Advertisement

ಫ್ಲೆಕ್ಸ್‌ ಎಂಜಿನ್‌ ವಾಹನಗಳಿಗೆ ಕೇಂದ್ರ ಒತ್ತು: ಪೆಟ್ರೋಲ್‌ ಅಥವಾ ಜೈವಿಕ ಇಂಧನ ಬಳಕೆಯ ಆಯ್ಕೆ

01:21 AM Jul 05, 2021 | Team Udayavani |

ಹೊಸದಿಲ್ಲಿ: ಸಾಂಪ್ರದಾಯಿಕ ತೈಲಾ ಧಾರಿತ ಸಾರಿಗೆ ಸ್ವರೂಪವನ್ನು ಬದಲಿಸಿ, ತೈಲ ಆಮದನ್ನು ತಗ್ಗಿಸುವ ಉದ್ದೇಶವನ್ನು ಹೊಂದಿರುವ ಕೇಂದ್ರ ಸರಕಾರವು ಈ ವರ್ಷದೊಳಗೆ ಫ್ಲೆಕ್ಸಿಬಲ್‌ ಇಂಧನಾಧಾರಿತ ಎಂಜಿನ್‌ಗಳುಳ್ಳ ವಾಹನಗಳ ಉತ್ಪಾದನೆಗೆ ಅನುವು ಮಾಡಿಕೊಡಲು ನಿರ್ಧರಿಸಿದೆ.

Advertisement

2021-22ರ ಹಣಕಾಸು ವರ್ಷದ 3ನೇ ತ್ತೈಮಾಸಿಕ ಅವಧಿಯಲ್ಲಿ ಎಲ್ಲ ಕಂಪೆನಿಗಳಿಗೆ ಮಾರ್ಗಸೂಚಿ ಬಿಡುಗಡೆಯಾಗಲಿದೆ. ಇದರ ಜತೆಗೆ ಫ್ಲೆಕ್ಸ್‌ ಎಂಜಿನ್‌ ಉತ್ಪಾದನೆಗೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಕಂಪೆನಿಗಳಿಗೆ ನೀಡಲು ಕೇಂದ್ರ ನಿರ್ಧರಿಸಿದೆ.

ಏನಿದು ಫ್ಲೆಕ್ಸ್‌ ಎಂಜಿನ್‌?
ಇದು ಪರಿಶುದ್ಧ ಪೆಟ್ರೋಲ್‌ ಅಥವಾ ಎಥನಾಲ್‌ ಎರಡನ್ನೂ ಬಳಸಿ ಕಾರ್ಯನಿರ್ವಹಿಸುತ್ತದೆ.

ಹಿಂದೆ ನಡೆದಿತ್ತು ಇಂಥ ಪ್ರಯೋಗ!
ಕೆಲವು ವರ್ಷಗಳ ಹಿಂದೆ ಮಾರುತಿ ಸುಝುಕಿ ತನ್ನ ವ್ಯಾಗನ್‌ ಆರ್‌ ಡ್ಯುಯೋ ಮಾದರಿಯ ಕಾರಿನಲ್ಲಿ ಎರಡು ರೀತಿಯ ಇಂಧನ ಆಯ್ಕೆಯನ್ನು ನೀಡಿತ್ತು. ಅದರಲ್ಲಿ ಪೆಟ್ರೋಲ್‌ ಮತ್ತು ಸಿಎನ್‌ಜಿ ಇಂಧನ ಬಳಸಬಹುದಾಗಿತ್ತು.

ಗ್ರಾಹಕರಿಗೇನು ಅನುಕೂಲ?
– ಇಂಥ ಎಂಜಿನ್ನಿನ ವಾಹನದಲ್ಲಿ 2 ಇಂಧನ ಟ್ಯಾಂಕ್‌ಗಳಿದ್ದು, ಒಂದರಲ್ಲಿ ಪೆಟ್ರೋಲ್‌, ಮತ್ತೂಂದರಲ್ಲಿ ಜೈವಿಕ ಇಂಧನ ತುಂಬಬಹುದು.
– ಯಾವ ಇಂಧನ ಲಭ್ಯವೋ ಅದನ್ನು ತುಂಬಿಸಿಕೊಂಡು ಪ್ರಯಾಣಿಸಬಹುದು.
– ಅಗ್ಗದ ಬೆಲೆಯಲ್ಲಿ ಜೈವಿಕ ಇಂಧನ ಸಿಗುವುದಾದರೆ ಅದನ್ನೇ ಬಳಸಲು ಅವಕಾಶ. ಆಗ ಪೆಟ್ರೋಲ್‌ ಮೀಸಲು ಇಂಧನ.
– ದೂರ ಪ್ರಯಾಣದಲ್ಲಿ ಜೈವಿಕ ಇಂಧನ ಬಳಸಿದರೆ ಜೇಬಿಗೆ ಹೊರೆಯಾಗದು.
– ಜೈವಿಕ ಇಂಧನ ಬಳಕೆ ಹೆಚ್ಚಾದಲ್ಲಿ ತೈಲಕ್ಕಾಗಿ ಮಾಡುವ ಖರ್ಚಿನಲ್ಲಿ ಅಪಾರ ಉಳಿತಾಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next