ರಾಮನಗರ: ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆಯಲ್ಲಿ ಲೋಪಗಳಿವೆ ಎಂಬ ದೂರನ್ನು ನಿಯಮಾನುಸಾರಪರಿಶೀಲಿಸಿ ಅಗತ್ಯ ಕ್ರಮಕೈಗೊಂಡು ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಮತದಾರರ ನೋಂದಣಾಧಿಕಾರಿಗಳು ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಚನ್ನಪಟ್ಟಣ ತಾಲೂಕಿನ ಮತದಾರರ ಪ್ಟಟಿಯಲ್ಲಿ ಅರ್ಹತೆಯಿಲ್ಲದ ಮತದಾರರ ಸೇರ್ಪಡೆಯಾಗಿದ್ದು, ಅಂತಹವರನ್ನು ಪಟ್ಟಿಯಿಂದ ಕೈಬಿಡುವಂತೆ ಚನ್ನಪಟ್ಟಣ ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಭಾರತ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು.
ಕೋವಿಡ್-19 ಸೋಂಕು ಕಾರಣ ಜೂನ್‌ನಲ್ಲಿ ನಡೆ ಯಬೇಕಿದ್ದ ಶಿಕ್ಷಕರ ಕ್ಷೇತ್ರದ ಚುನಾವಣೆ ಮುಂದೂಡಲ್ಪಟ್ಟಿದೆ. ಮತದಾರರ ಪಟ್ಟಿಯಲ್ಲಿ ಅರ್ಹತೆ ಇಲ್ಲದವರನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೇರಿಸಲಾಗಿದೆ. ಹೀಗೆ ಸೇರ್ಪಡೆಯಾಗಿರುವವರ ಹೆಸರು ಉಲ್ಲೇಖೀಸಿ ವಿವರವಾಗಿ ಬರೆದು ಚನ್ನಪಟ್ಟಣ ತಹಶೀಲ್ದಾರರು, ಚನ್ನಪಟ್ಟಣ ಬಿಇಒ ಅವರು ಮತ್ತು ಜಿಲ್ಲಾಧಿಕಾರಿಗಳಿಗೆ ಮೇ ತಿಂಗಳಲ್ಲಿ ದೂರು ಸಲ್ಲಿಸಲಾಗಿತ್ತು.
ಪ್ರಾದೇಶಿಕ ಆಯುಕ್ತರು ಮತ ದಾರರ ಪಟ್ಟಿ ತಯಾರಿಸುವ ವೇಳೆ ಚುನಾವ ಣೆಯಲ್ಲಿ ಭಾಗವಹಿ ಸುವ ಅರ್ಹತೆ ಉಳ್ಳವರ ದಾಖಲೆ ಪರಿಶೀಲಿಸಿ ಪಟ್ಟಿಗೆ ಸೇರಿಸುವಂತೆ ಅವರು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಆದರೆ ಆಯುಕ್ತರ ಸೂಚನೆಯನ್ನು ಸ್ಥಳೀಯ ಅಧಿಕಾರಿಗಳು ಪಾಲಿಸಿಲ್ಲ. ಸದರಿ ಅಧಿಕಾರಿಗಳು ತಮ್ಮ ಸರ್ಕಾರಿ ಕರ್ತವ್ಯ ನಿಭಾಯಿಸಿಲ್ಲ. ಪ್ರಜಾಪ್ರತಿನಿಧಿ ಕಾಯ್ದೆ 1950, ಸೆಕ್ಷನ್ 32ರಂತೆ ಅಧಿಕಾರಿಗಳು ಶಿಕ್ಷಕೆಗೆ ಅರ್ಹರಾಗಿದಾರೆ ಎಂದು ಎ.ಪಿ.ರಂಗನಾಥ್ ದೂರು ಸಲ್ಲಿಸಿದ್ದರು.
ತಾವು ಪಟ್ಟಿಯ ಅನರ್ಹರ ಹೆಸರು, ಕ್ರಮ ಸಂಖ್ಯೆ, ತಮ್ಮ ಆರೋ ಪಕ್ಕೆ ಕಾರಣ ಇತ್ಯಾದಿ ದೂರು ಸ್ಪಷ್ಟವಾಗಿ ಗುರುತಿಸಿ ದೂರು ನೀಡಿದ್ದರು, ಸಹ ಸ್ಥಳೀಯ ಅಧಿಕಾರಿಗಳು ಪರಿಗ ಣಿಸಿಲ್ಲ ಎಂದು ಎ.ಪಿ.ರಂಗನಾಥ್ ದೂರಿನಲ್ಲಿ ಆರೋಪಿಸಿ ದ್ದಾರೆ. ಇದೀಗ ಪ್ರಾದೇಶಿಕ ಆಯುಕ್ತರು ಪಟ್ಟಿ ಪರಿಶೀಲಿಸಿ, ಲೋಪಗಳ ಬಗ್ಗೆ ಅಗತ್ಯ ಕ್ರಮವಹಿಸಿ ವರದಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.