅಳವಡಿಕೆಗೆ ಈಗಷ್ಟೇ ಏರ್ಪಾಟುಗಳನ್ನು ಮಾಡಲಾಗುತ್ತಿದೆ. ಜಲ್ಲಿ ಕೊರತೆಯಿಂದ ಡಾಮರು ಕೆಲಸ ನಿಧಾನವಾಗಿದ್ದರೂ ಈ ಎಲ್ಲ ಕೆಲಸಗಳು ಇನ್ನೂ ಏಕೆ ಬಾಕಿಯಾಗಿದೆ ಎನ್ನುವುದಕ್ಕೆ ಗುತ್ತಿಗೆದಾರ ಸಂಸ್ಥೆ ಬಳಿ ಉತ್ತರವಿಲ್ಲ.
ಕೋವಿಡ್ ಹೆಚ್ಚಾಗುತ್ತಿರುವ ಕಾರಣದಿಂದ ಎ.1ರಂದು ನಡೆಯಬೇಕಿದ್ದ ಅಣಕು ಉದ್ಘಾಟನೆ ಕಾರ್ಯಕ್ರಮಕ್ಕೆ ಅನುಮತಿ ದೊರೆಯಲಿಲ್ಲ. ಮಾ. 31ರಂದು ಪೂರ್ಣವಾಗದೇ ಇದ್ದರೆ ಭಜನೆ, ಅಣಕು ಉದ್ಘಾಟನೆ ನಡೆಯುವುದೆಂದು ತೀರ್ಮಾನಿಸಲಾಗಿತ್ತು. ಇನ್ನು 15 ದಿನಗಳಲ್ಲಿ ಕಾಮಗಾರಿ ಪೂರ್ಣವಾಗಲಿದೆ ಎಂದು ಗೊತ್ತಾಗಿದೆ. –ಚಂದ್ರಶೇಖರ ಖಾರ್ವಿ ಪುರಸಭೆ ವಿಪಕ್ಷ ಮುಖಂಡರು