ಬೀದರ: ಫಾರ್ಮಸಿಸ್ಟ್ ನೌಕರರ ವೇತನ ಹಾಗೂ ಭತ್ಯೆಗಳಲ್ಲಿ ವ್ಯತ್ಯಾಸ ಸರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಫಾರ್ಮಸಿಸ್ಟ್‌ಗಳ ಸಂಘ ಆಗ್ರಹಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ಅಮರನಾಥ ಡೊಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನೇತೃತ್ವದಲ್ಲಿ ಫಾರ್ಮಸಿಸ್ಟ್‌ಗಳು ಸಿಎಂಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಅಖೀಲ ಭಾರತೀಯ ತಾಂತ್ರಿಕ ಮಹಾ ಪರಿಷತ್ತು ಕಾಯ್ದೆ 1987 ರಂತೆ ಫಾರ್ಮಸಿಯನ್ನು ಇಂಜಿನಿಯರಿಂಗ್ ಕೋರ್ಸ್‌ಗಳಂತೆ ತಾಂತ್ರಿಕ ವಿದ್ಯಾರ್ಹತೆ ಎಂದು ಪರಿಗಣಿಸಿ ಆದೇಶಿಸಿರುವುದರಿಂದ ಮಾತೃ ಇಲಾಖೆಯಿಂದ ಇಂಜಿನಿಯರಿಂಗ್ ಡಿಪ್ಲೊಮಾದಂತೆ ವೇತನ ಭತ್ಯೆಗಳನ್ನು ನೀಡಬೇಕು ಎಂದು ಆಗ್ರಹಿಸಲಾಗಿದೆ.
ಕೇಂದ್ರ ಹಾಗೂ ನೆರೆ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫಾರ್ಮಸಿಸ್ಟ್‌ಗಳಿಗಿಂತ ಕಡಿಮೆ ವೇತನ ಹಾಗೂ ಭತ್ಯೆಗಳನ್ನು 1982ರಿಂದ ಪಡೆಯುತ್ತಲಿದ್ದು ಈ ಅನ್ಯಾಯವನ್ನು ಸರಿಪಡಿಸಲು ಇದುವರೆಗೆ ಇಲಾಖೆಯಿಂದ ಸಾಧ್ಯವಾಗಿಲ್ಲ. ನೆರೆ ರಾಜ್ಯ ಹಾಗೂ ಕೇಂದ್ರದ ಫಾರ್ಮಾಸಿಸ್ಟರು ಪಡೆಯುವ ಸೌಲಭ್ಯವನ್ನು ನಮಗೂ ವಿಸ್ತರಿಸಬೇಕು. ಆಡಳಿತ ನ್ಯಾಯ ಮಂಡಳಿಯ ತೀರ್ಪಿನಂತೆ ವೇತನಶ್ರೇಣಿ ಜಾರಿ ಮಾಡಬೇಕು. ಜನಸಂಖ್ಯೆ ಹಾಗೂ ಆಸ್ಪತ್ರೆಗಳ ಹಾಸಿಗೆಗಳ ಸಾಂದ್ರತೆಯ ಮೇರೆಗೆ ಹೆಚ್ಚಿನ ಹುದ್ದೆಯನ್ನು ಸೃಷ್ಟಿಸಬೇಕು.
ವಿದ್ಯಾರ್ಹತೆಗನುಗುಣವಾಗಿ ವೃಂದ ಮತ್ತು ನೇಮಕಾತಿ ಬದಲಾಯಿಸಿ ಬಡ್ತಿ ಅವಕಾಶಗಳನ್ನು ಹೆಚ್ಚಿಸಬೇಕು. ಸೇವಾನಿರತ ಫಾರ್ಮಸಿಸ್ಟ್‌ರಿಗೆ ಉನ್ನತ ವ್ಯಾಸಂಗಕ್ಕೆ ಇಲಾಖೆಯ ಇನ್ನಿತರರಿಗೆ ನೀಡಿರುವಂತೆ ಸೀಟು ಕಾಯ್ದಿರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಫಾರ್ಮಸಿಸ್ಟ್ ಹುದ್ದೆಯ ಪದನಾಮವನ್ನು, ಫಾರ್ಮಸಿ ಅ ಧಿಕಾರಿ ಎಂದು ಬದಲಾಯಿಸಬೇಕು. ರಾಜ್ಯದ ಎಲ್ಲಾ ಆಸ್ಪತ್ರೆಯ ಔಷ ಧ ಉಗ್ರಾಣಗಳನ್ನು ಅಭಿವೃದ್ಧಿ ಪಡಿಸಬೇಕು. ಜಿಲ್ಲಾ ಆಸ್ಪತ್ರೆಗಳಲ್ಲಿ ಔಷ ಧಗಳ ಮಾಹಿತಿ ಕೇಂದ್ರ ಸಮಾಲೋಚನೆ ಕೇಂದ್ರಗಳನ್ನು ಪ್ರಾರಂಭಿಸಿ ಫಾರ್ಮಸಿಸ್ಟ್ ಹುದ್ದೆಗಳನ್ನು ಸೃಜಿಸಿ ಸ್ಥಳಾಂತರಿಸಬೇಕು. ಇಲಾಖೆಯಲ್ಲಿ ಖಾಲಿ ಇರುವ ಫಾರ್ಮಸಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ.