Advertisement

ಉಕ್ಕಿ ಹರಿಯುತ್ತಿರುವ ಘಟಪ್ರಭೆ : ಮೂರು ಸೇತುವೆಗಳು ಜಲಾವೃತ :ಪ್ರವಾಹ ಭೀತಿಯಲ್ಲಿ ಗ್ರಾಮಸ್ಥರು

07:12 PM Jun 17, 2021 | Team Udayavani |

ಮಹಾಲಿಂಗಪುರ: ಬಾಗಲಕೋಟ ಜಿಲ್ಲೆಯ ಮುಧೋಳ ಮತ್ತು ನೂತನ ರಬಕ” ಬನಹಟ್ಟಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ನೀರಿಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ, ಆದರೂ ಈ ಭಾಗದ ಜನತೆಗೆ ಪ್ರವಾಹದ ಪರಿಣಾಮ ಬೀರಿದೆ.

Advertisement

ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಭಾರಿ ಮಳೆಂದಾಗಿ “ರಣ್ಯಕೇಶಿ ನದಿಯು ತುಂಬಿ ಹರಿದು ಧೂಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಗುರುವಾರ “ಡಕಲ್ ಜಲಾಶಯಕ್ಕೆ ಸುಮಾರು 17114 ಕ್ಯೂಸೆಕ್ ಒಳಹರಿವು ಇದೆ. “ಡಕಲ್ ಜಲಾಶಯದಿಂದ ಘಟಪ್ರಭಾ ನದಿ ಮತ್ತು ಕಾಲುವೆಗಳಿಗೆ ನೀರನ್ನು ಬಿಟ್ಟಿರುವದಿಲ್ಲ. ಗುರುವಾರ ಮಧ್ಯಾಹ್ನದ ಮಾಹಿತಿಯಂತೆ ಧೂಪದಾಳ ಜಲಾಶಯಕ್ಕೆ ಸುಮಾರು 23 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಅದರಲ್ಲಿ ಧೂಪದಾಳ ಜಲಾಶಯದಿಂದ ಸುಮಾರು 20100 ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಹಾಗೂ ಸುಮಾರು 1200 ಕ್ಯೂಸೆಕ್ ನೀರನ್ನು ಜಿಎಲ್‌ಬಿಸಿ ಕಾಲುವೆಗೆ ಹರಿಸಲಾಗುತ್ತಿದೆ.

ಮತ್ತೇ ಪ್ರವಾಹ ಭೀತಿ :
ಈ ಭಾಗದ ಜನರ ದುರ್ಧೈವವೂ, ಸುದೈವವೂ ಗೊತ್ತಿಲ್ಲ. ಮಳೆಯಾಗದಿದ್ದರು ಸಹ ಬೆಳಗಾ” ಗಡಿಭಾಗ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಂದಾಗಿ ಘಟಪ್ರಭೆಗೆ ಬರುವ ಪ್ರವಾಹದಿಂದ ನದಿಯ ಇಕ್ಕೆಲಗಳಲ್ಲಿಯ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುತ್ತಿವೆ. ಇದು ನಿಜಕ್ಕೂ ಈ ಭಾಗದಲ್ಲಿ ಪ್ರತಿವರ್ಷ ಉಂಟಾಗುವ ಪ್ರವಾಹದ ಪರಿಣಾಮ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ :ಹೆಬ್ರಿ ಸುತ್ತಮುತ್ತ ಭಾರೀ ಗಾಳಿ ಮಳೆ, ಬೃಹತ್ ಮರಗಳು ಧರೆಗೆ ,ಅಪಾರ ಹಾನಿ

ಮೂರು ಸೇತುವೆಗಳು ಬಂದ್:
ಘಟಪ್ರಭಾ ನದಿಯು ಉಕ್ಕಿ ಹರಿಯುತ್ತಿರುವದರಿಂದ ಬುಧವಾರ ರಾತ್ರಿಯಿಂದಲೇ ಸಮೀಪದ ನಂದಗಾಂವ-ಅವರಾದಿ ಮತ್ತು ಅಕ್ಕಿಮರಡಿ” ಎರಡು ಸೇತುವೆಗಳು ಬುಧವಾರ ರಾತ್ರಿಯಿಂದ, ಢವಳೇಶ್ವರ ಸೇತುವೆ ಗುರುವಾರ ಮಧ್ಯಾಹ್ನದಿಂದ ಸಂಪೂರ್ಣ ಜಲಾವೃತವಾಗಿ ಈ ಭಾಗದಲ್ಲಿನ ಬಾಗಲಕೋಟ-ಬೆಳಗಾವಿ” ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ.

Advertisement

ಢವಳೇಶ್ವರ, ನಂದಗಾಂವ ಸೇತುವೆಗಳು ಜಲಾವೃತವಾದ ಕಾರಣ ಬೆಳಗಾವಿ” ಜಿಲ್ಲೆ ಮೂಡಲಗಿ ತಾಲೂಕಿನ ಅವರಾದಿ, ಯರಗುದ್ರಿ, ತಿಮ್ಮಾಪೂರ, ಅರಳಿಮಟ್ಟಿ, ವೆಂಕಟಾಪೂರ, ಬೀಸನಕೊಪ್ಪ, ಢವಳೇಶ್ವರ, ಕುಲಗೋಡ, ಹುಣಶ್ಯಾಳಪಿವಾಯ್ ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಈ ಗ್ರಾಮಗಳ ಜನತೆ ದಿನನಿತ್ಯ ವ್ಯಾಪಾರ ವಹಿವಾಟುಗಳಿಗೆ ಮಹಾಲಿಂಗಪುರವನ್ನೆ ಅವಲಂಬಿಸಿರುವ ಕಾರಣ ತೊಂದರೆ ಅನುಭವಿಸುವಂತಾಗಿದೆ.

ಆತಂಕದಲ್ಲಿ ಗ್ರಾಮಸ್ಥರು :
2019ರಲ್ಲಿ ಜುಲೈ 10ರಂದು, 2020ರಲ್ಲಿ ಜುಲೈ 9ರಂದು ಪ್ರವಾಹ ಬಂದು ಮೊದಲ ಬಾರಿಗೆ ಸೇತುವೆಗಳು ಮುಳುಗಡೆಯಾಗಿದ್ದವು. ಆದರೆ ಈ ವರ್ಷ ಒಂದು ತಿಂಗಳ ಮೊದಲೇ ಪ್ರವಾಹ ಪರಿಣಾಮ ಪ್ರಾರಂಭವಾಗಿರುವ ಕಾರಣ, ಮಹಾರಾಷ್ಟ್ರ ಮತ್ತು ಬೆಳಗಾವಿ” ಗಡಿಭಾಗದಲ್ಲಿ ಮಳೆ ಮುಂದುವರೆದರೆ 2019ರಂತೆ ಜುಲೈ-ಅಗಸ್ಟ್ ತಿಂಗಳಲ್ಲಿ ಮಹಾಪ್ರವಾಹ ಬರುತ್ತದೆ ಎಂಬ ಆತಂಕವು ನದಿ ಪಾತ್ರದ ಗ್ರಾಮಸ್ಥರನ್ನು ಕಾಡುತ್ತಿದೆ.

– ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next