Advertisement

Flipkart: ಫ್ಲಿಪ್‌ಕಾರ್ಟ್‌ ಪೂರ್ಣ ನಿಯಂತ್ರಣ ವಾಲ್‌ಮಾರ್ಟ್‌ಗೆ

03:29 PM Aug 07, 2023 | |

ವಾಷಿಂಗ್ಟನ್‌: ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ಕಂಪನಿಯಲ್ಲಿ ಟೈಗರ್‌ ಗ್ಲೋಬಲ್‌ ಇನ್ವೆಸ್ಟ್‌ಮೆಂಟ್‌ ಸಂಸ್ಥೆ ಹೊಂದಿದ್ದ ಪಾಲನ್ನು ದೈತ್ಯ ಸಂಸ್ಥೆ ವಾಲ್‌ಮಾರ್ಟ್‌ ಖರೀದಿಸಿದೆ, ಮೊತ್ತ 140 ಕೋಟಿ ಡಾಲರ್‌ ಎಂದು ಮೂಲಗಳು ತಿಳಿಸಿವೆ.

Advertisement

ಇದಕ್ಕೂ ಮುನ್ನ 2018ರಲ್ಲಿ ಫ್ಲಿಪ್‌ಕಾರ್ಟ್‌ನ ಶೇ.77ರಷ್ಟು ಪಾಲನ್ನು 1,600 ಕೋಟಿ ಡಾಲರ್‌ಗಳಿಗೆ ವಾಲ್‌ಮಾರ್ಟ್‌ ಖರೀದಿಸಿತ್ತು. ಇದರಿಂದ ವಾಲ್‌ಮಾರ್ಟ್‌ ಫ್ಲಿಪ್‌ಕಾರ್ಟ್‌ಗೆ ನೈಜ ಮಾಲಿಕನಾಗಿ ಹೊರಹೊಮ್ಮಿದೆ.

ಹೊಸ ಖರೀದಿಯ ಪರಿಣಾಮ 35 ಬಿಲಿಯನ್‌ ಡಾಲರ್‌ ಇದ್ದ ಫ್ಲಿಪ್‌ಕಾರ್ಟ್‌ ಮಾರುಕಟ್ಟೆ ಮೌಲ್ಯ, ಇದೀಗ 38 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಈ ಹಿಂದೆ ಟೈಗರ್‌ ಗ್ಲೋಬಲ್‌ ಇನ್ವೆಸ್ಟ್‌ಮೆಂಟ್‌ ಸಂಸ್ಥೆಯು ಫ್ಲಿಪ್‌ಕಾರ್ಟ್‌ನಲ್ಲಿ ಶೇ.4ರಷ್ಟು ಪಾಲನ್ನು ಹೊಂದಿತ್ತು. 2021ರಲ್ಲಿ ಫ್ಲಿಪ್‌ಕಾರ್ಟ್‌ ಕಂಪನಿಯ ಷೇರುಗಳನ್ನು ಅಮೆರಿಕದ ಚಿಲ್ಲರೆ ಮಾರಾಟ ಸಂಸ್ಥೆ ವಾಲ್‌ಮಾರ್ಟ್‌, ಜಪಾನ್‌ನ ಸಾಫ್ಟ್ ಬ್ಯಾಂಕ್‌ ಮತ್ತು ಇತರೆ ಹೂಡಿಕೆದಾರರು ಖರೀದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next