Advertisement
ಪ್ರತಿದಿನವೂ ವಿಮಾನದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರಬೇಕಾಗುತ್ತದೆ. ಅದರ ಎಂಜಿನ್ ಚಾಲೂ ಮಾಡುವುದರಿಂದ ಮೊದಲುಗೊಂಡು, ಹೆ„ಡ್ರಾಲಿಕ್ಸ್, ಕಂಟ್ರೋಲ್ ಸಿಸ್ಟಮ್ ಗಳು ಇವೆಲ್ಲವನ್ನೂ ಚೆಕ್ ಮಾಡುತ್ತಿರಬೇಕಾಗುತ್ತದೆ. ಹಾಗೆ ನೋಡಿದರೆ ವಿಮಾನಗಳು, ಹಾರಾಟ ನಡೆಸುತ್ತಿದ್ದುದಕ್ಕಿಂತ ಹೆಚ್ಚಿನ ನಿರ್ವಹಣೆ ಅವುಗಳನ್ನು ಪಾರ್ಕ್ ಮಾಡಬೇಕಾಗಿ ಬಂದಾಗ ತಗುಲುತ್ತದೆ. ಪಾರ್ಕಿಂಗ್ ಜಾಗವೂ ಒಂದು ಸಮಸ್ಯೆಯಾಗಿದೆ. ವಿಮಾನ ಟೇಕಾಫ್, ಲ್ಯಾಂಡಿಂಗ್ ಮಾಡುವ ರನ್ ವೇ ಯಲ್ಲಿಯೂ ಪಾರ್ಕ್ ಮಾಡಲಾಗುತ್ತಿದೆ. ಜಾಗ ಸಿಕ್ಕರೂ ವಿಮಾನಗಳನ್ನು ಸುಮ್ಮನೆ ನಿಲ್ಲಿಸುವ ಹಾಗೂ ಇಲ್ಲ. ಅವುಗಳ ಟ್ಯಾಂಕ್ ನಲ್ಲಿ ಪೂರ್ತಿ ಇಂಧನ ತುಂಬಿಸಿಯೇ ನಿಲ್ಲಿಸಬೇಕಾಗುತ್ತದೆ. ಗಾಳಿಗೆ ವಿಮಾನ ಅಲುಗಾಡದೇ ಭದ್ರವಾಗಿರುತ್ತದೆ ಎಂಬುದು ಇದರ ಹಿಂದಿನ ಲೆಕ್ಕಾಚಾರ. Advertisement
ವಿಮಾನ ಪಾರ್ಕಿಂಗ್ ಸುಲಭವಲ್ಲ!
04:17 PM Apr 20, 2020 | mahesh |
Advertisement
Udayavani is now on Telegram. Click here to join our channel and stay updated with the latest news.