ಗದಗ: ಜಿಲ್ಲೆಯಲ್ಲಿ ಸೋಮವಾರ ಐದು ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ 17ಕ್ಕೆ ಏರಿಕೆಯಾಗಿವೆ. ‘
ನಗರದ ಗಂಜಿಬಸವೇಶ್ವರ ಸರ್ಕ್‌ಲ್ ಭಾಗದ ಕಂಟೈನ್ಮೆಂಟ್ ನಿರ್ಬಂಧವನ್ನು ಉಲ್ಲಂಘಿಸಿ, ಬಡಾವಣೆಯಲ್ಲಿ ಸಂಚರಿಸಿದ ಇಬ್ಬರಿಗೆ ಕೋವಿಡ್-19 ಅಂಟಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಗಂಜೀಬಸವೇಶ್ವರ ಸರ್ಕಲ್ ಪ್ರದೇಶದ ಪಿ.913 ಸಂಪರ್ಕದಲ್ಲಿದ್ದ 33 ವರ್ಷದ ಪುರುಷ (ಪಿ.1179), 58 ವರ್ಷ ವ್ಯಕ್ತಿ(ಪಿ.1180) ಗೆ ಸೋಂಕು ಹರಿಡಿದ್ದರೆ, ಇದೇ ಬಡಾವಣೆಯ ನಿವಾಸಿಗಳಾಗಿರುವ 32 ವರ್ಷ ವ್ಯಕ್ತಿ(ಪಿ.1181) ಹಾಗೂ 12 ವರ್ಷದ ಬಾಲಕ (ಪಿ.1182) ಸೋಂಕು ಕಂಡು ಬಂದಿದೆ.
ಈ ಭಾಗದ 4 ಹೊಸ ಕೋವಿಡ್-19 ಪ್ರಕರಣಗಳೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 20 ಜನರನ್ನು ಈಗಾಗಲೇ ಪ್ರತ್ಯೇಕ ನಿಗಾದಲ್ಲಿ ಇರಿಸಿ ಅವರ ಗಂಟಲು ದ್ರವದ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ತಮಿಳುನಾಡಿನ ಚೆನ್ನೈನಿಂದ ಮೇ 12 ರಂದು ಶಿರಹಟ್ಟಿಗೆ ಆಗಮಿಸಿದ್ದ 17 ಜನರಲ್ಲಿ 30 ವರ್ಷದ ವ್ಯಕ್ತಿಯೊಬ್ಬರಿಗೆ (ಪಿ1178) ಸೋಂಕು ದೃಢಪಟ್ಟಿದೆ. 17 ಜನರು ಚೆನ್ನೈನಿಂದ ಆಗಮಿಸುತ್ತಿದ್ದಂತೆ ಎಲ್ಲರನ್ನೂ ಹಾಸ್ಟೆಲ್‌ದಲ್ಲಿ ಪ್ರತ್ಯೇಕ ನಿಗಾಹದಲ್ಲಿ ಇರಿಸಲಾಗಿತ್ತು. ಅವರಲ್ಲಿ ಒರ್ವ ಶಂಕಿತರ ಗಂಟಲು ದ್ರವ್ಯವನ್ನು ಕೊವಿಡ್-19 ಸೋಂಕು ಪರೀಕ್ಷೆಗಾಗಿ ಕಳುಹಿಸಲಾಗಿತ್ತು 30 ವರ್ಷದ ಪಿ-1178 ಇವರಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.