Advertisement

ಶೀಘ್ರ ಎಲ್ಲ ರೈತರಿಗೂ ನೆರೆ ಪರಿಹಾರ: ಕಾರಜೋಳ

03:09 PM Jan 02, 2021 | Team Udayavani |

ಕಲಬುರಗಿ: ಇದೇ ಜನವರಿ ಅಂತ್ಯದೊಳಗೆ ಅತಿವೃಷ್ಟಿಯಿಂದ ಹಾನಿಗೊಳಗಾದ ಎಲ್ಲ ರೈತರಿಗೆಶೇ.100ರಷ್ಟು ಬೆಳೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಅಕ್ಟೋಬರ್‌ 13ರಿಂದ21ರವರೆಗೆ ಉಂಟಾದ ಅತಿವೃಷ್ಟಿಯಿಂದಾಗಿ 13,125ಮನೆಗಳು ಹಾನಿಯಾಗಿವೆ. ಈಗಾಗಲೇ 13.12 ಕೋಟಿರೂ.ಗಳ ಪರಿಹಾರವನ್ನುಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಪ್ರವಾಹದಿಂದ ಹಾಳಾದಮನೆಗಳನ್ನು ದುರಸ್ತಿಮಾಡಲಾಗುವುದು ಹಾಗಸಂಪೂರ್ಣ ಹಾಳಾಗಿ ಕುಸಿದು ಬಿದ್ದಿರುವ ಮನೆಗಳನ್ನು ಕಟ್ಟಲು ಮೊದಲ ಕಂತಿನಹಣವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

ಪ್ರವಾಹದಿಂದ 2.92 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎನ್‌ ಡಿಆರ್‌ಎಫ್‌ ಹಾಗೂ ಎಸ್‌ ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಅಲ್ಲದೇ, 1,04,044 ರೈತರಿಗೆ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಗಿದ್ದು,ಇನ್ನುಳಿದ 1.92 ಲಕ್ಷ ರೈತರಿಗೆ ಶೀಘ್ರವೇ ಬಿಡುಗಡೆಮಾಡಲಾಗುವುದು. ಜಾನುವಾರುಗಳ ಹಾನಿ ಪರಿಹಾರ 36.16 ಲಕ್ಷ ರೂ. ವಿತರಿಸಲಾಗಿದೆ ಎಂದು ಅವರು ಹೇಳಿದರು.

ರಸ್ತೆಗಳು ಹಾಗೂ ಸೇತುವೆಗಳು, ಅಂಗನವಾಡಿ ಕೇಂದ್ರಗಳು ಸೇರಿ ಅನೇಕ ಕಟ್ಟಡಗಳುದುರಸ್ತಿಗೆ 28.53 ಕೋಟಿ ರೂ.ಗಳ ತಕ್ಷಣದ ಪರಿಹಾರನೀಡಲಾಗಿದೆ. ರಾಜ್ಯ ಸರ್ಕಾರ 2019ರ ಜುಲೈನಿಂದಇಲ್ಲಿಯವರೆಗೆ 35 ಇಲಾಖೆಗಳಿಗೆ 10,732 ಕೋಟಿ ರೂ. ಗಳ ಅನುದಾನ ನೀಡಿದ್ದು, ಇದರಲ್ಲಿ 10,105 ಕೋಟಿರೂ.ಗಳನ್ನು ಖರ್ಚು ಮಾಡಲಾಗಿದೆ. ಇನ್ನುಳಿದ 626 ಕೋಟಿ ರೂ.ಗಳನ್ನು ಮುಂದಿನ ದಿನಗಳಲ್ಲಿ ವಿವಿಧ ಕಾಮಗಾರಿಗಳಿಗಾಗಿ ಬಳಸಲಾಗುವುದು ಎಂದು ಅವರು ವಿವರಿಸಿದರು. ಈಗಾಗಲೇ ಬೆಂಬಲ ಬೆಲೆ ಯೋಜನೆಯಡಿ 173 ತೊಗರಿ ಕೇಂದ್ರಗಳು ಆರಂಭವಾಗಿದ್ದು, 23 ಸಾವಿರರೈತರು ನೋಂದಣಿ ಮಾಡಿಕೊಂಡಿದ್ದು, ಈ ತಿಂಗಳ ಪೂರ್ತಿ ಖರೀದಿ ಪ್ರಕ್ರಿಯೆ ಜರುಗಲಿದೆ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯಕ್ಕೆಕಾಯಂ ಕುಲಪತಿನೇಮಕದ ಬಗ್ಗೆಸರ್ಕಾರದ ಮಟ್ಟದಲ್ಲಿಚರ್ಚಿಸಲಾಗುತ್ತದೆ.ಈ ಬಗ್ಗೆ ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪನವರಗಮನಕ್ಕೂತರಲಾಗುವುದು.ಅದಷ್ಟು ಶೀಘ್ರವೇ ಹೊಸಕುಲಪತಿ ನೇಮಕಕ್ಕೆ ಕ್ರಮ ವಹಿಸಲಾಗುವುದು.  –ಗೋವಿಂದ ಕಾರಜೋಳ, ಡಿಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next