Advertisement
ನವದೆಹಲಿ: ಗಗನಕ್ಕೆ ಏರುತ್ತಿರುವ ಈರುಳ್ಳಿ ಬೆಲೆಯ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ವರ್ಷದ ಡಿ.31ರವರೆಗೆ ಈರುಳ್ಳಿಗೆ ಪ್ರತಿ ಟನ್‌ಗೆ 66,730 ರೂ.(800 ಅಮೆರಿಕನ್ ಡಾಲರ್)ಗಳ ಕನಿಷ್ಠ ರಫ್ತು ದರ(ಎಂಇಪಿ) ನಿಗದಿಪಡಿಸಿದೆ.“ಈವರೆಗೆ ಈರುಳ್ಳಿ ರಫ್ತು ಉಚಿತವಾಗಿತ್ತು. ಆದರೆ ಬೆಲೆ ನಿಯಂತ್ರಣದ ಉದ್ದೇಶದಿಂದ ಸರ್ಕಾರವು 2023ರ ಡಿ.31ರವರೆಗೆ ಪ್ರತಿ ಟನ್ ಈರುಳ್ಳಿ ರಫ್ತಿನ ಮೇಲೆ 800 ಅಮೆರಿಕನ್ ಡಾಲರ್ ಎಂಇಪಿ ವಿಧಿಸಿದೆ’ ಎಂದು ವಿದೇಶಿ ವ್ಯಾಪಾರದ ಮಹಾ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.
80 ರೂ.ಗೆ ಮುಟ್ಟಿದ ಈರುಳ್ಳಿ ಬೆಲೆ:
ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಈರುಳ್ಳಿ ಬೆಲೆ ಶನಿವಾರ 65 ರೂ.ಗಳಿಂದ 80 ರೂ.ವರೆಗೆ ಇತ್ತು. ಮದರ್ ಡೇರಿಯ ಸಫಲ್ ಚಿಲ್ಲರೆ ಅಂಗಡಿಗಳಲ್ಲಿ ಕೆಜಿಗೆ 67 ರೂ., ಬಿಗ್ ಬಾಸ್ಕೆಟ್‌ನಲ್ಲಿ ಕೆಜಿಗೆ 67 ರೂ. ಹಾಗೂ ಒಟಿಪೈನಲ್ಲಿ ಕೆಜಿಗೆ 70 ರೂ. ಇತ್ತು. ಸ್ಥಳೀಯ ವ್ಯಾಪಾರಸ್ಥರು ಪ್ರತಿ ಕೆಜಿ ಈರುಳ್ಳಿಗೆ 80 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಪೂರೈಕೆ ಕೊರತೆ ನೀಗಿಸದಿದ್ದರೆ ದೀಪಾವಳಿ ವೇಳೆಗೆ ಇದು 100ರೂ.ಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.