Advertisement

ಪ್ರವಾಹ ಸಂತ್ರಸ್ಥರಿಗೆ ಕೂಡಲೇ ಪರಿಹಾರ ನೀಡಿ: ಕೇಂದ್ರಕ್ಕೆ ವಾಟಾಳ್ ನಾಗರಾಜ್ ಆಗ್ರಹ

09:19 AM Aug 18, 2019 | Team Udayavani |

ಗದಗ: ರಾಜ್ಯದಲ್ಲಿ ಜಲಪ್ರಳಯ ಆಗಿದ್ದು, ಲಕ್ಷಾಂತರ ಮನೆಗಳು ನೀರಿನಲ್ಲಿ ಮುಳುಗಡೆಯಾಗಿ ಜನ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕೇಂದ್ರದ ಸಚಿವರು ರಾಜ್ಯಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದರೂ ಹಣ ಬಿಡುಗಡೆ ಮಾಡದೇ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

Advertisement

ಕರ್ನಾಟಕ ಹೊರತಾಗಿ ಇತರೆ ರಾಜ್ಯಗಳಿಗೆ ಪ್ರಧಾನಿಗಳೇ ಹಣ ಕೊಡುತ್ತಾರೆ. ಮುಖ್ಯಮಂತ್ರಿಗಳು ಭೇಟಿ ಮಾಡಿದರೂ, ಹಣ ಬಿಡುಗಡೆ ಮಾಡಿಲ್ಲ. ಇದು ರಾಜ್ಯದ ಮುಖ್ಯಮಂತ್ರಿ, ಕರುನಾಡಿನ ಜನತೆಗೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವಾರದಲ್ಲಿ ಪ್ರಧಾನಿ ರಾಜ್ಯಕ್ಕೆ ಬಂದು ನೆರೆ ವೀಕ್ಷಣೆ ಮಾಡಬೇಕು. ಮೊದಲ ಕಂತಿನಲ್ಲಿ 50 ಸಾವಿರ ಕೋಟಿ ರೂ. ಎರಡನೇ ಕಂತಿನಲ್ಲಿ 50 ಸಾವಿರ ಕೋಟಿ ರೂ. ಒಟ್ಟಾರೆ 1 ಲಕ್ಷ ಕೋಟಿ ರೂ, ಪರಿಹಾರ ಬಿಡುಗಡೆ ಮಾಡಬೇಕು. ಈ ಬೇಡಿಕೆಗೆ ಸ್ಪಂದಿಸದಿದ್ದರೆ ರಾಜ್ಯದ ಸಂಸದರು ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ನವ ಕರ್ನಾಟಕ ನಿರ್ಮಾಣಕ್ಕಾಗಿ ಆಗ್ರಹಿಸಿ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಆ.18ರಂದು ಧರಣಿ ನಡೆಸಲಾಗುವುದೆಂದು ಇದೆ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next