Advertisement
262 ರನ್ನುಗಳ ಭಾರೀ ಹಿನ್ನಡೆಗೆ ಒಳಗಾದ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಜೋ ರೂಟ್ ಪಡೆ, 4ನೇ ದಿನದಾಟದ ಅಂತ್ಯಕ್ಕೆ 3 ವಿಕೆಟಿಗೆ 55 ರನ್ ಗಳಿಸಿ ಚಿಂತಾಜನಕ ಸ್ಥಿತಿಯಲ್ಲಿತ್ತು. ಅಂತಿಮ ದಿನವಾದ ಸೋಮವಾರ 197ಕ್ಕೆ ಕುಸಿದು ಶರಣಾಗತಿ ಸಾರಿತು. ಇದರೊಂದಿಗೆ ಏಕಕಾಲದಲ್ಲಿ ಆರಂಭಗೊಂಡ ಮೂರೂ ಟೆಸ್ಟ್ ಪಂದ್ಯಗಳಲ್ಲಿ ಆತಿಥೇಯ ತಂಡಗಳು ಇನ್ನಿಂಗ್ಸ್ ಗೆಲುವು ಕಂಡಂತಾಯಿತು. ರವಿವಾರ ಭಾರತ ಬಾಂಗ್ಲಾದೇಶವನ್ನು ಹಾಗೂ ಆಸ್ಟ್ರೇಲಿಯ ಪಾಕಿಸ್ಥಾನವನ್ನು ಇನ್ನಿಂಗ್ಸ್ ಸೋಲಿಗೆ ಗುರಿಪಡಿಸಿತ್ತು.
ಪಿಚ್ ಬ್ಯಾಟಿಂಗಿಗೆ ಸಹಕರಿಸುತ್ತಿದ್ದು ದರಿಂದ ಹಾಗೂ ರೂಟ್, ಸ್ಟೋಕ್ಸ್, ಬಟ್ಲರ್ ಮೊದಲಾದವರು ಕ್ರೀಸ್ ಇಳಿಯ ಬೇಕಾದ್ದರಿಂದ ಇಂಗ್ಲೆಂಡ್ ಹೋರಾಟ ವೊಂದನ್ನು ಸಂಘಟಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡೀತು ಎಂಬ ನೀರಿಕ್ಷೆ ಇತ್ತು. ಆದರೆ ಎಡಗೈ ಮಧ್ಯಮ ವೇಗಿ ನೀಲ್ ವ್ಯಾಗ್ನರ್ ಇದಕ್ಕೆ ಅವಕಾಶ ಕೊಡಲಿಲ್ಲ. ಅವರು 5 ವಿಕೆಟ್ ಉಡಾಯಿಸಿ ನ್ಯೂಜಿ ಲ್ಯಾಂಡ್ ಜಯಭೇರಿಯನ್ನು ಸಾರಿದರು. ರಕ್ಷಣಾತ್ಮಕ ಆಟಕ್ಕಿಳಿದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದೇ ಇಂಗ್ಲೆಂಡ್ ಯೋಜನೆಯಾಗಿತ್ತು. ಆದರೆ ಆಗ ರನ್ನೂ ಬರಲಿಲ್ಲ, ವಿಕೆಟ್ ಕೂಡ ಉಳಿಯಲಿಲ್ಲ. 17 ರನ್ ಅಂತರದಲ್ಲಿ 4 ವಿಕೆಟ್ ಉರುಳಿಸಿಕೊಂಡ ಇಂಗ್ಲೆಂಡಿಗೆ ಉಳಿವಿನ ಮಾರ್ಗವೆಲ್ಲ ಮುಚ್ಚಿತು.
Related Articles
Advertisement
9ನೇ ವಿಕೆಟಿಗೆ ಸ್ಯಾಮ್ ಕರನ್ (ಅಜೇಯ 29) ಮತ್ತು ಜೋಫÅ ಆರ್ಚರ್ (30) 59 ರನ್ ಒಟ್ಟುಗೂಡಿಸಿದ್ದೇ ಇಂಗ್ಲೆಂಡ್ ಸರದಿಯ ದೊಡ್ಡ ಜತೆಯಾಟವೆನಿಸಿತು.ಈ ಜಯದೊಂದಿಗೆ ತವರಿನ ಸತತ 7 ಟೆಸ್ಟ್ ಸರಣಿಗಳಲ್ಲಿ ನ್ಯೂಜಿಲ್ಯಾಂಡ್ ಅಜೇಯವಾಗಿ ಉಳಿದಂತಾಯಿತು. ಸರಣಿಯ 2ನೇ ಹಾಗೂ ಅಂತಿಮ ಪಂದ್ಯ ಶುಕ್ರವಾರದಿಂದ ಹ್ಯಾಮಿಲ್ಟನ್‌ನಲ್ಲಿ ಆರಂಭವಾಗಲಿದೆ. ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್-353 ಮತ್ತು 197 (ಡೆನ್ಲಿ 35, ಬರ್ನ್ಸ್ 31, ಆರ್ಚರ್ 30, ಕರನ್ ಔಟಾಗದೆ 29, ಸ್ಟೋಕ್ಸ್ 28, ವ್ಯಾಗ್ನರ್ 44ಕ್ಕೆ 5, ಸ್ಯಾಂಟ್ನರ್ 53ಕ್ಕೆ 3). ಪಂದ್ಯಶ್ರೇಷ್ಠ: ಬ್ರಾಡ್ಲಿ ವಾಟಿÉಂಗ್. ಆರ್ಚರ್‌ಗೆ ಜನಾಂಗೀಯ ನಿಂದನೆ
ಇಂಗ್ಲೆಂಡ್ ವೇಗಿ ಜೋಫÅ ಆರ್ಚರ್ ವೀಕ್ಷಕನೊಬ್ಬನಿಂದ ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ. ಈ ಕಹಿ ಅನುಭವವನ್ನು ಆರ್ಚರ್ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ನ್ಯೂಜಿಲ್ಯಾಂಡ್-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟದ ವೇಳೆ ಈ ಘಟನೆ ನಡೆದಿದೆ. ಇದಕ್ಕೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ವಿಷಾದ ವ್ಯಕ್ತಪಡಿಸಿದೆ. ಬ್ಯಾಟಿಂಗ್ ಮಾಡುತ್ತಿದ್ದಾಗ ವೀಕ್ಷಕರ ಗುಂಪಿನಿಂದ ಒಬ್ಬ ವ್ಯಕ್ತಿ ಜನಾಂಗೀಯ ನಿಂದನೆ ಮಾಡಿದ್ದಾನೆ ಎಂದು ಆರ್ಚರ್ ತಿಳಿಸಿದ್ದಾರೆ. “ಘಟನೆಯಿಂದ ನಮಗೆ ಆಘಾತವಾಗಿದೆ. ತಪ್ಪಿತಸ್ಥ ಯಾರೇ ಆಗಿದ್ದರೂ ಆತನನ್ನು ಬಂಧಿಸಿ ಕಠಿನ ಶಿಕ್ಷೆ ನೀಡುತ್ತೇವೆ. ನಿಮಗಾಗಿರುವ ಅವಮಾನಕ್ಕೆ ಕ್ಷಮೆಯಾಚಿಸುತ್ತೇವೆ’ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.