Advertisement
ಉನ್ನತ ದರ್ಜೆಯ ತಾಂತ್ರಿಕ ಸೌಲಭ್ಯಗಳುಳ್ಳ ಮೊಬೈಲ್‌ಗಳನ್ನು ಫ್ಲಾಗ್‌ಶಿಪ್ ಮೊಬೈಲ್ ಎನ್ನಲಾಗುತ್ತದೆ. ಹಲವಾರು ಬಾರಿ ಈ ಅಂಕಣದಲ್ಲಿ ಹೇಳಿರುವಂತೆ ಇದರಲ್ಲಿ ಅತ್ಯುನ್ನತ ಪ್ರೊಸೆಸರ್, ಹೆಚ್ಚಿನ ರ್ಯಾಮ್, ಉತ್ತಮ ಕ್ಯಾಮರಾ ಮತ್ತು ಮೊಬೈಲ್‌ನಲ್ಲಿ ಬಳಸಿರುವ ಬಿಡಿಭಾಗಗಳು ಉನ್ನತ ಗುಣಮಟ್ಟದ್ದಾಗಿರುತ್ತವೆ. ಹಾಗಾಗಿ ಇಂಥ ಮೊಬೈಲ್‌ಗಳಿಗೆ ದರವೂ ಜಾಸ್ತಿ. 70- 80 ಸಾವಿರ ರೂ.ನಷ್ಟಿದ್ದ ಫ್ಲಾಗ್‌ಶಿಪ್ ಫೋನ್‌ಗಳನ್ನು ಒನ್‌ಪ್ಲಸ್ ಕಂಪೆನಿ ಮೂರ್ನಾಲ್ಕು ವರ್ಷಗಳ ಹಿಂದೆ 20 ಸಾವಿರಕ್ಕೆ ನೀಡುತ್ತಿತ್ತು. ಫ್ಲಾಗ್‌ಶಿಪ್ ಫೋನ್‌ಗಳು ಜನ ಸಾಮಾನ್ಯರ ಕೈಗೆ ದೊರಕುವ ಹಾಗೆ ಮಾಡಿದ ಶ್ರೇಯ ಒನ್‌ಪ್ಲಸ್‌ಗೆ ಸಲ್ಲಬೇಕು. ಈಗ ಅದರ ಫ್ಲಾಗ್‌ಶಿಪ್ ಮೊಬೈಲ್‌ಗಳು 33 ಸಾವಿರದಿಂದ ಆರಂಭವಾಗಿ 58 ಸಾವಿರದವರೆಗೆ ತಲುಪಿವೆ! ಆದರೂ 33 ಸಾವಿರಕ್ಕೆ ದೊರಕುವ ಒನ್‌ಪ್ಲಸ್ 7 ಮಿತವ್ಯಯಕರ ಎನ್ನಲಡ್ಡಿಯಿಲ್ಲ.
ಈ ಫೋನು ಡಿಸ್‌ಪ್ಲೇಯಲ್ಲೇ ಬೆರಳಚ್ಚು ಸ್ಕ್ಯಾನರ್ ಹೊಂದಿದೆ. ಫೋನಿನ ಪರದೆ ಹಾಗೂ ಹಿಂಬದಿ ಎರಡಕ್ಕೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6 ರಕ್ಷಣೆ ಇದೆ. ಇದು 6.39 ಇಂಚಿನ ಪರದೆ ಹೊಂದಿದೆ. ಯಾವುದೇ ನಾಚ್ ಇರದೆ ಸಂಪೂರ್ಣ ಪರದೆಯಿರುತ್ತದೆ. ಸೆಲ್ಫಿà ಕ್ಯಾಮರಾ ಪಾಪ್ ಆಪ್ ಇರುವುದರಿಂದ ನೀರಿನ ಹನಿಯಂತಹ ಡಿಸ್‌ಪ್ಲೇ ಗೊಡವೆಯಿಲ್ಲ. ಇದೇ ಮೊದಲ ಬಾರಿಗೆ ರೆಡ್‌ಮಿ ಫೋನ್‌ವೊಂದಕ್ಕೆ ಅಮೋಲೆಡ್ ಪರದೆ ಅಳವಡಿಸಲಾಗಿದೆ. ಅಮೋಲೆಡ್ ಪರದೆಯ ವೀಕ್ಷಣೆ ಆಕರ್ಷಕವಾಗಿರುತ್ತದೆ. ಕಣ್ಣಿಗೆ ಹಿತವಾಗಿದ್ದು, ಕಡಿಮೆ ಬ್ಯಾಟರಿ ಬಳಸುತ್ತದೆ. ಈ ಪರದೆ 1080×2340 ಪಿಕ್ಸಲ್‌ಗಳನ್ನು (ಎಫ್ಎಚ್‌ಡಿ ಪ್ಲಸ್) ಹೊಂದಿದೆ.
Related Articles
Advertisement
ಮಧ್ಯಮ ದರ್ಜೆಯ ಕೆ 20ಕೆ20 ಸರಣಿಯಲ್ಲೇ ಇನ್ನೊಂದು ಫೋನನ್ನು ಸಹ ರೆಡ್‌ಮಿ ಇದರ ಜೊತೆ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರೊಸೆಸರ್ ಒಂದನ್ನು ಹೊರತುಪಡಿಸಿದರೆ ಇನ್ನೆಲ್ಲಾ ತಾಂತ್ರಿಕ ಅಂಶಗಳು, ವಿನ್ಯಾಸ ಎಲ್ಲವೂ ಸೇಮ್ ಟು ಸೇಮ್ ಕೆ. 20 ಪ್ರೊ ತರಹವೇ. ಇದರಲ್ಲಿ ಸ್ನಾಪ್‌ಡ್ರಾಗನ್ 730 ಪ್ರೊಸೆಸರ್ ಅಳವಡಿಸಲಾಗಿದೆ. ಇದು ಮಧ್ಯಮ ದರ್ಜೆಯ ಪ್ರೊಸೆಸರ್. ಈ ಮೊಬೈಲ್ ಸಹ ಎರಡು ಆವೃತ್ತಿ ಹೊಂದಿದೆ. ಇದರ ದರ ಪಟ್ಟಿ ಇಂತಿದೆ. 6 ಜಿಬಿ 64 ಜಿಬಿ ಆವೃತ್ತಿಯ ಬೆಲೆ 21,999 ರೂ., 6ಜಿಬಿ ರ್ಯಾಮ್128 ಜಿಬಿ ಆಂತರಿಕ ಸಂಗ್ರಹವುಳ್ಳ ಆವೃತ್ತಿಯ ಬೆಲೆ 23,999 ರೂ. ಈ ಎಲ್ಲ ಮೊಬೈಲ್‌ಗಳೂ ನೀಲಿ, ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯ. ಫ್ಲಿಪ್‌ಕಾರ್ಟ್, ಮಿ.ಕಾಂ, ಮಿಸ್ಟೋರ್‌ಗಳಲ್ಲಿ ಲಭ್ಯ. ಎಲ್ಲ ಸರಿ, ಶಿಯೋಮಿ ಬ್ರಾಂಡ್‌ನ ಒಂದು ದೊಡ್ಡ ತಲೆನೋವಾದ ಫ್ಲಾಶ್‌ಸೇಲ್‌ನಲ್ಲಿ ಕಾದು ಇದನ್ನು ಕೊಳ್ಳಬೇಕು! ಮೂರು ಲೆನ್ಸಿನ ಕ್ಯಾಮರಾ
ಕ್ಯಾಮರಾ ವಿಭಾಗಕ್ಕೆ ಬಂದರೆ ಇದು ಹಿಂಬದಿಯೇ ಮೂರು ಲೆನ್‌ಗಳುಳ್ಳ ಕ್ಯಾಮರಾ ಹೊಂದಿದೆ. 48 ಮೆ.ಪಿ. ಸೋನಿ ಐಎಂಎಕ್ಸ್ 586 ಮುಖ್ಯ ಸೆನ್ಸರ್, 13 ಮೆ.ಪಿ. ವೈಡ್ ಆ್ಯಂಗಲ್ (ಚಿಕ್ಕ ರೂಮಿನಲ್ಲಿ ದೊಡ್ಡ ಗುಂಪಿನ ಫೋಟೋ ತೆಗೆಯಬಹುದಾದ) ಸೆನ್ಸರ್ ಹಾಗೂ 8 ಮೆ.ಪಿ. ಟೆಲಿಫೋಟೋ ಸೆನ್ಸರ್ ಹೊಂದಿದೆ. 4ಕೆ ವಿಡಿಯೋ ರೆಕಾರ್ಡಿಂಗ್ ಇದೆ.ಸ್ಲೋ ಮೋಷನ್ ವಿಡಿಯೋ ತೆಗೆಯುವ ಸೌಲಭ್ಯ ಇದೆ. ಸೆಲ್ಫಿà ಕ್ಯಾಮರಾಕ್ಕೆ ಬಂದರೆ ಇದು 20 ಮೆಪಿ. ಪಾಪ್‌ಅಪ್ (ಮೊಬೈಲ್ ಫೋನ್‌ನೊಳಗಿಂದ ಚಿಮ್ಮುವ ಕ್ಯಾಮರಾ!) ಕ್ಯಾಮರಾ ಇದೆ. ಉತ್ಕೃಷ್ಟ ಪ್ರೊಸೆಸರ್
ಇದರಲ್ಲಿ ಪ್ರಸ್ತುತ, ಮೊಬೈಲ್ ಪ್ರೊಸೆಸರ್‌ಗಳಲ್ಲೇ ಅತ್ಯುನ್ನತವಾದ ಸ್ನಾಪ್‌ಡ್ರಾಗನ್ 855 ಚಿಪ್‌ಸೆಟ್ ಇದೆ. ಇದರ ವೇಗ 2.84 ಗಿಗಾ ಹಟ್ಜ್ ಹೊಂದಿದ್ದು, ಗ್ರಾಫಿಕ್‌ಗಾಗಿ ಅಡ್ರೆನೋ 640ಚಿಪ್‌ಸೆಟ್ ಪ್ರತ್ಯೇಕವಾಗಿ ನೀಡಿದೆ. ಈ ಎಲ್ಲ ಅಂಶಗಳಿಂದ ಇದು ಅತ್ಯಂತ ವೇಗವಾದ ಕಾರ್ಯಾಚರಣೆ ನಡೆಸುತ್ತದೆ. ಗೇಮಿಂಗ್‌ಗೆ ಇದು ಸೂಕ್ತವಾಗಿದೆ. ಎರಡು ಆವೃತ್ತಿಗಳನ್ನು ಈ ಮೊಬೈಲ್ ಹೊಂದಿದೆ. ರೂ. 27999 ಕ್ಕೆ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಆಂತರಿಕ ಸಂಗ್ರಹ, 30,999ರೂ.ಗೆ 8ಜಿಬಿ ರ್ಯಾಮ್ ಮತ್ತು 256 ಜಿಬಿ ಆಂತರಿಕ ಸಂಗ್ರಹ. -ಕೆ. ಎಸ್. ಬನಶಂಕರ ಆರಾಧ್ಯ