Advertisement
ಹೌದು, ಅಂದುಕೊಂಡಂತೆ ನಡೆದರೆ ನವೆಂಬರ್ ತಿಂಗಳಿನ ಕೊನೆ ವಾರದಿಂದ ಡಿಸೆಂಬರ್ ತಿಂಗಳಿನ ಕೊನೆವರೆಗೂ ಜಿಲ್ಲೆಯ ಆಲೊ³àನ್ಸೋ ಮಾವು ತೋಟಗಳು ಚೆನ್ನಾಗಿ ಚಿಗುರೊಡೆದು ಹೂವು ಕಟ್ಟಬೇಕು. ಈ ಹಿಂದಿನ ಸತತ ಮೂರು ವರ್ಷಗಳ ಕಾಲ ಆಲ್ಪೋನ್ಸೋ ಮಾವು ಬೆಳೆಗಾರರು ಮಳೆ, ಇಬ್ಬನಿ, ಜಿಗಿ ರೋಗ ಮತ್ತು ಕೊರೊನಾ ಲಾಕ್‌ಡೌನ್‌ನಿಂದ ಮಾರುಕಟ್ಟೆ ಸಮಸ್ಯೆ ಎದುರಿಸಿ ನಷ್ಟ ಅನುಭವಿಸಿದ್ದಾರೆ. ಈ ವರ್ಷವಾದರೂ ಮಾವಿನ ತೋಟಗಳು ರೈತರ ಕೈ ಹಿಡಿಯಬಹುದು ಎನ್ನುವ ನಿರೀಕ್ಷೆ ಮಾವಿನ ಚಿಗುರಿನಷ್ಟೇ ಅಚಲವಾಗಿದೆ. ಅಂದ ಹಾಗೆ ಪ್ರತಿವರ್ಷ ಡಿಸೆಂಬರ್ ತಿಂಗಳಿನಲ್ಲಿ ಚಿಗುರೊಡೆಯುತ್ತಿದ್ದ ಮಾವಿನ ತೋಟಗಳು ಈ ಬಾರಿ ಒಂದು ತಿಂಗಳು ಮುಂಚಿತವಾಗಿಯೇ ಹಚ್ಚಹಸಿರಿನ ಚಿಗುರು ಹೊದ್ದು ನಿಂತಿದ್ದು, ಇದರಿಂದ ಹೂವು ಕಟ್ಟಲು ಕೂಡ ಹೆಚ್ಚು ಅನುಕೂಲವೇ ಆಗಲಿದೆ. ಹೀಗಾಗಿ ರೈತರು ಮಾವಿನ ತೋಟ ನೋಡಿ ಮಂದಹಾಸ ಬೀರಿದ್ದಾರೆ.
Related Articles
ಧಾರವಾಡ ಜಿಲ್ಲೆ ರಾಜ್ಯದಲ್ಲಿಯೇ ಅತೀ ಹೆಚ್ಚು ಆಲ್ಪೋನ್ಸೋ ಮಾವಿನ ಹಣ್ಣು ಉತ್ಪಾದಿಸುವ ಜಿಲ್ಲೆ. ಇಲ್ಲಿ 10,568 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಉತ್ತಮ ಫಸಲು ಬಂದರೆ 87ರಿಂದ 98 ಸಾವಿರ ಟನ್ ಮಾವು ಉತ್ಪಾದನೆಯಾಗುತ್ತಿತ್ತು. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 5465 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, 76980 ಟನ್ ಉತ್ಪಾದನೆ ನಿರೀಕ್ಷೆ ಮಾಡಲಾಗಿದೆ. ಉತ್ತರ ಕರ್ನಾಟಕದ ಶೇ.92 ಪ್ರಮಾಣದ ಮಾವು ಉತ್ಪಾದನೆ ಈ ಎರಡೇ ಜಿಲ್ಲೆಗಳಲ್ಲಿ ಆಗುತ್ತಿದ್ದು, ಇನ್ನುಳಿದ ಶೇ.8ರಲ್ಲಿ ವಿಜಯಪುರ, ಬಾಗಲಕೋಟೆ, ಬೀದರ, ಬಳ್ಳಾರಿ ಇತರ ಜಿಲ್ಲೆಗಳು ಸೇರುತ್ತವೆ. ಇನ್ನು ರಾಜ್ಯದ ಲೆಕ್ಕದಲ್ಲಿ ಶೇ.50 ಮಾವು ಈ ಎರಡೇ ಜಿಲ್ಲೆಗಳಲ್ಲಿ ಉತ್ಪಾದನೆಯಾಗುತ್ತಿದೆ.
Advertisement
ಲಾಕ್‌ಡೌನ್‌ಗೆ ನಲುಗಿದ್ದ ರೈತರುಆಲ್ಪೋನ್ಸೋ ಮಾವು ಮಲ್ಲಿಗೆ ಹೂವಿನಷ್ಟೇ ನಾಜೂಕು ಫಲ. ಅದನ್ನು ತುಂಬಾ ಜಾಗೃತಿಯಿಂದಲೇ ಬೆಳೆದು ನಿರ್ವಹಣೆ ಮಾಡಿ ರಫ್ತು ಮಾಡಿದಾಗ ಮಾತ್ರ ರೈತರು ಮತ್ತು ದಲ್ಲಾಳಿಗಳು ಲಾಭ ಪಡೆಯಬಹುದು. ಕಳೆದ ವರ್ಷದಂತೆ ಈ ವರ್ಷವೂ ಸವಾಲುಗಳಿಗೆ
ಮಾವು ಹೊರತಾಗಿಲ್ಲ. ಕಳೆದ ವರ್ಷ 50 ಸಾವಿರ ರೂ. ಬೆಲೆಯ ತೋಟಗಳನ್ನು ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇವಲ 5-10 ಸಾವಿರ ರೂ.ಗೆ ಮಾತ್ರ ರೈತರು ಮಾರಾಟ ಮಾಡಿಕೊಳ್ಳುವಂತಾಗಿತ್ತು. ಕೊರೊನಾದಿಂದ ಮಕಾಡೆ ಮಲಗಿ ಹೋಗಿದ್ದ ಮಾವು ಉದ್ಯಮಕ್ಕೆ ಮತ್ತೆ ಉತ್ಸಾಹ ಬಂದಿದ್ದು, ದಲ್ಲಾಳಿಗಳು ಹಣ ಹಾಕಿ ತೋಟ ಖರೀದಿಸುತ್ತಿರುವುದು ರೈತರಿಗೆ ಕೊಂಚ ನೆಮ್ಮದಿ ತಂದಿದೆ. ಮಳೆ ಮತ್ತು ಇಬ್ಬನಿ ಆಲೊ³àನ್ಸೋ ಮಾವಿಗೆ ಶತ್ರುಗಳಿದ್ದಂತೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಮಳೆ ಯಾವುದೇ ಕಾರಣಕ್ಕೂ ಆಗಬಾರದು. ಒಂದು ವೇಳೆ ಮಳೆಯಾದರೆ ಮಾವಿಗೆ ಕಂಟಕ.
ಡಾ| ಗೋಪಾಲ, ಮಾವು ತಜ್ಞರು,
ಕುಂಭಾಪುರ ತೋಟಗಾರಿಕೆ ಸಂಶೋಧನಾ ಕೇಂದ್ರ ಬಸವರಾಜ ಹೊಂಗಲ್