Advertisement

ಪಿಸ್ತೂಲ್‌ ತೋರಿಸಿ ಐವರು ಗ್ರಾಪಂ ಸದಸ್ಯರು ಸೇರಿ 7 ಜನರ ಅಪಹರಣ

09:28 AM Jan 01, 2018 | Team Udayavani |

ಗಂಗಾವತಿ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಕಿಷ್ಕಿಂದ ವಾಲೀಕಿಲ್ಲಾದ ಆದಿಶಕ್ತಿ ದೇವಾಲಯದ ಹತ್ತಿರ
ಭಾನುವಾರ ಬೆಳಗಿನ ಜಾವ ಪ್ರವಾಸಕ್ಕೆ ಆಗಮಿಸಿದ್ದ ಗ್ರಾಪಂ ಸದಸ್ಯರಿಗೆ ಪಿಸ್ತೂಲ್‌ ತೋರಿಸಿ ಐವರು ಸದಸ್ಯರೂ ಸೇರಿ 7
ಜನರನ್ನು ವಾಹನ ಸಮೇತ ಅಪಹರಿಸಲಾಗಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೊಮ್ಮನಳ್ಳಿ ಗ್ರಾಮ ಪಂಚಾಯಿತಿ
ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಈ ಅಪಹರಣ ನಡೆದಿದೆ. 

Advertisement

ಬೊಮ್ಮನಳ್ಳಿ ಗ್ರಾಪಂನ ಮೂರನೇ ಅವಧಿಗೆ ಅಧ್ಯಕ್ಷರ ಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಮ್ಮ ಗುರಣ್ಣ ಹವಣಗಿ ನೇತೃತ್ವದಲ್ಲಿ 7 ಜನ ಸದಸ್ಯರು ಮೂರು ವಾಹನಗಳಲ್ಲಿ ಹಂಪಿ, ಕಿಷ್ಕಿಂದ, ಅಂಜನಾದ್ರಿಬೆಟ್ಟದ ಪ್ರವಾಸಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಆನೆಗೊಂದಿ ಕಿಷ್ಕಿಂದಾ ವಾಲೀಕಿಲ್ಲಾ ಆದಿಶಕ್ತಿ ದರ್ಶನ ಮಾಡಿ ಮಲಗಿದ್ದ ವೇಳೆ ಬೆಳಗಿನ ಜಾವ 2.30ರ ಸುಮಾರಿಗೆ ಗುಂದಗಿ ಗ್ರಾಮದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯ ಪತಿ ಸೇರಿ ಐವರು ಪಿಸ್ತೂಲ್‌ ತೋರಿಸಿ ಕ್ರೂಸರ್‌ ವಾಹನದಲ್ಲಿ ಇವರನ್ನು ಕರೆದೊಯ್ದರು. ಶಿವಮ್ಮ ಗುರಣ್ಣ ಹಾವಳಗಿ (38), ಶರಣಮ್ಮ ಶರಣೇಗೌಡ ಬೀರಾದಾರ್‌(62), ಶ್ರೀದೇವಿ ಮಹಾದೇವಪ್ಪ
ಪೂಜಾರಿ(40), ಶಶಿಕಲಾ ಶಿವಣ್ಣ ದೊಡ್ಮನಿ(25), ಶಿವಣ್ಣ ದೊಡ್ಮನಿ(28) ಹಾಗೂ ಮೂರು ಜನ ಮಕ್ಕಳನ್ನು ಅಪಹರಿಸಲಾಗಿದೆ. ಬಳಿಕ, ಕ್ರೂಸರ್‌ ಚಾಲಕ ಬಸವರಾಜ ಕೊಂಡಗೂಳಿ ಎಂಬಾತನನ್ನು ತಾಲೂಕಿನ ಹೇರೂರು ಹತ್ತಿರ ಪಿಸ್ತೂಲ್‌ ತೋರಿಸಿ ಕೆಳಗಿಳಿಸಿದ್ದಾರೆ. ಅಪಹರಣಕ್ಕೆ ಸಂಬಂಧಿ ಸಿದಂತೆ ಬೊಮ್ಮನಳ್ಳಿ ಚಂದ್ರಕಾಂತ ಶರಣ್ಣ ಸಗರ ಇತರರ ವಿರುದ್ಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಲಾಗಿದೆ.

ಹಿನೆಲೆ ಏನು?: 17 ಸದಸ್ಯ ಬಲದ ಬೊಮ್ಮನಳ್ಳಿ ಗ್ರಾಪಂ ಅಧ್ಯಕ್ಷೆಯಾಗಿದ್ದ ಗಂಗೂಬಾಯಿ ಮಾಶ್ಯಾಳ ಎಂಬುವರು ರಾಜೀನಾಮೆ ನೀಡಿದ್ದು, ಇದರಿಂದ ತೆರ ವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶಿವಮ್ಮ ಗುರಪ್ಪ ಹಾವಳಗಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. 7 ಜನ ಸದಸ್ಯರೊಂದಿಗೆ ಅವರು ಅಂಜನಾದ್ರಿ ಬೆಟ್ಟ ಪ್ರದೇಶದಲ್ಲಿ ಪ್ರವಾಸ ಮಾಡಿ ಶನಿರಾತ್ರಿ ಆದಿಶಕ್ತಿ ದೇವಾಲಯದಲ್ಲಿ ತಂಗಿದ್ದರು. ಎದು ರಾಳಿ ಗುಂಪಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯ ಪತಿ ಮಲ್ಲನ ಗೌಡ ಪಾಟೀಲ ಕಟ್ಟಿ ಹಾಗೂ ಗುಂಪಿನ ಸದಸ್ಯರು ಶನಿರಾತ್ರಿ
ಆನೆಗೊಂದಿಗೆ ಆಗಮಿಸಿ ಕ್ರೂಸರ್‌ನಲ್ಲಿ ಮಲಗಿದ್ದ 7 ಜನರನ್ನು ಪಿಸ್ತೂಲ್‌ ತೋರಿಸಿ ಅಪಹರಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next