Advertisement
ಈ ಕಾರನ್ನು ವಿಶ್ವದ ಮೊದಲ ‘ಡ್ರೈವ್ ಅಂಡ್ ಫ್ಲೈ’ ಕಾರು ಎಂದು ಕರೆಯಲಾಗುತ್ತಿದೆ. 102-ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಈ ಕಾರು ಒಂದು ಬಾರಿ ಗಾಳಿಯಲ್ಲಿ 500 ಕಿ.ಮೀ ವರೆಗೆ ಚಲಿಸಬಲ್ಲದು. ಹಾಗೆಯೇ ರಸ್ತೆಯಲ್ಲಿ ಅದು 1200 ಕಿ.ಮೀ ದೂರವನ್ನು ಕ್ರಮಿಸುತ್ತದೆ: ಇತ್ತೀಚೆಗೆ ಪ್ಯಾರಾಮೌಂಟ್ ಮಿಯಾಮಿ ವರ್ಲ್ಡ್ ಸೆಂಟರ್ನಲ್ಲಿ ಈ ಕಾರನ್ನು ಪ್ರದರ್ಶನ ಮಾಡಲಾಗಿದೆ.
Related Articles
Advertisement
ಗ್ಯಾಸೋಲಿನ್ (ಪೆಟ್ರೋಲ್) ನಿಂದ ಈ ಕಾರು ಚಲಿಸುತ್ತದೆ. ಹಾರಾಟದ ವೇಳೆ ಗರಿಷ್ಠ ಗಂಟೆಗೆ 322 ಕಿ.ಮೀ.ವೇಗದ ಮಿತಿ ಅಳವಡಿಸಲಾಗಿದೆ. ಹಾರಾಟದ ವೇಳೆ ಇಬ್ಬರಿಗೆ ಮಾತ್ರ ಕೂರಲು ಅವಕಾಶವಿರಲಿದೆ.ಹೈಸ್ಪೀಡ್ ‘ಡ್ರೈವ್ ಅಂಡ್ ಫ್ಲೈ’ ಕಾರು: 0 ರಿಂದ 100 ವೇಗವನ್ನು ಪಡೆಯಲು ಕೇವಲ ಎಂಟು ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ಅದರ ಬ್ಲೇಡ್‌ಗಳನ್ನು ಮಡಚಿ ಕಾರಿನ ಪಡೆದುಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಈ ಕಾರು ಕಾರ್ಬನ್ ಫೈಬರ್, ಟೈಟಾನಿಯಂ ಮತ್ತು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಈ ಕಾರಿಗೆ ಬೈಕ್ನಂತಹ ಹ್ಯಾಂಡಲ್ ನೀಡಲಾಗಿರುವುದು ವಿಶೇಷ. ಇದರಿಂದಾಗಿ ರಸ್ತೆ ಮತ್ತು ಹಾರಾಟದ ವೇಳೆ ಸುಲಭವಾಗಿ ನಿಯಂತ್ರಿಸಬಹುದು. ಇದು ಹಾರಾಟ ನಡೆಸಲು 540 ಅಡಿ ರನ್ವೇಯ ಅಗತ್ಯವಿದೆ. ಹಾಗೆಯೇ ಇಳಿಯಲು ಕೇವಲ 100 ಅಡಿ ರನ್ವೇ ಅಗತ್ಯವಿದೆ.