Advertisement
ಇಲ್ಲಿನ ಮಿನಿ ವಿಧಾನಸೌಧದ ಕೋರ್ಟ್ ಹಾಲ್‌ನಲ್ಲಿ ಸಹಾಯಕ ಕಮಿಷನರ್ ಅವರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು.
ಉಡುಪಿಯ ಕರಾವಳಿ ಬೈಪಾಸ್, ಪಡುಬಿದ್ರಿ, ಕುಂದಾ ಪುರ ಫ್ಲೆ „ಓವರ್ ಕಾಮಗಾರಿಯ ಗುತ್ತಿಗೆ ನವಯುಗ ಕಂಪೆನಿ ವಹಿಸಿಕೊಂಡಿದ್ದು ಏಳೆಂಟು ವರ್ಷಗಳಿಂದ ಫ್ಲೈ ಓವರ್ ಕಾಮಗಾರಿ ಮುಗಿಯದೇ, ಸಮಸ್ಯೆಗಳ ಆಗರವಾಗಿದೆ, ಸಂಚಾರ ವ್ಯವಸ್ಥೆ ಹದಗೆಡುತ್ತಿದೆ ಎಂದು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಎಸಿಯವರು ಕಂಪೆನಿಗೆ ನೋಟಿಸ್ ನೀಡಿದ್ದರು. ಜೂ. 6ರಂದು ವಿಚಾರಣೆ ನಡೆಸಿದಾಗ ಕಂಪೆನಿ ಪರ ವಕೀಲರು ಹಾಜರಾಗಿ ಉತ್ತರಕ್ಕೆ ಅವಕಾಶ ಕೇಳಿದ್ದರು. ಶುಕ್ರವಾರ ನಡೆದ ವಿಚಾರಣೆಯಲ್ಲಿ ಕಂಪೆನಿ ಪರ ವಕೀಲರು, ಕಾಮಗಾರಿ ಕುರಿತು ತಗಾದೆಯೊಂದು ರಾಜ್ಯ ಉಚ್ಚ ನ್ಯಾಯಾಲಯದಲ್ಲಿದೆ. ಆದ್ದರಿಂದ ಎಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಮಾಡುವಂತಿಲ್ಲ ಎಂದರು. ಆದರೆ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಸೆಕ್ಷನ್ 133 ಅಡಿಯಲ್ಲಿ ನೋಟಿಸ್ ನೀಡಿದ್ದು ವಿಚಾರಣೆ ನಡೆಸುವ ಅಧಿಕಾರ ಇದೆ ಎಂದು ಎಸಿಯವರು ಹೇಳಿದರು. ವರದಿಗೆ ಸೂಚನೆ: ಎನ್‌ಐಟಿಕೆಯಿಂದ ಆಗಮಿಸಿದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಿಗೆ ಮೂರೂ ಸ್ಥಳಗಳಿಗೆ ಭೇಟಿ ನೀಡಿ ಸ್ಥಿತಿಗತಿ ಕುರಿತು 10 ದಿನಗಳಲ್ಲಿ ಸಮಗ್ರ ವರದಿ ನೀಡುವಂತೆ ಆದೇಶ ಮಾಡಿದರು. ಹಾಗೂ ಕಂಪೆನಿಯವರು ಸೂಚಿಸುವ ಕಾಮಗಾರಿ ಕುರಿತು ವಿವರಣೆಗೆ ತಾಂತ್ರಿಕ ಸಹಾಯ ನೀಡುವಂತೆ ಸೂಚಿಸಿದರು.
Related Articles
ಬಸೂÅರು ಮೂರುಕೈಯಲ್ಲಿ ಅಂಡರ್‌ಪಾಸ್ ಮಾಡುವ ಕಾಮಗಾರಿ ಹೆಚ್ಚುವರಿ ಕಾಮಗಾರಿ, ಅಂತೆಯೇ ಕುಂದಾಪುರದ ಕಾಮಗಾರಿಯ ವಿನ್ಯಾಸ ಬದಲಾಗಿ ಅನುಮೋದನೆ ದೊರೆಯುವಾಗ ವಿಳಂಬವಾಗಿದೆ, ಭೂಸ್ವಾಧೀನ ಮಾಡಿಕೊಡುವಾಗ ವಿಳಂಬವಾಗಿದೆ. ಈಗ ಮಳೆಗಾಲವಾಗಿದ್ದು, ಕಾಮಗಾರಿ ತುರ್ತಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಕಂಪೆನಿಯವರು ತಿಳಿಸಿದರು. ವಿಸ್ತೃತ ವಿವರಣೆಗೆೆ ಕಾಲಾವಕಾಶ ಕೇಳಿದರು. ಇದರಂತೆ ಜು. 6ರಂದು ಎಸಿಯವರ ನ್ಯಾಯಾಲಯಕ್ಕೆ ಹಾಜರಾಗುವಂತೆ ದಿನಾಂಕ ನಿಗದಿ ಮಾಡಲಾಯಿತು. ಉಡುಪಿ ಕಾಮಗಾರಿಯನ್ನು ಅಕ್ಟೋಬರ್‌ನಲ್ಲಿ, ಕುಂದಾಪುರ ಕಾಮಗಾರಿ ಮಾರ್ಚ್ ಒಳಗೆ ಮುಗಿಸುವುದು ಅಸಾಧ್ಯ ಎಂದು ಕಂಪೆನಿ ಪ್ರತಿನಿಧಿಗಳು ಸೂಚಿಸಿದರು.
Advertisement