Advertisement

ವಿಮಾನ ಪ್ರಯಾಣ ವಿಳಂಬ: ವಿಡಿಯೋ ಗೇಮ್‌ ಆಡಿದ ಟೀಂ ಇಂಡಿಯಾ

06:50 AM Nov 17, 2018 | |

ನವದೆ‌ಹಲಿ: ಆಸ್ಟ್ರೇಲಿಯಕ್ಕೆ ಹೊರಟ ಭಾರತ ಕ್ರಿಕೆಟ್‌ ತಂಡಕ್ಕೆ ವಿಮಾನ ಆಗಮನ ವಿಳಂಬವಾಗಿದ್ದರಿಂದ ಭಾರತೀಯ ಕ್ರಿಕೆಟಿಗರು ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಕಾದ ಘಟನೆ ನಡೆದಿದೆ. 

Advertisement

ಈ ವೇಳೆ ಕ್ರಿಕೆಟಿಗರು ಸಮಯ ಕಳೆಯಲು ಪಿಯುಬಿಜಿ (ಪ್ಲೇಯರ್‌ ಅನ್‌ನೋನ್ಸ್‌ ಬ್ಯಾಟಲ್‌ಗ್ರೌಂಡ್ಸ್‌) ವಿಡಿಯೋ ಗೇಮ್‌ ಆಡಿದ್ದಾರೆ. ಮನೀಶ್‌ ಪಾಂಡೆ, ಕೃಣಾಲ್‌ ಪಾಂಡ್ಯ ಸೇರಿದಂತೆ ಕೆಲ ಕ್ರಿಕೆಟಿಗರು ಗೇಮ್‌ ಆಡುತ್ತಿರುವ ಫೋಟೋವನ್ನು ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. 

ಆಸ್ಟ್ರೇಲಿಯದಲ್ಲಿ ಭಾರತೀಯರು 3 ಟಿ20, 4 ಟೆಸ್ಟ್‌, 3 ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್‌ 21ರಿಂದ ಟಿ20 ಸರಣಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next