Advertisement

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಿಮಾನ…!

08:43 PM Feb 20, 2021 | Team Udayavani |

ಆಂಧ್ರ ಪ್ರದೇಶ : ಲ್ಯಾಂಡಿಂಗ್ ವೇಳೆ ವಿಮಾನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು (ಫೆ.20) ಗನ್ನಾವರಂನಲ್ಲಿರುವ ವಿಜಯವಾಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Advertisement

64 ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸಪ್ರೆಸ್ ಗೆ ಸೇರಿದ್ದ ವಿಮಾನ ಇಂದು ವಿಜಯವಾಡದಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು. ಈ ವೇಳೆ ಪೈಲಟ್ ನಿಯಂತ್ರಣ ಕಳೆದುಕೊಂಡಿದ್ದಾರೆ. ಪರಿಣಾಮ ರನ್ ವೇಯಲ್ಲಿದ್ದ ವಿದ್ಯುತ್ ಕಂಬಕ್ಕೆ ವಿಮಾನ ಡಿಕ್ಕಿ ಹೊಡೆದಿದೆ.

ಕತಾರ್ ನ ದೊಹಾದಿಂದ ಈ ವಿಮಾನ ಆಗಮಿಸಿತ್ತು. ಲ್ಯಾಂಡಿಂಗ್ ವೇಳೆ ರನ್ ವೇ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ವಿಮಾನಿನ ರೆಕ್ಕೆ ತಾಗಿದೆ. ಪರಿಣಾಮ ವಿದ್ಯುತ್ ಕಂಬ ನೆಲಕ್ಕುರುಳಿದೆ. ರೆಕ್ಕೆಗೆ ಸ್ವಲ್ಪ ಹಾನಿಯಾಗಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವಿಜಯವಾಡ ವಿಮಾನ ನಿಲ್ದಾಣದ ನಿರ್ದೇಶಕ ಜಿ.ಮಧುಸೂದನ್ ರಾವ್ ಹೇಳಿದ್ದಾರೆ.

ಇನ್ನು ಘಟನೆ ಕುರಿತು ತನಿಖೆ ನಡೆಸಲು ಸೂಚಿಸಿರುವುದಾಗಿ ಏರ್ ಇಂಡಿಯಾ ಎಕ್ಸಪ್ರೆಸ್ ತಿಳಿಸಿದೆ.

Andhra Pradesh: An Air India Express flight hits an electric pole while landing at Vijayawada International Airport in Gannavaram. “All 64 passengers on board the flight and the crew are safe,” says airport director G Madhusudan Rao. pic.twitter.com/yFaLMWlXHE

Advertisement

— ANI (@ANI) February 20, 2021

Advertisement

Udayavani is now on Telegram. Click here to join our channel and stay updated with the latest news.

Next