ಹೊಸದಿಲ್ಲಿ: ಏರ್‌ಕಾರ್ ಪ್ರೋಟೋ ಟೈಪ್ 1 ಎಂಬ ಹಾರುವ ಕಾರು, ಸದ್ಯ ದಲ್ಲೇ ಮಾರುಕಟ್ಟೆಗೆ ಇಳಿಯಲು ಸಜ್ಜಾಗಿ ನಿಂತಿದೆ. ನೆಲದ ಮೇಲೆ ಓಡು ವುದರ ಜತೆಗೆ ಇದು ಆಕಾಶ ದಲ್ಲಿ ಹಾರಾಡುತ್ತದೆ.
ಸ್ಲೊವಾಕಿಯಾದ ನಿಟ್ರಾ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಸ್ಲೊವಾಕಿಯಾದ ಬ್ಲಾಟಿಸ್ಲಾವಾ ನಗರದ ವಿಮಾನ ನಿಲ್ದಾಣದ ನಡುವೆ ಇದನ್ನು ಚಲಾಯಿಸಿ ಪರೀಕ್ಷಿಸಲಾಗಿದೆ. ಈ ಎರಡೂ ನಗರಗಳ ನಡುವೆ ಇದ್ದ ಒಂದೂವರೆ ಗಂಟೆಯ ಅವಧಿಯ ಪ್ರಯಾ ಣವನ್ನು ಕೇವಲ 35 ನಿಮಿಷ ಗ ಳಲ್ಲಿ ಕ್ರಮಿಸಿದೆ. ಹಾಗಾಗಿ ಇದರ ವಾಣಿಜ್ಯ ಉತ್ಪಾದನೆ ಸದ್ಯದಲ್ಲೇ ಶುರು ವಾಗುವ ಸಾಧ್ಯತೆಗಳಿವೆ.
ಕಾರಿನ ವಿಶೇಷತೆ :
ಈ ಏರ್‌ಕಾರಿನಲ್ಲಿ 160 ಹಾರ್ಸ್ ಪವರ್ ಸಾಮರ್ಥ್ಯದ ಬಿಎಂಡಬ್ಲ್ಯು ‡ಂಜಿನ್, ಸ್ಥಿರ ಪ್ರೊಪೆಲ್ಲರ್ ಹಾಗೂ ಬ್ಯಾಲಿಸ್ಟಿಕ್ ಪ್ಯಾರಾಚೂಟ್ ಇದೆ. ನಾಗರಿಕ ವಿಮಾನಯಾನ ಆಯೋಗದ ಉಸ್ತುವಾರಿಯಲ್ಲಿ ಏರ್‌ಕಾರ್ ಅನ್ನು ಸುಮಾರು 40 ಗಂಟೆಗಳ ಕಾಲ ಚಲಾಯಿಸಿ, ತಾಂತ್ರಿಕತೆಯನ್ನು ಪರೀಕ್ಷಿಸಲಾಗಿದ್ದು,
ಆಯೋಗದಿಂದ ಸೈ ಎನಿಸಿಕೊಂಡಿದೆ. ಈಗ, ಇದರ ತಯಾರಕರು ಏರ್‌ಕಾರ್ ಪ್ರೋಟೋಟೈಪ್ 2 ಎಂಬ 300 ಹಾರ್ಸ್‌ಪವರ್ ಇಂಜಿನ್ ಸಾಮರ್ಥ್ಯದ ಮತ್ತೂಂದು ಕಾರನ್ನು ಸಿದ್ಧಪಡಿಸಲು ಮುಂದಾಗಿದ್ದಾರೆ.