Advertisement
ಕಳೆದ ವರ್ಷದ ಜನತಾ ಕರ್ಫ್ಯೂ ವೇಳೆ ಹಣ್ಣು ಮತ್ತು ತರಕಾರಿ ಹಾನಿಗೆ ಹೆಕ್ಕೇರ್‌ಗೆ 15 ಸಾವಿರ ರೂ. ಹಾಗೂ ಹೂವು ಹಾನಿಗೆ ಹೆಕ್ಕೇರ್‌ಗೆ 25 ಸಾವಿರ ರೂ.ನಂತೆ ಪರಿಹಾರ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ 5836 ರೈತರಿಗೆ ಸಂಬಂಧಿಸಿ 3681 ಹೆಕ್ಕೇರ್ ಪ್ರದೇಶದ 5.61 ಕೋಟಿ ರೂ. ಗಳಷ್ಟು ಹಣ್ಣು, ಹೂವು ಮತ್ತು ತರಕಾರಿ ಬೆಳೆ ಹಾನಿಯಾಗಿತ್ತು. ಸರ್ಕಾರದಿಂದ 5.28 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದ್ದು, ಇದರಲ್ಲಿ 4.15 ಕೋಟಿ ರೂ. ಪರಿಹಾರವನ್ನು ಹಂತ ಹಂತವಾಗಿ 4436 ರೈತರಿಗೆ ವಿತರಣೆ ಮಾಡಲಾಗಿದೆ.
Related Articles
Advertisement
ಪುಷ್ಪ ಪರಿಹಾರ: ಜನತಾ ಕರ್ಫ್ಯೂ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 277 ರೈತರಿಗೆ ಸಂಬಂಧಿಸಿ 92.78 ಹೆಕ್ಕೇರ್ ಪ್ರದೇಶದ ಹೂವು ಹಾನಿಯಾಗಿತ್ತು. ಇದಕ್ಕಾಗಿ 20.86 ಲಕ್ಷ ರೂ. ಬಿಡುಗಡೆಯಾಗಿದೆ. ಎಲ್ಲ ರೈತರಿಗೆ ಪರಿಹಾರ ಪಾವತಿಸಲಾಗಿದೆ. ದಾವಣಗೆರೆ ತಾಲೂಕಿನ 34 ರೈತರಿಗೆ 3.92 ಲಕ್ಷ ರೂ., ಚನ್ನಗಿರಿ ತಾಲೂಕಿನ 9 ರೈತರಿಗೆ 78,224 ರೂ., ಹೊನ್ನಾಳಿ ತಾಲೂಕಿನ 109 ರೈತರಿಗೆ 10ಲಕ್ಷ ರೂ., ಹರಿಹರ ತಾಲೂಕಿನ 77 ರೈತರಿಗೆ 4.5 ಲಕ್ಷ ರೂ., ಜಗಳೂರು ತಾಲೂಕಿನ 18 ರೈತರಿಗೆ 6.17 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಹಣ್ಣು, ಹೂವು ಹಾಗೂ ತರಕಾರಿ ಬೆಳೆಗಾರರಿಗೆ ಸರ್ಕಾರ ನೀಡಿದ ಪರಿಹಾರಧನ ಕನಿಷ್ಠವಾಗಿದ್ದರೂ ಇಷ್ಟಾದರೂ ರೈತರಿಗೆ ತಲುಪಿತು ಎಂಬ ಸಮಾಧಾನ ರೈತರದ್ದಾಗಿದೆ. ಈ ವರ್ಷವೂ ಸರ್ಕಾರ ಒಂದಿಷ್ಟು ಪರಿಹಾರ ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಕರ್ಫ್ಯೂ ವೇಳೆ ಕೃಷಿ, ತೋಟಗಾರಿಕೆ ಉತ್ಪನ್ನ ಮಾರಾಟಕ್ಕೆ ಅವಧಿ ವಿಸ್ತರಣೆ ಜತೆಗೆ ಸಾಗಾಟಕ್ಕೆ ಅಡ್ಡಿ ಇಲ್ಲದಿದ್ದರೂ ಕರ್ಫ್ಯೂ ಕಾರಣದಿಂದ ಬೇಡಿಕೆ ಬಹಳಷ್ಟು ಕುಸಿದಿದೆ. ಇದರಿಂದಾಗಿ ಉತ್ಪನ್ನಗಳ ಬೆಲೆಯೂ ಕುಸಿದಿದೆ.
ಕೆಲವೊಂದು ಬೆಳೆಗಳ ಬೆಲೆ ಸಾಗಾಟ ಮಾಡುವ ವೆಚ್ಚವೂ ಭರಿಸದಷ್ಟು ಇಳಿದಿದ್ದು ಬೆಳೆ ಜಮೀನಿನಲ್ಲಿಯೇ ಕೊಳೆಯುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ವರ್ಷವೂ ಪರಿಹಾರ ಘೋಷಿಸುವುದು ಸೂಕ್ತ. ಇ. ಶ್ರೀನಿವಾಸ್, ರೈತ ಮುಖಂಡ
ಹೂವು, ಹಣ್ಣು, ತರಕಾರಿ ಬೆಳೆ ಪರಿಹಾರವಾಗಿ 4.15 ಕೋಟಿ ರೂ. ಪರಿಹಾರವನ್ನು 4436 ರೈತರಿಗೆ ವಿತರಣೆ ಮಾಡಲಾಗಿದೆ. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡದ, ಹಿಸ್ಸೆ ಮಾಲೀಕರ ಸಮಸ್ಯೆ ಇರುವ ಕೆಲವು ರೈತರಿಗೆ ಪಾವತಿಯಾಗುವುದು ಬಾಕಿ ಇದೆ. ಈ ವರ್ಷ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆಯಾದರೂ ಕೃಷಿ, ತೋಟಗಾರಿಕೆ ಉತ್ಪನ್ನ ಮಾರಾಟಕ್ಕೆ ಹೆಚ್ಚಿನ ಅಡ್ಡಿಯಾಗಿಲ್ಲ. ಲಕ್ಷ್ಮೀಕಾಂತ್ ಬೊಮ್ಮನ್ನಾರ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ
–ಎಚ್.ಕೆ. ನಟರಾಜ