ಜಮಖಂಡಿ: ತಾಲೂಕಿನ ಕೃಷ್ಣಾನದಿ ಪ್ರವಾಹದಿಂದ ಸಿಲುಕಿಕೊಂಡು ನೊಂದಿರುವ ವಿವಿಧ ಗ್ರಾಮಗಳ ನಿರಾಶ್ರಿತರ ಕೇಂದ್ರಗಳಿಗೆ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಸಾವಳಗಿ-ಜಮಖಂಡಿ ಬ್ಲಾಕ್ ಕಾಂಗ್ರೆಸ್ ಕಮೀಟಿ ಪದಾಧಿಕಾರಿಗಳು ಭೇಟಿ ನೀಡಿ ಆತ್ಮಸ್ಥೆರ್ಯ ತುಂಬಿದರು.
ಚಿಕ್ಕಪಡಸಲಗಿ ಸೇತುವೆ ವೀಕ್ಷಣೆ ಮಾಡಿದ ನಂತರ ತಹಶೀಲ್ದಾರ್ ಪ್ರಶಾಂತ ಚನಗೊಂಡ ಅವರಿಂದ ಪ್ರವಾಹ ಸುಳಿಯಲ್ಲಿ ಸಿಲುಕಿರುವ ಮತಕ್ಷೇತ್ರದ 27 ಗ್ರಾಮಗಳಲ್ಲಿ ಸ್ಥಿತಿಗತಿಗಳ ಅಂಕಿ-ಅಂಶ ಮಾಹಿತಿ ಪಡೆದುಕೊಂಡರು.
ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಪ್ರವಾಹದಲ್ಲಿ ಸಿಲುಕಿದ ಪ್ರತಿಯೊಂದ ಗ್ರಾಮಕ್ಕೆ, ಗ್ರಾಮದ ಜನರೊಂದಿಗೆ ಭೇಟಿ ಮಾಡಿ ತಾಲೂಕಾಡಳಿತ ನಿರ್ಮಿಸಿರುವ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವೊಲಿಸಲಾಗಿದೆ ಎಂದರು.
ನ್ಯಾಯವಾದಿ ಎನ್.ಎಸ್.ದೇವರವರ, ರಾಜ್ಯ ಜವಳಿ ನಿಗಮ ಮಾಜಿ ಉಪಾಧ್ಯಕ್ಷ ನಜೀರ ಕಂಗನೊಳ್ಳಿ, ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ವರ್ಧಮಾನ ನ್ಯಾಮಗೌಡ, ಶ್ಯಾಮರಾವ ಘಾಟಗೆ, ಮುತ್ತಣ್ಣ ಮೇತ್ರಿ, ಸಿದ್ದು ಮೀಸಿ, ಪದ್ಮಣ್ಣ ಜಕನೂರ, ಅನ್ವರ ಮೋಮಿನ, ಮಹೇಶ ಕೊಳಿ, ಮುಸ್ತಾಕ ಝಂಡೆ ಇದ್ದರು.