ನವ ದೆಹಲಿ : 26,805 ಕೋಟಿ ಬಂಡವಾಳವನ್ನು ಕೆನಡಾ ಪೆನ್ಶನ್ ಪ್ಲಾನ್ ಇನ್ ವೆಸ್ಟ್ ಮೆಂಟ್ ಬೋರ್ಡ್, ಸಾಫ್ಟ್ ಬ್ಯಾಂಕ್ ವಿಷನ್ ಫಂಡ್ 2 ಮತ್ತು ವಾಲ್‌ಮಾರ್ಟ್, ಜಿಐಸಿ ಕಂಪನಿಗಳಿಂದ ಪಡೆದಿರುವುದಾಗಿ ಫ್ಲಿಪ್ ಕಾರ್ಟ್ ಸಂಸ್ಥೆ ತನ್ನ ಪ್ರಕಟನೆಯಲ್ಲಿ ಮಾಹಿತಿ ನೀಡಿದೆ.
ಇತರೆ ಮೂರು ಖಾಸಗಿ ಸಂಸ್ಥೆಗಳಿಂದ ಬಂದ ಬಂಡವಾಳದ ಹಣದಿಂದಾಗಿ ಒಟ್ಟು ಫ್ಲಿಪ್ ಕಾರ್ಟ್ ಸಂಸ್ಥೆಯ ಮಾರುಕಟ್ಟೆ ಮೌಲ್ಯವು 2.80 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ಕೂಡ ಮಾಹಿತತಿ ನೀಡಿದೆ.
ಇದನ್ನೂ ಓದಿ : ಶೃಂಗೇರಿ ಬ್ಯೂಟಿಪಾರ್ಲರ್ ಯುವತಿ ಮೇಲೆ ಆ್ಯಸಿಡ್ ದಾಳಿ ಕೇಸ್: 4 ಆರೋಪಿಗಳು ದೋಷಿಯೆಂದು ತೀರ್ಪು
ಈ ಜಾಗತಿಕ ಬಂಡವಾಳದ ಬಗ್ಗೆ ಪ್ರತಿಕ್ರಿಯಿಸಿರುವ ಫ್ಲಿಪ್ ಕಾರ್ಟ್ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಲ್ಯಾಣ್ ಕೃಷ್ಣ ಮೂರ್ತಿ, ಜಾಗತಿಕ ಮಟ್ಟದಸಂಸ್ಥೆಗಳಿಂದ ಫ್ಲಿಪ್ ಕಾರ್ಟ್ ನ ಮೇಲೆ ಹೂಡಿಕೆ ಮಾಡಿರುವ ಬಂಡವಾಳ ಡಿಜಿಟಲ್ ವಾಣಿಜ್ಯ ವಹಿವಾಟಿನ ಮೇಲಿರುವ ಭರವಸೆಯನ್ನು ಹಾಗೂ ಫ್ಲಿಫ್ ಕಾರ್ಟ್ ಸಮೂಹ ಸಂಸ್ಥೆಯ ಪ್ರಾಮಾಣಿಕ ಸೇವೆಗೆ ಹಿಡಿದ ಕನ್ನಡಿ ಎಂದು ಹೇಳಿದ್ದಾರೆ.
ಗ್ರಾಹಕರ ಸೇವೆಯನ್ನು ಹೊರತಾಗಿ ದೇಶ ಕೋಟ್ಯಾಂತರ ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ದಿಮೆಗಳ ಬೆಳವಣಿಗೆಯನ್ನು ಹೆಚ್ಚಿಸಲು ನಮ್ಮ ಸಂಸ್ಥೆ ಶ್ರಮ ವಹಿಸಲಿದೆ ಎಂದು ಕೂಡ ಅವರು ಹೇಳಿದ್ದಾರೆ.
ಇದನ್ನೂ ಓದಿ : ಪಣಂಬೂರು : ಮನೆಗಳ್ಳತನ ಮಾಡಿದ್ದ ಆರೋಪಿ ಬಂಧನ, 248 ಗ್ರಾಂ ಚಿನ್ನ ವಶ