Advertisement

ಟ್ರಾನ್ಸ್‌ಫಾರ್ಮರ್‌ ಸ್ಫೋಟ: ಐವರು ಸಾವು, 12 ಮಂದಿಗೆ ಗಾಯ

04:38 PM Oct 31, 2017 | udayavani editorial |

ಜೈಪುರ : ಜಿಲ್ಲೆಯ ಶಹಾಪುರ ಪಟ್ಟಣದ ಖಟುಲಾಯಿ ಗ್ರಾಮದಲ್ಲಿ  ಇಂದು ಮಂಗಳವಾರ ಟ್ರಾನ್ಸ್‌ಫಾರ್ಮರ್‌ ಸ್ಫೋಟಗೊಂಡ ಪರಿಣಾಮ ಐವರು ಮೃತಪಟ್ಟು ಇತರ ಅನೇಕರು ಗಾಯಗೊಂಡರು.

Advertisement

ಕುಟುಂಬವೊಂದರ ಸದಸ್ಯರು ವೈವಾಹಿಕ ವಿಧಿಗಳನ್ನು ಪೂರೈಸುವ ಸಲುವಾಗಿ ಟ್ರಾನ್ಸ್‌ಫಾರ್ಮರ್‌ ಸಮೀಪದಿಂದ ಸಾಗುತ್ತಿದ್ದಾಗಲೇ ಸ್ಫೋಟ ಸಂಭವಿಸಿತು. ಪರಿಣಾಮವಾಗಿ ಐವರು ಸ್ಥಳದಲ್ಲೇ ಮೃತಪಟ್ಟರು. 

ಗಾಯಾಳುಗಳನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತು. ತನಿಖಾ ತಂಡವೊಂದು ಈಗ ಸ್ಥಳದಲ್ಲಿದ್ದು ವಿವರಗಳನ್ನು ಕಲೆ ಹಾಕುತ್ತಿದೆ ಎಂದು ಜೈಪುರ ಗ್ರಾಮಾಂತರ ಎಸ್‌ಪಿ ಡಾ. ರಾಮೇಶ್ವರ್‌ ಸಿಂಗ್‌ ಹೇಳಿದ್ದಾರೆ. 

ಗಾಯಗೊಂಡ ಸುಮಾರು 10ರಿಂದ 12 ಮಂದಿಯನ್ನು ಆಸ್ಪತ್ರೆಗೆ ಒಯ್ಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next