Advertisement

Flight: ಭಾರೀ ಶಬ್ದ ತಡೆಯಲು ವಿಮಾನದ ರೆಕ್ಕೆಗೆ ರಂಧ್ರ ಕೊರೆಯಲು ಸಲಹೆ

01:20 AM Aug 13, 2024 | Team Udayavani |

ಹೊಸದಿಲ್ಲಿ: ಭಾರೀ ಶಬ್ದ ಮತ್ತು ಶಾಕ್‌ ವೇವ್‌ ಸೃಷ್ಟಿಸುವ ಸೂಪರ್‌ ಸಾನಿಕ್‌ (ಶಬ್ದಕ್ಕಿಂತ ವೇಗವಾಗಿ ಚಲಿಸುವ ವಿಮಾನ) ವಿಮಾನಗಳ ಕಾರ್ಯದಕ್ಷತೆ ಹೆಚ್ಚಿಸಲು ವಿಮಾನಗಳ ರೆಕ್ಕೆಗಳಲ್ಲಿ ರಂಧ್ರ ಕೊರೆಯುವ ಸಲಹೆಯನ್ನು ಚೀನ ವಿಜ್ಞಾನಿಗಳು ನೀಡಿದ್ದಾರೆ.

Advertisement

ಇದರಿಂದ ವಿಮಾನದ ಭಾರೀ ಶಬ್ದ ಮತ್ತು ಶಾಕ್‌ವೆàವ್‌ ಸಮಸ್ಯೆ(ವಿಮಾನ ಹಾರುವಾಗ ನಿರ್ಮಾಣ ವಾಗುವ ಶಕ್ತಿಯುತ ವಲಯ) ನಿವಾರಣೆಯಾಗ ಲಿದೆ. ಅಲ್ಲದೇ ಇದು ವಿಮಾನಗಳ ಕಾರ್ಯದಕ್ಷತೆ ಜತೆ ಸುರಕ್ಷೆಯನ್ನೂ ಹೆಚ್ಚಿಸಲಿದೆ ಎಂದಿದ್ದಾರೆ.

ರೆಕ್ಕೆಗಳಲ್ಲಿ ನಿರ್ಮಿಸಲಾದ ರಂಧ್ರಗಳಲ್ಲಿ ಸ್ವಯಂಚಾಲಿ ತವಾಗಿ ಮುಚ್ಚಿಕೊಳ್ಳುವ ವ್ಯವಸ್ಥೆಯಿರುತ್ತದೆ. ವಿಮಾನ ಶಬ್ದದ ವೇಗ ಮೀರಿದಾಗ, ಈ ರಂಧ್ರ ತೆರೆದುಕೊಂಡು ಗಾಳಿ ಸುಲಭವಾಗಿ ಚಲಿಸುತ್ತದೆ. ಇದು ವಿಮಾನದಲ್ಲಿ ಉಂಟಾಗುವ ಟಬ್ಯೂìಲನ್ಸ್‌ ಅನ್ನು ನಿವಾರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next