ಮುಂಡ್ಕೂರು: ರಾತ್ರೋರಾತ್ರಿ ಸಂಕಲಕರಿಯ ಶಾಂಭವಿ ನದಿ ಉಕ್ಕಿ ಹರಿದಿದ್ದು ಅಂಗಡಿ, ಮನೆಯ ಹಟ್ಟಿಗಳು ಮುಳುಗಡೆಗೊಂಡಿದ್ದು, ಸಂಕಲಕರಿಯ -ಉಗ್ಗೆದಬೆಟ್ಟು ಸಂಪರ್ಕ, ಪಟ್ಟೆ-ಏಳಿಂಜೆ ಸಂಪರ್ಕ ಕಡಿತಗೊಂಡಿದೆ.
ಅಲ್ಲದೆ ನೀರಿನ ಪ್ರಮಾಣ ಏರಿಕೆಯಾದ ಪರಿಣಾಮ ಶಿವಮೊಗ್ಗ ಮೂಲದ ಟ್ರಾಕ್ಟರ್ ಮಾಲಕ ಮಾಲತೇಶ್ ಅವರ ಕೊಠಡಿ ಪ್ರವಾಹದಿಂದ ಮುಳುಗಡೆಯಾಗಿದ್ದು, ಸಹಸ್ರಾರು ರೂಪಾಯಿ ಮೌಲ್ಯದ ವಸ್ತುಗಳು ನಷ್ಟವಾಗಿದೆ, ಜೊತೆಗೆ ಪಟ್ಟೆ ಕ್ರಾಸ್ ಬಳಿ ಇರುವ ನಂದೀಶ್ ಅವರ ಕೋಳಿ ಅಂಗಡಿ ಕೂಡ ಮುಳುಗಡೆಯಾಗಿದ್ದು ಅಂಗಡಿಯಲ್ಲಿದ್ದ ಕೋಳಿಗಳು ಸಾವನ್ನಪ್ಪಿದೆ.
ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಶೆಟ್ಟಿ, ಸುರೇಶ್ ಶೆಟ್ಟಿ, ಭಾಸ್ಕರ ಶೆಟ್ಟಿ ಯವರ ಮನೆ ಹಟ್ಟಿ ಮುಳುಗಡೆಯಾಗಿದೆ. ಸಾವಿರಕ್ಕೂ ಮಿಕ್ಕಿ ತೆಂಗಿನಕಾಯಿ ನೀರು ಪಾಲಾಗಿದ್ದು ಗೊಬ್ಬರ ಮುಟ್ಟೆ ನೀರಲ್ಲಿ ತೇಲಿ ಹೋಗಿದೆ.
ಮುಂಡ್ಕೂರು ದೊಡ್ಡಮನೆಯ ಕಲ್ಲಾಡಿ ನಾಗಬನ ಮುಳುಗಡೆಯಾಗಿದ್ದು ಹಲವು ವರ್ಷಗಳ ಬಳಿಕ ಕಂಡ ಮಾಯಕದ ಬೊಲ್ಲ ಎಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: Wayanad Landslides: ಮೃತರ ಸಂಖ್ಯೆ 256ಕ್ಕೆ ಏರಿಕೆ… 100ಕ್ಕೂ ಹೆಚ್ಚು ಮಂದಿ ನಾಪತ್ತೆ