Advertisement
ಈ ಎಲ್ಲ ಕ್ರಾಂತಿಯ ಹಿಂದೆ ಇರುವ ಮೇಷ್ಟ್ರು, ವೀರಣ್ಣ ಮಡಿವಾಳರ. ಕನ್ನಡ ಸಾಹಿತ್ಯದಲ್ಲೂ ಇವರ ಕೊಡುಗೆ ಕಾಣಬಹುದು. ಮೊನ್ನೆ ಇದೇ ಮೇಷ್ಟ್ರು, ಪ್ರವಾಹದ ಹೊತ್ತಿನಲ್ಲಿ ಕೈಕಟ್ಟಿ ಕೂರಲಿಲ್ಲ. ಶಾಲೆಯನ್ನು ಚೆಂದಗಾಣಿಸಲು ಯಾವ ಫೇಸ್‌ಬುಕ್ ಗೋಡೆ ನೆರವಾಗಿತ್ತೋ, ಅದೇ ಗೋಡೆಯ ಮೇಲೆ ತಮ್ಮ ನೆಲದ ಸಂಕಟ ಹಂಚಿಕೊಂಡರು. ಪ್ರವಾಹ ಪೀಡಿತ ಹಳ್ಳಿಗಳಿಗೆ ಹೋಗಿ, ಒಬ್ಬ ಸುದ್ದಿಗಾರನಂತೆ ಲೈವ್ ವಿಡಿಯೋಗಳ ಮೂಲಕ ಜನರ ಸಂತ್ರಸ್ತ ಬದುಕನ್ನು ಎಲ್ಲರ ಮುಂದಿಟ್ಟರು. ನೆರವು, ಪ್ರವಾಹದಂತೆ ಬಂತು. ಹಾಗೆ ಬಂದ ನೆರವನ್ನು, ಕಷ್ಟದಲ್ಲಿದ್ದ ಜನರಿಗೆ ಮುಟ್ಟಿಸಿದರು. ಆಹಾರ ಧಾನ್ಯ, ಉಡುಪು, ಪುಸ್ತಕ, ಬ್ಯಾಗುಗಳನ್ನು ಸಲ್ಲ ಬೇಕಾದವರಿಗೆ ಸಲ್ಲಿಸಿ, ಪುಣ್ಯ ಕಟ್ಟಿಕೊಂಡರು.– ಸೋಮು ಕುದರಿಹಾಳ