Advertisement

ಗೋವಾಕ್ಕೆ ಆಗಮಿಸುವ ವಿಮಾನ ಟಿಕೆಟ್ ದರ ಮತ್ತೆ ಏರಿಕೆ

10:51 PM Oct 17, 2022 | Team Udayavani |

ಪಣಜಿ: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಗೋವಾಕ್ಕೆ ಆಗಮಿಸುವ ವಿಮಾನ ಟಿಕೆಟ್ ದರ ಮತ್ತೆ ಏರಿಕೆಯಾಗಿದೆ. ಅಕ್ಟೋಬರ್ 25 ರಂದು ಮುಂಬೈ-ಗೋವಾ ಮಾರ್ಗದ ವಿಮಾನ ಪ್ರಯಾಣ ದರ  3,500 ರೂ ದಿಂದ  ರೂ 9,000,  ಗೆ ಏರಿಕೆಯಾಗಿದೆ. ಇದರಿಂದಾಗಿ ಹಬ್ಬದ ಸಂದರ್ಭದಲ್ಲಿ ಗೋವಾಕ್ಕೆ ಆಗಮಿಸುವವರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

Advertisement

ಗೋವಾ ದಾಬೋಲಿಂ ವಿಮಾನ ನಿಲ್ದಾಣದಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ- ಅಹಮದಾಬಾದ್‍ನಿಂದ ಗೋವಾ ವಿಮಾನದ ದರವು ಇತರ ಸಮಯಗಳಲ್ಲಿ  6,500 ರೂಗಳಾಗಿದ್ದರೆ ಪ್ರಸ್ತುತ ಹಬ್ಬದ ಸಂದರ್ಭದಲ್ಲಿ 11,400 ರೂ ಗಳಿಗೆ ಏರಿಕೆಯಾಗಿದೆ.  ಕೋಲ್ಕತ್ತಾದಿಂದ ವಿಮಾನ ಟಿಕೆಟ್‍ಗಳನ್ನು ಸಹ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೊಲ್ಕತ್ತಾದಿಂದ ಗೋವಾಕ್ಕೆ ವಿಮಾನ ಪ್ರಯಾಣ ದರ  6,500 ರೂ.ಗಳಿಂದ  ಹಬ್ಬದ ಸಂದರ್ಭದಲ್ಲಿ  10,000 ರೂ.ಗಳಿಗೆ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಬ್ಬದ ಸಂದರ್ಭದಲ್ಲಿ ಗೋವಾಕ್ಕೆ ಆಗಮಿಸಲು ವಿಮಾನ ಟಿಕೇಟ್ ಮಾತ್ರವಲ್ಲದೆಯೇ ಖಾಸಗಿ ಬಸ್ ಪ್ರಯಾಣ ದರ ಕೂಡ ಹೆಚ್ಚಳವಾಗಿದೆ. ಇದರಿಂದಾಗಿ ಹಬ್ಬದ ಸಂದರ್ಭದಲ್ಲಿ ಗೋವಾಕ್ಕೆ ಆಗಮಿಸಲು ಪ್ರವಾಸಿಗರು ದುಪ್ಪಟ್ಟು ಹಣ ತೆರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next