ಕಾರವಾರ: ದೇಶದ 75ನೇ ವರ್ಷದ ಸ್ವಾತಂತ್ರ್ಯೋತ್ಸದ ನಿಮಿತ್ತ ‘ಆಜಾದಿ ಕಾ ಅಮೃತ್ ಮಹೋತ್ಸವ’ ಎಂದು ಆಚರಿಸಲು ಕರೆ ನೀಡಲಾಗಿದ್ದು, ಇದರ ಭಾಗವಾಗಿ ಭಾರತೀಯ ನೌಕಾಪಡೆಯು ದೇಶದ 75 ದ್ವೀಪಗಳಲ್ಲಿ ಧ್ವಜಾರೋಹಣ ನಡೆಸುತ್ತಿದೆ. ಶುಕ್ರವಾರ ಅಂಜದೀವ್ ನಲ್ಲಿ ಸಹ ರಾಷ್ಟ್ರಧ್ವಜಾರೋಹಣ ನಡೆಯಿತು.
ಈ ಪೈಕಿ ಕಾರವಾರ ಸನಿಹದ ನೌಕಾನೆಲೆಯ ಪ್ರಮುಖ ದ್ವೀಪ ಅಂಜುದೀವ್ ದ್ವೀಪದಲ್ಲಿ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಮಹೇಶ್ ಸಿಂಗ್ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ‘ಆಜಾದಿ ಕಾ ಅಮೃತ್ ಮಹೋತ್ಸವ’ಕ್ಕೆ ಚಾಲನೆ ನೀಡಲಾಯಿತು.
ಇದನ್ನೂ ಓದಿ:ಪಂಚಮಸಾಲಿ ಸಮಾಜ ಮಾತ್ರವಲ್ಲ ಇತರೆ ಸಮಾಜದ ಮೀಸಲು ಬೇಡಿಕೆಯೂ ಈಡೇರಲಿ: ಯತ್ನಾಳ್
ರಕ್ಷಣಾ ಸಚಿವ ಸಚಿವ ರಾಜನಾಥ ಸಿಂಗ್ ನೌಕಾ ಸೇನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಳಿಕ ಕರ್ನಾಟಕ ನೌಕಾ ವಲಯದ ಫ್ಲ್ಯಾಗ್ ಆಫೀಸರ್ ಮಹೇಶ್ ಸಿಂಗ್ ಕಾರವಾರ ಬಳಿಯ ಅಂಜುದೀವ್ ದ್ವೀಪದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಂಜುದೀವ್ ದ್ವೀಪವು ಭಾರತೀಯ ನೌಕಾಪಡೆಗೆ ರಕ್ಷಣೆಯ ದೃಷ್ಟಿಯಲ್ಲಿ ಪ್ರಮುಖವಾಗಿದೆ ಎಂದು ಹೇಳಿದರು. ಇದೇ ವೇಳೆ ನೌಕಾಪಡೆಯ ಬ್ಯಾಂಡ್‌ನಿಂದ ರಾಷ್ಟ್ರಗೀತೆ ನುಡಿಸಲಾಯಿತು. ಧ್ವಜ ವಂದನೆ ಸಲ್ಲಿಸಿದ ಬಳಿಕ ಕಾರ್ಯಕ್ರಮ ಮುಕ್ತಾಯವಾಯಿತು.