ನವದೆಹಲಿ: ಮತ್ತೊಂದು ಅತ್ಯಧ್ಬುತ ಆಫರ್ ಗಳೊಂದಿಗೆ ಫ್ಲಿಫ್ ಕಾರ್ಟ್ ಹಿಂದಿರುಗಿದೆ. ಫ್ಲಿಫ್ ಕಾರ್ಟ್ ಬೊನಾನ್ಜಾ( Bonanza) ಸೇಲ್’ ಎಂಬ ಹೆಸರಿನಲ್ಲಿ ಹಲವು ಸ್ಮಾರ್ಟ್ ಪೋನ್ ಗಳನ್ನು ಡಿಸ್ಕೌಂಟ್ ದರದಲ್ಲಿ ಮಾರಾಟ ಮಾಡುತ್ತಿದ್ದು, ಗ್ರಾಹಕರಿಗೆ ಮೊಬೈಲ್ ಕೊಳ್ಳಲು ಇದೊಂದು ಉತ್ತಮ ಸಂದರ್ಭವಾಗಿದೆ. ಜನವರಿ 29ಕ್ಕೆ ಈ ಸೇಲ್ ಕೊನೆಗೊಳ್ಳುತ್ತದೆ.
ಡಿಸ್ಕೌಂಟ್ ಮಾತ್ರವಲ್ಲದೆ ಬ್ಯಾಂಕ್ ಆಫರ್ ಹಾಗೂ ಎಕ್ಸ್ ಚೇಂಜ್ ಆಫರ್ ಗಳು ಕೂಡ ಲಭ್ಯವಿದೆ. ಐಸಿಸಿಐ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವರಿಗೆ ಹೆಚ್ಚುವರಿ 10% ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ. ಮಾತ್ರವಲ್ಲದೆ ಹಳೆ ಸ್ಮಾರ್ಟ್ ಫೋನ್ ನೀಡಿ ಹೊಸದನ್ನು ಕೂಡ ಕೊಂಡುಕೊಳ್ಳಬಹುದು.
ಇದನ್ನೂ ಓದಿ: ದೆಹಲಿ ಹಿಂಸಾಚಾರ:ಆಸ್ಟ್ರೇಲಿಯಾದಿಂದ ಹಿಂದಿರುಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮೃತ ವ್ಯಕ್ತಿ
ಯಾವೆಲ್ಲಾ ಸ್ಮಾರ್ಟ್ ಫೋನ್ ಗಳಿಗೆ ಆಫರ್ ಗಳಿವೆ ?
ಫೋಕೋ ಎಂ2 ಪ್ರೋ: ಫ್ಲಿಫ್ ಕಾರ್ಟ್ ಬೊನಾನ್ಜ ಸೇಲ್ ನಲ್ಲಿ ಈ ಫೋನ್ 11,999ಕ್ಕೆ ಲಭ್ಯವಿದೆ. ಐಸಿಐಸಿಐ ಕಾರ್ಡ್ ಹೊಂದಿದ್ದರೆ, ಈ ಮೊಬೈಲ್ 10,999 ರೂ. ಗಳಿಗೆ ದೊರಕುತ್ತದೆ. ಪೋಕೋ ಎಂ2 ಪ್ರೋ ಕ್ವಾಲ್ ಕಾಂ ಸ್ನ್ಯಾಪ್ ಡ್ರ್ಯಾಗನ್ 720 ಜಿ SoC ಮತ್ತು 5000 mAh ಬ್ಯಾಟರಿ ಸಾಮಾರ್ಥ್ಯ ಪಡೆದಿದೆ. ಅಲ್ಲದೆ 48 ಎಂಪಿ ಕ್ವಾಡ್ ಕ್ಯಾಮಾರ ಸೆಟಪ್ ಹಾಗೂ 6. 67 ಇಂಚಿನ ಫುಲ್ HD+ ಡಿಸ್ ಪ್ಲೇ ಹೊಂದಿರುವುದು ವಿಶೇಷ.
ಐಪೋನ್ SE: 29,999 ರೂ. ಗಳಿಗೆ ಇದು ಫ್ಲೀಪ್ ಕಾರ್ಟ್ ಸೇಲ್ ನಲ್ಲಿ ಲಭ್ಯವಿದ್ದು, ಐಸಿಐಸಿಐ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಮೂಲಕ 4000 ರೂ, ವರೆಗೂ ಡಿಸ್ಕೌಂಟ್ ದೊರಕುತ್ತದೆ. ಈ ಫೋನ್ A12 ಬಯೋನಿಕ್ ಚಿಪ್ ಸೆಟ್ ಹೊಂದಿದ್ದು, ಟಚ್ ಐಡಿ ಹೊಂದಿದೆ. ನೋ ಕಾಸ್ಟ್ ಇಎಂಐ ಮೂಲಕ ಎಕ್ಸ್ ಚೆಂಜ್ ಆಫರ್ ಕೂಡ ಗ್ರಾಹಕರಿಗೆ ಲಭ್ಯವಿದೆ.
ಆ್ಯಪಲ್ ಐಫೋನ್ 11: ಫ್ಲಿಫ್ ಕಾರ್ಟ್ ಸೇಲ್ ನಲ್ಲಿ 48,999 ರೂ.ಗಳಿಗೆ ಗ್ರಾಹಕರಿಗೆ ದೊರಕುತ್ತಿದೆ. ಇದರ ಮೂಲ ಬೆಲೆ 54,999 ರೂ. ಗಳು. ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್ ಪೋನ್ ನೀಡಿ 16,500 ರೂ. ವರೆಗೂ ಡಿಸ್ಕೌಂಟ್ ಪಡೆಯಬಹುದು.
ಐಪೋನ್ 11 ಮಾದರಿಗಳಲ್ಲಿ ಇದೊಂದು ಜನಪ್ರಿಯ ಸ್ಮಾರ್ಟ್ ಪೋನ್ ಆಗಿದೆ. ಇದರಲ್ಲಿ A13 ಬಯೋನಿಕ್ ಚಿಪ್ ಸೆಟ್ ಇದ್ದು, 12 ಎಂಪಿ ಕ್ಯಾಮರಾ ಹೊಂದಿದೆ.
ಮೋಟೋ ಜಿ 5ಜಿ: ಫ್ಲಿಫ್ ಕಾರ್ಟ್ ಸೇಲ್ ನಲ್ಲಿ ಈ ಸ್ಮಾರ್ಟ್ ಪೋನ್ 18,999 ರೂ. ಗಳಿಗೆ ದೊರಕುತ್ತಿದೆ. ಐಸಿಐಸಿಐ ಕಾರ್ಡ್ ಮೂಲಕ 1000 ರೂ. ಡಿಸ್ಕೌಂಟ್ ಸಿಗುತ್ತಿದೆ. ಈ ಸ್ಮಾರ್ಟ್ ಪೋನ್ 20,999ಕ್ಕೆ ಮೊದಲು ಬಿಡುಗಡೆಗೊಂಡಿತ್ತು. ಮಾತ್ರವಲ್ಲದೆ ಅತ್ಯುತ್ತಮ 5ಜಿ ಸ್ಮಾರ್ಟ್ ಫೋನ್ ಎಂದು ಹೆಸರುವಾಸಿಯಾಗಿತ್ತು. ಇದು 6ಜಿಬಿ RAM ನೊಂದಿಗೆ ಕ್ವಾಲ್ ಕಾಂ ಸ್ನಾಪ್ ಡ್ರ್ಯಾಗನ್ 750 ಜಿ SoC ಪ್ರೊಸೆಸ್ಸರ್ ಹೊಂದಿದೆ.
ಇದನ್ನೂ ಓದಿ: 4 ವರ್ಷದ ಜೈಲುವಾಸ ಅಂತ್ಯ; ಜ.27ರಂದು ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ಬಿಡುಗಡೆ