Advertisement

ಗಂಗಾವತಿಯಲ್ಲಿ ಮಳೆಗಾಳಿಗೆ ನೆಲಕ್ಕುರುಳಿದ ಭತ್ತದ ಬೆಳೆ: ಅಪಾರ ನಷ್ಟ

12:00 PM Sep 26, 2020 | keerthan |

ಗಂಗಾವತಿ: ಕಳೆದ ರಾತ್ರಿ ಸುರಿದ ಮಳೆಗಾಳಿಗೆ ಆನೆಗೊಂದಿ ಹಳೆ ಮಂಡಲ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ನೆಲಕ್ಕುರುಳಿ ಲಕ್ಷಾಂತರ ರೂ.ನಷ್ಟವಾಗಿದೆ.

Advertisement

ಶುಕ್ರವಾರ ಮಧ್ಯರಾತ್ರಿಯಿಂದ ಆರಂಭವಾಗಿರುವ ಮಳೆ ಬಿಟ್ಟು ಬಿಡದೇ ಸುರಿಯುತ್ತಿದೆ. ಆನೆಗೊಂದಿ, ಸಂಗಾಪೂರ, ಸಾಣಾಪೂರ,ಹನುಮನಹಳ್ಳಿ, ಜಂಗ್ಲಿ ರಂಗಾಪೂರ, ವಿರುಪಾಪೂರಗಡ್ಡಿ ಮತ್ತು ತಿರುಮಲಾಪೂರ ಗ್ರಾಮಗಳ ವ್ಯಾಪ್ತಿಯಲ್ಲಿ ಮುಂಗಡವಾಗಿ ನಾಟಿ ಮಾಡಲಾಗಿದ್ದ ಸೋನಾ ಮಸೂರಿ ಭತ್ತದ ಬೆಳೆ ಕಾಳುಕಟ್ಟುವ ಹಂತದಲ್ಲಿದ್ದು ಶುಕ್ರವಾರದ ಮಳೆ ನೂರಾರು ಎಕರೆಯ ಭತ್ತ ಸಂಪೂರ್ಣವಾಗಿ ನೆಲಕ್ಕುರುಳಿದ್ದು ರೈತರಿಗೆ ಲಕ್ಷಾಂತರ ರೂ.ನಷ್ಟವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಬೆನ್ನಲ್ಲೇ ಬಿಎಸ್‌ವೈ-ಎಚ್‌ಡಿಕೆ ಭೇಟಿ: JDS ಬೆಂಬಲ ಯಾರಿಗೆ?

ಕಳೆದ ವರ್ಷದ ಭತ್ತದ ಬೆಳೆಗೆ ಸರಿಯಾದ ದರ ಸಿಗದೇ‌ ಬಹುತೇಕ‌ ಭತ್ತವನ್ನು ಮಾರಾಟ ಮಾಡದೇ ಸಂಗ್ರಹ ಮಾಡಿದ್ದು ಪುನಹ ಪ್ರಕೃತಿ ವಿಕೋಪದ ಕಾರಣಕ್ಕಾಗಿ ಮಳೆಗಾಳಿಗೆ ಭತ್ತ ನೆಲಕ್ಕುರುಳಿ ನಷ್ಟವುಂಟಾಗಿದೆ.

Advertisement

ರೈತರ ನೆರವಿಗೆ ಮನವಿ: ಮಳೆಗಾಳಿಗೆ ನೆಲಕ್ಕೆ ಬಿದ್ದಿರುವ ಭತ್ತದ ಬೆಳೆಗೆ ಸಾವಿರಾರು ರೂ. ಖರ್ಚು ಮಾಡಿದ್ದು ಮಳೆಯಿಂದ ನಷ್ಟವಾಗಿದೆ. ಕೂಡಲೇ ಕಂದಾಯ ಮತ್ತು‌ ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿ‌ ಸರ್ವೇ ನಡೆಸಿ ನಷ್ಟಪರಿಹಾರ ದೊರಕಿಸಬೇಕು. ಸರಕಾರ ರೈತರ ನೆರವಿಗೆ ಬರಬೇಕೆಂದು ನಷ್ಟಗೊಂಡಿರುವ ರೈತರ ಪರವಾಗಿ ಶರೀಪ್ ಪಟವಾರಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next