Advertisement

ನೆರವು ನೀಡದಿದ್ದರೆ ಯೆಮೆನ್‌ ಪರಿಸ್ಥಿತಿ ಸದ್ಯದಲ್ಲೇ ಘೋರ

10:53 PM Mar 01, 2022 | Team Udayavani |

ನವದೆಹಲಿ: ಉಕ್ರೇನ್‌ನಲ್ಲೇನೋ ಯುದ್ಧ ನಡೆಯುತ್ತಿದೆ, ಅದು ವಿಶ್ವಾದ್ಯಂತ ಸುದ್ದಿಯಾಗಿದೆ. ಇದರ ನಡುವೆ ಯೆಮೆನ್‌ನಲ್ಲಿ ನಡೆಯುತ್ತಿರುವ ಕ್ಷೋಭೆ ಯ ಅರಿವು ಯಾರಿಗಾದರೂ ಉಂಟೇ?

Advertisement

ಒಂದು ವೇಳೆ ಸಕಾಲದಲ್ಲಿ ಆ ದೇಶಕ್ಕೆ ಮಾನವೀಯ ಆಧಾರದ ಮೇಲೆ ಆರ್ಥಿಕ ನೆರವನ್ನು ನೀಡದೇ ಹೋದರೆ 80 ಲಕ್ಷ ಯೆಮೆನ್‌ ನಾಗರಿಕರು ಸಂಪೂರ್ಣ ಬೀದಿಗೆ ಬರುವ ಸಾಧ್ಯತೆಯಿದೆ.

ಅಂದರೆ ಇವರೆಲ್ಲ ಸಾವಿನಂಚಿಗೆ ಬಂದು ನಿಲ್ಲುತ್ತಾರೆ. ಇವೆಲ್ಲವಕ್ಕೆ ಮೂಲ ಕಾರಣ ಅಮೆರಿಕ ಮತ್ತು ಇರಾನ್‌ ನಡುವೆ ಒಳಗೊಳಗೇ ನಡೆಯುತ್ತಿರುವ ಯುದ್ಧ.

ಇದರಿಂದ ಸಾವಿರಾರು ಮಂದಿ ಸಾವಗೀಡಾಗಿದ್ದಾರೆ, ಇಲ್ಲವೋ ವಲಸೆ ಹೋಗಿದ್ದಾರೆ. ಕಳೆದ 8 ವರ್ಷಗಳಲ್ಲಿ 40 ಲಕ್ಷ ಮಂದಿ ವಿವಿಧ ಸ್ಥಳಕ್ಕೆ ಗೊತ್ತುಗುರಿಯಿಲ್ಲದೇ ವಲಸೆ ಹೋಗಿದ್ದಾರೆ!

ಇದನ್ನೂ ಓದಿ:ಇನ್ನಷ್ಟು ಕಾಂಗ್ರೆಸ್‌ ಜೆಡಿಎಸ್‌ ಮುಖಂಡರು ಬಿಜೆಪಿಗೆ : ಸಿಎಂ ಬೊಮ್ಮಾಯಿ

Advertisement

ಇವುಗಳ ಮಧ್ಯೆ ಹಿಂಸಾಚಾರ ಹೆಚ್ಚುತ್ತಲೇ ಇದೆ. ಈ ವರ್ಷ ಬರೀ ಜನವರಿ ಒಂದರಲ್ಲೇ 650 ಮಂದಿಯ ಕೊಲೆ ಮಾಡಲಾಗಿದೆ. ಸದ್ಯ ಯೆಮೆನ್‌ನ ಶೇ.80 ಮಂದಿ ರಕ್ಷಣೆ ಅಥವಾ ವಿವಿಧ ನೆರವಿನ ಅಗತ್ಯ ಹೊಂದಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಹಸಿವಿನಿಂದಲೇ ಸಾಯುವ ಪರಿಸ್ಥಿತಿ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next