Advertisement

ಅರಮನೆಯಲ್ಲಿ ನಾಳೆ ರಾವತ್‌, ಪುನೀತ್‌ಗೆ ಪುಷ್ಪ ನಮನ : ಫ‌ಲಪುಷ್ಪ ಪ್ರದರ್ಶನ

12:31 PM Dec 24, 2021 | Team Udayavani |

ಮೈಸೂರು: ಕ್ರಿಸ್‌ಮಸ್‌ ಹಾಗೂ ಹೊಸವರ್ಷ ಆಚರಣೆ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣ ದಲ್ಲಿ ಡಿ.25 ರಿಂದ ಜನವರಿ 2ರ ವರೆಗೆ ಫ‌ಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಈ ವೇಳೆ ಪ್ರತಿದಿನ ಸಂಜೆ 7 ರಿಂದ 8.30ರ ವರೆಗೆ ಅರಮನೆಗೆ ವಿದ್ಯುತ್‌ ದೀಪಾಲಂಕಾರ ಇರಲಿದೆ. ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಹುತಾತ್ಮರಾದ ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಬಿಪಿನ್‌ ರಾವತ್‌, ಹೃದಯಾ ಘಾತದಿಂದ ನಿಧನರಾದ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಪುಷ್ಪ ನಮನ ಸಲ್ಲಿಸಲಾಗಿದೆ.

Advertisement

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್‌ ಚೋಪ್ರಾ ಅವರ ಮೂರ್ತಿ ಪುಷ್ಪಗಳಿಂದ ಅರಳಿ ನಿಂತಿದೆ. ಅಯೋಧ್ಯೆ ಶ್ರೀರಾಮಮಂದಿರ ಮಾದರಿ ಈ ಬಾರಿ ಪ್ರಮುಖ ಆಕರ್ಷಣೆ ಎನಿಸಿದೆ. ಚಾಮುಂಡೇಶ್ವರಿ ದೇವತೆ, ನಂದಿ ಮತ್ತು ಮಹಿಷಾಸುರನ ಮಾದರಿ ಚಿತ್ರಗಳು, ಮಹಾತ್ಮ ಗಾಂಧೀಜಿ ಅವರು ನಡೆಸಿದ ಕ್ವಿಟ್‌ ಇಂಡಿಯಾ ಚಳವಳಿ ಮಾದರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಾದರಿ ಚಿತ್ರಗಳನ್ನು ಅಲಂಕರಿಸಲಾಗಿದೆ.

ಫ‌ಲಪುಷ್ಪ ಪ್ರದರ್ಶನದಲ್ಲಿ ಸುಮಾರು 15 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂವಿನ ಕುಂಡಗಳು (ಮೆರಿಗೋಲ್ಡ್‌, ಸಾಲ್ವಿಯ, ಡೇಲಿಯ, ಪಿಟೋ ನಿಯ, ಸೇವಂತಿಗೆ, ಕೋಲಿಯಸ್‌, ಸಿಲೋಷಿಯ, ನಸ್ಟರ್‌ಸಿಯಂ, ಆಂಟಿರೈನಂ, ಬೋನ್ಸಾಯ್‌ ಗಿಡಗಳು ಸೇರಿದಂತೆ 32 ಜಾತಿಯ ಹೂವಿನ ಗಿಡಗಳು) ಇವೆ. ಅಂದಾಜು ನಾಲ್ಕು ಲಕ್ಷ ವಿವಿಧ ಹೂವುಗಳಾದ ಗುಲಾಬಿ, ಕ್ರೈಸಾಂಥಿಮಮ್‌, ಪಿಂಗ್‌ಪಾಂಗ್‌, ಕಾರ್ನೆಷನ್‌, ಆಸ್ಟ್ರಮೇರಿಯ, ಜರ್ಬೆರಾ, ಆಂಥೋರಿ ಯಮ್‌, ಆರ್ಕಿಡ್ಸ್‌, ಬ್ಲೂ ಡೈಸಿ, ಡ್ರೆಸಿನಾ ಹಾಗೂ ಇತರೆ ಅಲಂಕಾರಿಕ ಹೂವುಗಳು ಹಾಗೂ ಊಟಿ ಕಟ್‌ ಫ್ಲವರ್‌ಗಳಿಂದ ಅಲಂಕರಿಸಲಾಗಿದೆ.

ಮೈಸೂರು ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಫ‌ಲಪುಷ್ಪ ಪ್ರದರ್ಶನವನ್ನು ಡಿ.25ರಂದು ಉದ್ಘಾಟಿಸುವರು. ಶಾಸಕ ಎಸ್‌.ಎ.ರಾಮದಾಸ್‌, ಸಂಸದ ಪ್ರತಾಪ ಸಿಂಹ, ಮೇಯರ್‌ ಸುನಂದಾ ಫಾಲನೇತ್ರ ಅವರು ಭಾಗವಹಿಸುವರು.

Advertisement

ಸೆಲ್ಫಿ ಪಾಯಿಂಟ್‌, ಫೋಟೋ ಫ್ರೇಮ್‌

ಫ‌ಲಪುಷ್ಪ ಪ್ರದರ್ಶನದಲ್ಲಿ ಜಯಚಾಮರಾಜ ಒಡೆಯರ್‌ ಅವರ ಮಾದರಿ ಚಿತ್ರವನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಮೈಸೂರನ್ನು ಆಳಿದ ಯದುವಂಶದ ದೊರೆಗಳ ಇತಿಹಾಸವನ್ನು ಪರಿಚಯಿಸುವ ಫೋಟೋ ಗ್ಯಾಲರಿ ಇರಲಿದೆ. ಫೋಟೋ ಫ್ರೆàಮ್‌ ಹಾಗೂ ಸೆಲ್ಫಿ ಪಾಯಿಂಟ್‌ ಕೂಡ ಇದೆ. ಅರಮನೆ ಆವರಣದಲ್ಲಿ ಫ‌ಲಪುಷ್ಪ ಪ್ರದರ್ಶನವನ್ನು ಬೆಳಗ್ಗೆ 10 ರಿಂದ ರಾತ್ರಿ 8.30ರ ವರೆಗೆ ವೀಕ್ಷಿಸಬಹುದು. ಕೋವಿಡ್‌ ಎರಡು ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶವಿದೆ.

ಫ‌ಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದೆ. ಫ‌ಲಪುಷ್ಪ ಪ್ರದರ್ಶನ ವೀಕ್ಷಿಸಲು ಪ್ರತಿ ದಿನ 500 ಮಂದಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಅರಮನೆ ಆವರಣದಲ್ಲಿ ಫ‌ಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಸಿರುವುದು. ಟಿ.ಎಸ್‌.ಸುಬ್ರಹ್ಮಣ್ಯ ತಿಳಿಸಿದ್ದಾರೆ

ತಾರತಮ್ಯಕ್ಕೆ  ಹೋಟೆಲ್‌ ಮಾಲಿಕರ ಸಂಘ ಆಕ್ಷೇಪ

ಮೈಸೂರು: ಕೋವಿಡ್‌ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆ ಹಾಗೂ ಸಂಭ್ರಮಾಚರಣೆ ನಿಷೇಧಿಸಿರುವಾಗ ಮೈಸೂರು ಅರಮನೆ ಮಂಡಳಿ ಅರಮನೆ ಆವರಣದಲ್ಲಿ ಫ‌ಲಪುಷ್ಪ ಪ್ರದರ್ಶನ ಏರ್ಪಡಿಸಿರುವ ಕುರಿತು ಮೈಸೂರು ಜಿಲ್ಲಾ ಹೋಟೆಲ್‌ ಮಾಲಿಕರ ಸಂಘ ಬಲವಾಗಿ ಆಕ್ಷೇಪಿಸಿದೆ.

ಮೈಸೂರು ಜಿಲ್ಲಾಧಿಕಾರಿಗಳಿಗೆ ಅವರು ಈ ಕುರಿತು ಗುರುವಾರ ಪತ್ರ ಬರೆದಿದ್ದಾರೆ. ಜಿಲ್ಲಾಡಳಿತಕ್ಕೆ ಒಂದು ಪ್ರತ್ಯೇಕ ಮಾರ್ಗಸೂಚಿಗಳು ಏನಾದರೂ ಬಂದಿದೆಯೇ? ಕ್ರಿಸ್‌ ಮಸ್‌ ಮತ್ತು ಹೊಸ ವರ್ಷ ಸಂಭ್ರಮಾಚರಣೆಗೆ ಹೋಟೆಲ್‌ ಉದ್ಯಮಕ್ಕೆ ಏಕೆ ಈ ರೀತಿಯ ತಾರತಮ್ಯ, ನಿರ್ಬಂಧ ವಿಧಿಸಲಾಗಿದೆ? ಇದು ಸರಿಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಮೈಸೂರು ಅರಮನೆ ಆವರಣದಲ್ಲಿ ಸಾವಿರಾರು ಜನರು ಭಾಗವಹಿಸಲು ಫ‌ಲಪುಷ್ಪ ಪ್ರದರ್ಶನ ಏರ್ಪಡಿಸಿರುವುದು ಎಷ್ಟು ಸಮಂಜಸವೆಂದು ತಿಳಿಯುತ್ತಿಲ್ಲ, ನೂತನ ವರ್ಷ ಸ್ವಾಗತಿಸಿ ಆಚರಿಸಲು ಅಪಾರ ಪ್ರಮಾಣದ ಪಟಾಕಿಗಳು ಸಿಡಿಸಲು ವ್ಯವಸ್ಥೆ ಮಾಡಿರುವುದು ತಿಳಿದು ಬಂದಿದೆ. ಇದು ಯಾವ ರೀತಿಯ ಮಾರ್ಗಸೂಚಿ ಎಂಬುದೇ ತಿಳಿಯುತ್ತಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ. ಹೋಟೆಲ್‌ ಉದ್ಯಮಕ್ಕೆ ವಿಧಿಸಿರುವ ನೂತನ ವರ್ಷದ ಮಾರ್ಗ ಸೂಚಿ ನಿರ್ಬಂಧವನ್ನು ರದ್ದುಪಡಿಸ ಬೇಕೆಂದು ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next