ನವದೆಹಲಿ: ಭಾರತದ ಬೃಹತ್ ಅಂತರ್ಜಾಲ ಮಾರಾಟದಾರ ಫ್ಲಿಪ್ ಕಾರ್ಟ್ ತನ್ನ ಗ್ರಾಹಕರಿಗಾಗಿ ಡಿ. 1 ರಿಂದ ಡಿ. 3 ರ ವರೆಗೆ ಫ್ಲಿಪ್ ಕಾರ್ಟ್ ಫ್ಲಿಪ್ ಸ್ಟಾರ್ಟ್ ಡೇ ಸೇಲ್ (flipstart days sale) ಆರಂಭಿಸಿದೆ. ಈ ಮೂಲಕ ಅತೀ ಕಡಿಮೆ ಬೆಲೆಗೆ ವಸ್ತುಗಳನ್ನು ನೀಡುವುದಾಗಿ ಫ್ಲಿಪ್ ಕಾರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಲಾ ವಿಧವಾದ ವಸ್ತುಗಳ ಮೇಲೆ ಭಾರಿ ಪ್ರಮಾಣದ ರಿಯಾಯಿತಿ ನೀಡಲಾಗುತ್ತಿದೆ. ಹಲವಾರು ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ 80% ರಿಯಾಯಿತಿ ನೀಡಲಾಗುತ್ತಿದ್ದು, ಟೀವಿ, ಎಸಿ, ರೆಪ್ರಿಜಿರೇಟರ ಗಳಿಗೆ 50% ರಿಯಾಯಿತಿ ನೀಡುವುದಾಗಿ ತಿಳಿಸಿದೆ.
ಇನ್ನು ಬಟ್ಟೆ ಪೂಟ್ ವೇರ್, ಸೌಂದರ್ಯರ್ಧಕ ಮತ್ತು ಮಕ್ಕಳಿಗೆ ಸಂಬಂಧಿಸಿದ ವಸ್ತುಗಳ ಮೇಲೆ 40% ದಿಂದ 80% ವರೆಗೆ ರಿಯಾಯಿತಿ ನೀಡಲಾಗುತ್ತಿದೆ .
ಇಷ್ಟೇ ಅಲ್ಲದೆ ಫ್ಲಿಪ್ ಕಾರ್ಟ್ ಫೆಡರಲ್ ಬ್ಯಾಂಕ್ ನೊಂದಿಗೆ ಪಾಲಿದಾರಿಕೆಯನ್ನು ಮಾಡಿಕೊಂಡಿದ್ದು, ಫೆಡರಲ್ ಬ್ಯಾಂಕ್ ಗ್ರಾಹಕರಿಗಾಗಿ 10% ಹೆಚ್ಚು ರಿಯಾಯಿತಿ ನೀಡುತ್ತಿದೆ. ಮತ್ತು ಇ ಎಮ್ ಐ ಆಯ್ಕೆಯಲ್ಲೂ ಖರೀದಿಸುವ ಅವಕಾಶ ನೀಡಿದ್ದು, ಎಕ್ಸ್ ಚೇಂಜ್ ಆಫರ್ ಕೂಡಾ ಲಭ್ಯವಿದೆ.
ಹೆಡ್ ಪೋನ್ , ಸ್ಪೀಕರ್ ಮೇಲೆ 70% ರಿಯಾಯಿತಿ ನೀಡಲಾಗುತ್ತಿದ್ದು, ಜೆ ಬಿ ಎಲ್, ಬೋಟ್, ಸೋನಿ ಹೆಡ್ ಪೋನ್ ಗಳು 599 ರೂ. ಗಳಿಂದ ಆರಂಭಗೊಳ್ಳಲಿವೆ. ಇನ್ನು ಲ್ಯಾಪ್ ಟಾಪ್ ಮೇಲೆ 30% ರಿಯಾಯಿತಿ ನೀಡಲಾಗುತ್ತಿದ್ದು, ಸ್ಮಾರ್ಟ್ ವಾಚ್ ಮತ್ತು ಸ್ಮಾರ್ಟ್ ಬ್ಯಾಂಡ್ ಗಳು 1299 ರೂ. ನಿಂದ ಖರೀದಿಸಬಹುದಾಗಿದೆ.