Advertisement

Australia ಹೋಟೆಲ್‌ಗೆ ನುಗ್ಗಿ ಡಿಕ್ಕಿಯಾದ ಕಾರ್‌ ಭಾರತೀಯ ಮೂಲದ 5 ಮಂದಿ ಸಾವು

08:17 PM Nov 08, 2023 | Team Udayavani |

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದಲ್ಲಿ ಎಸ್‌ಯುವಿ ಒಂದು ಏಕಾಏಕಿ ಬಂದು ಹೋಟೆಲ್‌ ಒಂದಕ್ಕೆ ನುಗ್ಗಿ ಡಿಕ್ಕಿಯಾದ ಕಾರಣ ಭಾರತೀಯ ಮೂಲದ 2 ಕುಟುಂಬಗಳ 5 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಇಬ್ಬರು ಮಕ್ಕಳೂ ಸೇರಿರುವುದು ವರದಿಯಾಗಿದೆ.

Advertisement

ಮೃತರನ್ನು ವಿವೇಕ್‌ ಭಾಟಿಯಾ (38), ಅವರ ಪುತ್ರ ವಿಹಾನ್‌ (11) ಮತ್ತು ಪ್ರತಿಭಾ ಶರ್ಮಾ (44) ಮತ್ತವರ ಪುತ್ರಿ ಅನ್ವಿ (9) ಹಾಗೂ ಜತಿನ್‌ (44) ಎಂದು ಗುರುತಿಸಲಾಗಿದೆ.

ಡೇಲ್ಸ್‌ ಫೋರ್ಡ್‌ ಹೋಟೆಲ್‌ಗೆ ತೆರಳಿದ್ದ ವೇಳೆ ಏಕಾಏಕಿ ಬಿಎಂಡಬ್ಲೂé ಕಾರ್‌ ಹೋಟೆಲ್‌ ಒಳಗೆ ನುಗ್ಗಿ ಡಿಕ್ಕಿಯಾದ ಪರಿಣಾಮ ಈ ಐವರೂ ಮೃತಪಟ್ಟಿದ್ದಾರೆ. ಕುಟುಂಬಗಳ ಇನ್ನಿತರ ಸದಸ್ಯರೂ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವುದಾಗಿ ಸ್ಥಳೀಯ ಪೊಲೀಸರು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next