Advertisement

ಶಿರಹಟ್ಟಿ ತಾಲೂಕಾಸ್ಪತ್ರೆ ಅವ್ಯವಸ್ಥೆ ಸರಿಪಡಿಸಿ

03:20 PM Feb 27, 2020 | Suhan S |

ಶಿರಹಟ್ಟಿ: ಪಟ್ಟಣದಲ್ಲಿನ ತಾಲೂಕಾಸ್ಪತ್ರೆ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಶಿರಹಟ್ಟಿ ಪಟ್ಟಣದಲ್ಲಿರುವ ತಾಲೂಕಾಸ್ಪತ್ತೆಯಲ್ಲಿ ಪ್ರತಿದಿನ ನೂರಾರು ರೋಗಿಗಳು ಮತ್ತು ಸಾರ್ವಜನಿಕರು ಆಗಮಿಸುತ್ತಿರುವುದರಿಂದ ಇಲ್ಲಿನ ವೈದ್ಯಾಧಿಕಾರಿಗಳು ರೋಗಿಗಳಿಗೆ ಔಷಧಿಯನ್ನು ಸಮಪರ್ಕವಾಗಿ ವಿತರಿಸುತ್ತಿಲ್ಲ. ಅವರಿಗೆ ಹೊರಗಡೆಯಿಂದ ಔಷಧಿ ತರುವಂತೆ ಸೂಚಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗೆಂದು ಆಗಮಿಸಿದ ಬಡ ರೋಗಿಗಳು ಹೊರಗಡೆಯಿಂದ ತರಲು ಹಣ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಇಲ್ಲವೆಂದರೆ ಹೇಗೆ? ಅಲ್ಲಿನ ಅಧಿಕಾರಿಗಳು ಈ ಕುರಿತು ಸಮರ್ಪಕವಾಗಿ ಉತ್ತರ ನೀಡುತ್ತಿಲ್ಲ. ಔಷಧಿಗಳನ್ನು ಪೂರೈಕೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಆಸ್ಪತ್ರೆಯಲ್ಲಿ ಅರೆ ಗುತ್ತಿಗೆಯಲ್ಲಿ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವರಿಗೆ ಗುತ್ತಿಗೆದಾರರು ಸರಿಯಾಗಿ ವೇತನ ಪಾವತಿಸುತ್ತಿಲ್ಲ. ಅವರ ಗೋಳು ಕೇಳುವವರಿಲ್ಲ. ಡಿ ದರ್ಜೆ ನೌಕರರನ್ನು ಸ್ಥಳೀಯರನ್ನೇ ಅರೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಎಲ್ಲ ಬೇಡಿಕೆಗಳನ್ನು ಶೀಘ್ರ ಈಡೇರದೇ ಹೋದರೆ ಹೋರಾಟ ಅನಿವಾರ್ಯ ಎಂದು ಕರವೇ ಅಧ್ಯಕ್ಷ ಬಸವರಾಜ ವಡವಿ ಆಗ್ರಹಿಸಿ ಮನವಿ ಸಲ್ಲಿಸಿದರು.

ದೇವೇಂದ್ರ ಶಿಂಧೆ, ಪ್ರಕಾಶ ಬಡ್ಡಣ್ಣವರ, ನೂರಹ್ಮದ್‌ ಮುಳಗುಂದ, ಮಾಬುಸಾಬ್‌ ಡಾಲಾಯತ್‌, ಗೂಡುಸಾಬ್‌ ಚೋರಗಸ್ತಿ, ಮಂಜುನಾಥ ಕುಂದರಗಿ, ಹರೀಶ ದೇಸಾಯಿಪಟ್ಟಿ, ಚನ್ನವೀರ ನಡವಿನಗೇರಿ, ಅಭಿಷೇಕ ದಶಮನಿ, ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next