ಮುಂಬೈ:1932ರಲ್ಲಿ ಮೊದಲ ಬಾರಿಗೆ ವಿಮಾನಯಾನ ಆರಂಭವಾದ ನಂತರ ಭಾರತೀಯ ವಾಯುಯಾನ ಸಂಸ್ಥೆಯೂ ಕೂಡಾ ಬಹಳಷ್ಟು ಬದಲಾವಣೆ ಕಂಡಿದೆ. ಆರ್ಥಿಕ ವ್ಯವಸ್ಥೆ ಬದಲಾವಣೆ, ಹಣದುಬ್ಬರ ಮತ್ತು ಆಧುನಿಕ ತಂತ್ರಜ್ಞಾನದ ಜೊತೆ, ಜೊತೆಗೆ ವಾಯುಯಾನ ಸಂಸ್ಥೆಯೂ ಬದಲಾವಣೆಗೊಂಡಿದೆ. ಅದೇ ರೀತಿ ವಿಮಾನ ಪ್ರಯಾಣದ ಟಿಕೆಟ್ ದರದಲ್ಲಿಯೂ ಸಾಕಷ್ಟು ಹೆಚ್ಚಳವಾಗಿದೆ. ಅದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು 1975ರಲ್ಲಿ ಮುಂಬೈನಿಂದ ಗೋವಾಕ್ಕೆ ಪ್ರಯಾಣಿಸಿದ ವಿಮಾನ ಯಾನದ ಟಿಕೆಟ್ ಅನ್ನು ಹಂಚಿಕೊಂಡಿರುವುದು ವೈರಲ್ ಆಗಿದೆ. ಅದಕ್ಕೆ ಕಾರಣ…ಅಂದು ಮುಂಬೈ ಟು ಗೋವಾಕ್ಕೆ ವಿಮಾನ ಪ್ರಯಾಣದ ಟಿಕೆಟ್ ಬೆಲೆ ಕೇವಲ 85ರೂಪಾಯಿಯಾಗಿರುವುದು!
ಇದನ್ನೂ ಓದಿ:Congress ಮೂರನೇ ಪಟ್ಟಿ: ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ Suspense
“1975ರಲ್ಲಿನ ಇಂಡಿಯನ್ ಏರ್ ಲೈನ್ಸ್ ಟಿಕೆಟ್ ಎಂಬ ಕ್ಯಾಪ್ಶನ್ ಮೂಲಕ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಾಂಬೆ ಟು ಗೋವಾ ವಿಮಾನಯಾನದ ಟಿಕೆಟ್ ಬೆಲೆ 85 ರೂಪಾಯಿ ರೂಪಾಯಿ! ಬಣ್ಣ ಮಾಸಿದ ಹಳೆಯ ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಸುಮಾರು 45ವರ್ಷಕ್ಕೂ ಹಿಂದಿನ ವಿಮಾನ ಪ್ರಯಾಣದ ಟಿಕೆಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರಿಂದ ಹಲವಾರು ಮಂದಿ ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹೌದು ನನಗೂ ಕೂಡಾ ನೆನಪಿರುವಂತೆ 1988ರಲ್ಲಿ ಬಾಂಬೆ ಟು ಗೋವಾಕ್ಕೆ ಟಿಕೆಟ್ ಬೆಲೆ 435 ರೂಪಾಯಿ ಇದ್ದಿತ್ತು ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ನೆನಪಿಸಿಕೊಂಡಿದ್ದಾರೆ. 1974ರಲ್ಲಿ ಮೊದಲ ಬಾರಿಗೆ ಮಂಗಳೂರಿನಿಂದ ಬಾಂಬೆಗೆ ವಿಮಾನದಲ್ಲಿ ತೆರಳಿದ್ದ ವೇಳೆ ಟಿಕೆಟ್ ಬೆಲೆ 280 ರೂಪಾಯಿ ಇದ್ದಿತ್ತು. ನನ್ನ 8 ವರ್ಷದ ಮಗನಿಗೆ 140 ರೂಪಾಯಿ ಟಿಕೆಟ್ ಚಾರ್ಜ್ ವಿಧಿಸಿರುವುದಾಗಿ ಮತ್ತೊಬ್ಬ ಬಳಕೆದಾರರು ತಿಳಿಸಿದ್ದಾರೆ.