Advertisement

ಫ್ಲೋರಿಡಾ ನದಿಗೆ ಬಿದ್ದ ವಿಮಾನ

07:20 AM May 05, 2019 | mahesh |

ಫ್ಲೋರಿಡಾ: ಅಮೆರಿಕದ ಫ್ಲೋರಿಡಾದ ಜಾಕ್ಸನ್‌ವಿಲ್ಲೆ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್‌ ಆಗುವಾಗ ನದಿಗೆ ಬಿದ್ದ ದುರ್ಘ‌ಟನೆ ಶನಿವಾರ ಸಂಭವಿಸಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಅಪಾಯ ವಾಗಿಲ್ಲ. ಬೋಯಿಂಗ್‌ 737 ವಿಮಾನದಲ್ಲಿ 136 ಪ್ರಯಾಣಿಕರಿದ್ದರು. ಇಬ್ಬ ರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ಗ್ವಾಂಟಾನಾಮೋ ಬೇ ಇಂದ ಆಗಮಿಸಿದ್ದ ಈ ವಿಮಾನ ಲ್ಯಾಂಡ್‌ ಆಗುವಾಗ ರನ್‌ವೇ ಅಂಚಿನಲ್ಲಿದ್ದ ನದಿಗೆ ಜಾರಿದೆ. ವಿಪರೀತ ಮಳೆ ಇದ್ದರೂ ವಿಮಾನ ಲ್ಯಾಂಡ್‌ ಮಾಡಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ನದಿಯಲ್ಲಿ ಬಿದ್ದರೂ ವಿಮಾನ ಮುಳುಗಿರಲಿಲ್ಲ. ಹೀಗಾಗಿ ಪ್ರಯಾಣಿಕರಿಗೆ ತೊಂದರೆ ಯಾಗಿಲ್ಲ. ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಇಳಿಸಲಾಗಿದೆ.

Advertisement

ಸದ್ಯ ನದಿಗೆ ವಿಮಾನದ ಇಂಧನ ಹರಿದುಹೋಗದಂತೆ ತಡೆಯುವ ಕೆಲಸ ನಡೆಯುತ್ತಿದೆ ಎಂದು ಅಲ್ಲಿನ ಮೇಯರ್‌ ಲೆನ್ನಿ ಕರ್ರಿ ಹೇಳಿದ್ದಾರೆ. ಲ್ಯಾಂಡ್‌ ಆಗುವಾಗ ಅತ್ಯಂತ ರಭಸದಿಂದ ರನ್‌ವೇ ಮೇಲೆ ಬಿದ್ದಿದೆ. ವಿಮಾನದ ಸಂಪೂರ್ಣ ನಿಯಂತ್ರಣವೇ ಪೈಲಟ್‌ಗೆ ಇರಲಿಲ್ಲ. ಬಿದ್ದ ರಭಸಕ್ಕೆ ವಿಮಾನ ಮತ್ತೂಮ್ಮೆ ಹಾರಿ ಬಿತ್ತು ಎಂದು ಪ್ರಯಾಣಿಕರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next