Advertisement

ಬುದ್ಧಗಯಾ ಬಾಂಬ್‌ ಸ್ಫೋಟ:ಐವರು ಐಎಂ ಉಗ್ರರಿಗೆ ಜೀವಾವಧಿ ಶಿಕ್ಷೆ

08:52 AM Jun 02, 2018 | Team Udayavani |

ಪಟ್ನಾ: ಬುದ್ಧಗಯಾ ಬಾಂಬ್‌ ಸ್ಫೋಟ ಪ್ರಕರಣದ ಅಪರಾಧಿಗಳಾದ ಇಂಡಿಯನ್‌ ಮುಜಾಹಿದೀನ್‌ (ಐ ಎಂ) ಉಗ್ರ ಸಂಘಟನೆಯ ಇಮ್‌ತಿ ಯಾಜ್‌ ಅನ್ಸಾರಿ, ಹೈದರ್‌ ಅಲಿ, ಮುಜಿಬ್‌ ಉಲ್ಲಾ, ಒಮೈರ್‌ ಸಿದ್ದಿಕಿ ಹಾಗೂ ಅಜರುದ್ದೀನ್‌ ಖುರೇಶಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

Advertisement

ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ವಿಶೇಷ ನ್ಯಾಯಾಲಯದ ನ್ಯಾಯ ಮೂರ್ತಿ ಮನೋಜ್‌ ಕುಮಾರ್‌ ಸಿನ್ಹಾ, ಶಿಕ್ಷೆಯ ಜತೆಗೆ ತಲಾ 50 ಸಾವಿರ ರೂ. ದಂಡವನ್ನೂ ವಿಧಿಸಿದ್ದಾರೆ. ಇದೇ ಪ್ರಕರಣದ ಬಾಲಾಪರಾಧಿ  ತೌಫಿಕ್‌ ಅಹ್ಮದ್‌ನನ್ನು ಕಳೆದ ವರ್ಷವೇ 3 ವರ್ಷಗಳ ಅವಧಿಗಾಗಿ ರಿಮಾಂಡ್‌ ಹೋಂಗೆ ಕಳುಹಿಸಲಾಗಿತ್ತು.

 ಬುದ್ಧಗಯಾದಲ್ಲಿ 2013ರ ಜುಲೈ 7ರಂದು ಸರಣಿ ಸ್ಫೋಟ ಸಂಭವಿಸಿ, ಹಲವರು ಗಾಯ ಗೊಂಡಿದ್ದರು. ಈ ಪ್ರಕರಣದ ಆರು ಆರೋಪಿಗಳೂ 2013ರ ಅಕ್ಟೋಬರ್‌ನಲ್ಲಿ ಪಟ್ನಾದಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲೂ ಆರೋಪಿಗಳಾಗಿದ್ದು, ಅದರ ವಿಚಾರಣೆ  ಇನ್ನೂ ಬಾಕಿ ಯಿದೆ.

Advertisement

Udayavani is now on Telegram. Click here to join our channel and stay updated with the latest news.

Next