Advertisement
ಜೆಟ್ ಏರ್‌ವೇಸ್ 9ಡಬ್ಲ್ಯೂ 235 ವಿಮಾನವು ಪ್ರತಿ ದಿನ ಬೆಳಗ್ಗೆ 2.30ರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಹೊರಟು, 8.45ಕ್ಕೆ ಅಮ್‌ಸ್ಟರ್‌ಡ್ಯಾಂ ತಲುಪಲಿದೆ. ಉದ್ಘಾಟನೆಯ ಕೊಡುಗೆಯಾಗಿ ಬೆಂಗಳೂರಿನಿಂದ ಅಮ್‌ಸ್ಟರ್‌ಡ್ಯಾಂಗೆ ಹೋಗಿ ಬರಲು ಎಕನಾ ಮಿಕ್ ಕ್ಲಾಸ್‌ಗೆ 39,999 ರೂ. ಹಾಗೂ ಬಿಜಿನಸ್ ಕ್ಲಾಸ್‌ಗೆ 1.20 ಲಕ್ಷ ರೂ. ನಿಗದಿ ಮಾಡಲಾಗಿದೆ. ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಟ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ, ಸಂಸ್ಥೆ ಹೊಸ ಸೇವೆ ಪ್ರಯಾಣಿಕರ ಜತೆಗೆ ವಾಣಿಜ್ಯ ಮತ್ತು ವ್ಯಾಪಾರ ವಹಿವಾಟು ಪ್ರಗತಿಗೂ ನೆರವಾಗಲಿದೆ. ಪ್ರಯಾಣಿ ಕರಿಗೆ ಉತ್ಕೃಷ್ಟ ಸೇವೆ ಒದಗಿಸುವುದೇ ಸಂಸ್ಥೆಯ ಮೂಲ ಉದ್ದೇಶ ಎಂದರು.
ಕೆಎಲ್‌ಎಂ ಮತ್ತು ಡೆಲ್ಟಾ ಸಹಯೋಗದಲ್ಲಿ ಸೇವೆ ಒದಗಿಸಲಿದ್ದೇವೆ ಎಂದರು.
Related Articles
Advertisement
ಜೆಟ್ ಏರ್‌ವೇಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ (ದಕ್ಷಿಣ) ಯು.ಹರೀಶ್ ಶೆಣೈ, ವಾಣಿಜ್ಯ ಮತ್ತು ಮಾರಾಟ ವಿಭಾಗದ ಉಪಾಧ್ಯಕ್ಷ ಪ್ರವೀಣ್ ಅಯ್ಯರ್ ಇತರರಿದ್ದರು.
ಭಾರತದಿಂದ ನೆದರ್ ಲ್ಯಾಂಡ್ ಹಾಗೂ ಯುರೋಪ್ ದೇಶಕ್ಕೆ ಬರುವ, ಇಲ್ಲಿಂದ ಭಾರತಕ್ಕೆ ತೆರಳುವ ಸಂಖ್ಯೆ ಹೆಚ್ಚಾಗಿದೆ ಮತ್ತು ಪ್ರವಾಸೋದ್ಯಮವೂ ಬಿರುಸಾಗಿದೆ. ಯುರೋಪ್ ಖಂಡಕ್ಕೆ ರಫ್ತಾಗುವ ಸರಕುಗಳಲ್ಲಿ ಶೇ.20ರಷ್ಟು ನೆದರ್‌ಲ್ಯಾಂಡ್‌ಗೆ ಬರುತ್ತಿದೆ. ನೆದರ್‌ಲ್ಯಾಂಡ್‌ಗೆ ಬರುವ ಪ್ರವಾಸಿಗರ ಸಂಖ್ಯೆ ವಾರ್ಷಿಕ ಶೇ.25ರಷ್ಟು ಏರಿಕೆಯಾಗುತ್ತಿದೆ. 2017ರಲ್ಲಿ ಶೇ.30ರಷ್ಟು ಪ್ರವಾಸಿಗರು ಭೇಟಿ ನೀಡಿದ್ದಾರೆ.●ಅಲ್ಪೋನುಸ್ ಎಚ್. ಎಂ.ಸ್ಟೊಲಿಂಗಾ, ಭಾರತದ ನೆದರ್‌ಲ್ಯಾಂಡ್ ರಾಯಭಾರಿ