Advertisement

ಐತಿಹಾಸಿಕ ಬೌದ್ಧ ಸ್ತೂಪ ನೆಲೆ, ಚಂದ್ರಲಾ ಪರಮೇಶ್ವರಿ ದೇವಾಲಯ ಸಂಪೂರ್ಣ ಜಲಾವೃತ

04:15 PM Oct 16, 2020 | keerthan |

ಕಲಬುರಗಿ: ಭೀಮಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಚಿತ್ತಾಪುರ ತಾಲೂಕಿನ ಸನ್ನತಿ ಬಳಿ ನದಿಯ ದಡದಲ್ಲಿರುವ ಕನಗನಹಳ್ಳಿ ಗ್ರಾಮ ಪರಿಸರದ ಐತಿಹಾಸಿಕ ಬೌದ್ಧ ಸ್ತೂಪ ನೆಲೆ ಹಾಗೂ ಚಂದ್ರಲಾ ಪರಮೇಶ್ವರಿ ದೇವಾಲಯ ಸಂಪೂರ್ಣ ಜಲಾವೃತಗೊಂಡಿದೆ.

Advertisement

ಭೀಮಾ ಬ್ಯಾರೇಜ್‍ನ ಎಲ್ಲಾ ಗೇಟ್‍ಗಳ ಮೂಲಕ ನೀರು ಹೊರ ಬಿಡಲಾಗುತ್ತಿರುವುದರಿಂದ ಉಂಟಾದ ಪ್ರವಾಹವು ವ್ಯಾಪಕವಾಗಿ ವಿಸ್ತರಿಸುತ್ತಿದೆ. ಕ್ರಿ.ಪೂ. 3ನೇ ಶತಮಾನಕ್ಕೆ ಸೇರಿದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕನ ಕಾಲದ ಬೌದ್ಧ ಚರಿತ್ರೆ ಸಾರುವ ಸಾವಿರಾರು ಬೌದ್ಧ ಶಿಲ್ಪಕಲೆಗಳು, ಬುದ್ಧ ವಿಹಾರ, ಬುದ್ಧನ ಮೂರ್ತಿಗಳು, ಪಾಲಿ ಭಾಷೆಯ ಶಿಲಾ ಶಾಸನ ಹೀಗೆ ಸಾವಿರಾರು ಬೌದ್ಧ ಕುರುಹುಗಳಿರುವ ಜಾಗಕ್ಕೆ ಪ್ರವಾಹದ ನೀರು ನುಗ್ಗಿದೆ . ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿರುವ ಈ ಬೌದ್ಧ ನೆಲೆಯೀಗ ಜಲಪ್ರವಾಹಕ್ಕೆ ಸಿಲುಕಿದೆ.

ಇದನ್ನೂ ಓದಿ:ಡೋಣಿ ನದಿ ಪ್ರವಾಹದಲ್ಲಿ ಸಿಲುಕಿದ್ದ ಮಹಾರಾಷ್ಟ್ರದ 7 ಜನ ಕಾರ್ಮಿಕರ ರಕ್ಷಣೆ

ಏಕಾಏಕಿ ಪ್ರವಾಹ ಉಂಟಾಗಿ ಬೌದ್ಧ ಸ್ತೂಪ ತಾಣವೀಗ‌ ನೀರಿನಲ್ಲಿ ನಿಂತಿದೆ.  ಸನ್ನತಿ ಗ್ರಾಮ ಮತ್ತು ಬೌದ್ಧ ಸ್ತೂಪ ಸ್ಥಳದ ಜತೆಗೆ ಶ್ರೀಚಂದ್ರಲಾ ಪರಮೇಶ್ವರಿ ದೇವಸ್ಥಾನ ಮುಳುಗಡೆಯಾಗಿದೆ. ಅದೇ ರೀತಿ ಇತರೆಡೆ ಪ್ರವಾಹ ಉಂಟಾಗಿದ್ದು, ಭೀಮಾ ನದಿ ದಡದ ಎಂಟು ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತಗೊಂಡಿದ್ದಾರೆ. ಕಂದಾಯ ಸಚಿವ ಆರ್. ಅಶೋಕ ಇಂದು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next