Advertisement

ರಾಯಚೂರು: ಮಸ್ಕಿಹಳ್ಳ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ ವೇಳೆ ಹಗ್ಗ ತುಂಡಾಗಿ ಓರ್ವ ನೀರುಪಾಲು

03:11 PM Oct 11, 2020 | keerthan |

ರಾಯಚೂರು: ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಂದ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು, ಮಸ್ಕಿ ಹಳ್ಳದ ಪ್ರವಾಹಕ್ಕೆ ಯುವಕನೋರ್ವ ಕೊಚ್ಚಿಹೋದ ಘಟನೆ ನಡೆದಿದೆ. ಪ್ರವಾಹಕ್ಕೆ ಮತ್ತೊಬ್ಬ ಯುವಕನನ್ನು ರಕ್ಷಿಸಲಾಗಿದೆ.

Advertisement

ಹಳ್ಳಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿಸಿದ ಪರಿಣಾಮ ಯುವಕರು ಪ್ರವಾಹಕ್ಕೆ ಸಿಲುಕಿದ್ದರು. ರಕ್ಷಣೆ ವೇಳೆ ಹಗ್ಗ ಕಡಿದು ಹೋಗಿದ್ದು ಓರ್ವ ಯುವಕ ಪ್ರವಾಹದಲ್ಲಿ ಸಿಲಿಕಿ ಕೊಚ್ಚಿ ಹೋಗಿದ್ದಾನೆ. ರಕ್ಷಣೆ ಹೋಗಿದ್ದ ಮೂವರು ಈಜಿ ದಡ ಸೇರಿದ್ದಾರೆ. ತಾಲ್ಲೂಕು ಆಡಳಿತ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮಸ್ಕಿನಾಲಾ ಜಲಾಶಯಕ್ಕೆ ಒಳ ಹರಿವು ಮತ್ತೆ ಹೆಚ್ಚಾಗಿದೆ. ಸತತ ಮಳೆಯಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ 2100 ಕ್ಯೂಸೆಕ್ ಗಡಿ ದಾಟಿದ್ದು, ಜಲಾಶಯದ ನಾಲ್ಕು ಗೇಟುಗಳ ಮೂಲಕ 1600 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಮಸ್ಕಿ, ಪೋತ್ನಾಳ ಹಳ್ಳಗಳು ತುಂಬಿ ಹರಿಯುತ್ತಿದ್ದು, ಜನ ಜಾನುವಾರುಗಳನ್ನು ಹಳ್ಳಕ್ಕೆ ಬಿಡದಂತೆ ಸೂಚನೆ ನೀಡಲಾಗಿದೆ.

ರಾತ್ರಿಯಿಂದ ಈವರೆಗೂ ಎಡೆಬಿಡದೆ ಮಳೆ ಸುರಿಯುತ್ತಿದ್ದು ನಾನಾ ಅವಾಂತರ ಸೃಷ್ಟಿಸಿದೆ. ನಗರದ ತಗ್ಗು ಪ್ರದೇಶಗಳಿಗೆ ಮತ್ತೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹತ್ತಿ ಕಾಯಿ ಬಿಟ್ಟಿರುವ ಪರಿಣಾಮ ನೆಲಕ್ಕೆ ಒರಗಿ ಕಪ್ಪಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next