Advertisement

ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ

03:18 PM Aug 18, 2018 | Team Udayavani |

ದೇವದುರ್ಗ: ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೂವಿನಹೆಡಗಿ ಗ್ರಾಮದ ಕೃಷ್ಣಾ ನದಿಗೆ ಹರಿಬಿಡಲಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. 1.66 ಲಕ್ಷ ಕ್ಯೂಸೆಕ್‌ ನೀರು ನದಿಗೆ ಹರಿಬಿಟ್ಟ ಪರಿಣಾಮ ನದಿ ಪಾತ್ರದ ಕೆಲ ಗ್ರಾಮಗಳ ದೇವಸ್ಥಾನಗಳು ಮುಳುಗಡೆಯಾಗಿವೆ.

Advertisement

ರಾಯಚೂರು-ಕಲಬುರಗಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತವಾಗುವ ಭೀತಿ ಎದುರಾಗಿದೆ. ಹೂವಿನಹೆಡಗಿ ಐತಿಹಾಸಿಕ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಶ್ರಾವಣ ಮಾಸದ ವಿಶೇಷ ಪೂಜೆ ಸ್ಥಗಿತಗೊಂಡಿದೆ. ಕೊಪ್ಪರ ಗ್ರಾಮದ ಲಕ್ಷಿŒà ನರಸಿಂಹಸ್ವಾಮಿ ದೇವಸ್ಥಾನದ ಕೆಳಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ನದಿ ನೀರು ಪ್ರವೇಶಿಸಿದೆ. ದೇವಸ್ಥಾನ ಉತ್ತರ ದಿಕ್ಕಿನ ಪಾವಟಿಗೆಗಳು ಸಂಪೂರ್ಣ ಮುಳುಗಿವೆ. ಕೋಣಚಪ್ಪಳಿ ಗ್ರಾಮದ ಅಣೆಮಲ್ಲೇಶ್ವರ ದೇವಸ್ಥಾನವೂ ಮುಳುಗುವ ಭೀತಿಯಲ್ಲಿದ್ದು,
ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಗೂಗಲ್‌ ಬ್ರಿಡ್ಜ್ ಕಂ ಬ್ಯಾರೇಜ್‌ ಬಳಿಯ ನದಿಗೆ ಇಳಿಯದಂತೆ ಮೀನುಗಾರರಿಗೆ
ಎಚ್ಚರಿಕೆ ನೀಡಲಾಗಿದೆ. ನದಿ ದಡದ ಗ್ರಾಮಗಳಲ್ಲಿ ಈಗಾಗಲೇ ಕಂದಾಯ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮವಾಗಿ
ನದಿ ಕಡೆ ಹೋಗದಂತೆ ಎಚ್ಚರಿಕೆ ನೀಡಿದ್ದು, ನದಿ ಸುತ್ತಲೂ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ನದಿ ತಡೆ ಪ್ರವೇಶ ನಿಷೇಧ: ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಈಗಾಗಲೇ 1.66 ಲಕ್ಷ ಕ್ಯೂಸೆಕ್‌ ನೀರು 
ಹರಿಬಿಡಲಾಗಿದೆ. ಹೆಚ್ಚುವರಿ 40 ಕ್ಯೂಸೆಕ್‌ ನೀರು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳಿಗೆ
ಪೂರ್ಣ ಪ್ರಮಾಣದ ಮಾಹಿತಿ ಲಭ್ಯವಾಗುತ್ತಿಲ್ಲ. ಹೀಗಾಗಿ ತಾಲೂಕಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನದಿ ದಂಡೆಯ
ಗ್ರಾಮಗಳ ಜನರಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮೀನುಗಾರರು ನದಿಗೆ ಇಳಿಯದಿರಲು ಎಚ್ಚರಿಸಲಾಗಿದೆ. 

ಪ್ರವಾಹದ ಭೀತಿ: ಮೇಲ್ಭಾಗದಲ್ಲಿ ಬಿಡದೇ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಬಸವಸಾಗರ ಜಲಾಶಯದ ಒಳ ಹರಿವು ಹೆಚ್ಚಾಗುತ್ತಿದ್ದು, ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಡುವುದರಿಂದ ನದಿ ದಂಡೆಯ ಹೇರುಂಡಿ, ವೀರಗೋಟ್‌, ಮೇದರಗೋಳು ಸೇರಿ ಇತರೆ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಪಕ್ಕದ ಗದ್ದೆಗಳಲ್ಲಿ ಬತ್ತದ ನಾಟಿಗಳಿಗೆ ನೀರು ನುಗ್ಗಿದ್ದರಿಂದ ರೈತರು ಆತಂಕ ಪಡುವಂತಾಗಿದೆ.

ಬಸವಸಾಗರ ಜಲಾಶಯದಿಂದ 1.66 ಲಕ್ಷ ಕ್ಯೂಸೆಕ್‌ ನೀರು ಕೃಷ್ಣಾ ನದಿಗೆ ಹರಿಸಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಗ್ರಾಮಗಳ ಗ್ರಾಮಸ್ಥರಿಗೆ ನದಿಗೆ ಹೋಗದಂತೆ ಸೂಚನೆ ನೀಡಲಾಗಿದೆ. ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 
ಶಿವಶರಣಪ್ಪ ಕಟ್ಟೋಳಿ, ತಹಶೀಲ್ದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next