Advertisement

ಸರಕು ತುಂಬಿದ ಟ್ರಕ್‌ ಉರುಳಿ ಕಾರು ಅಪ್ಪಚ್ಚಿ: ಐವರ ದಾರುಣ ಸಾವು

11:37 AM Jun 06, 2017 | Team Udayavani |

ಜೈಪುರ : ಇಂದು ನಸುಕಿನ 4 ಗಂಟೆಯ ವೇಳೆ ನಗರದ ಚೋಮು ಹೌಸ್‌ ಸರ್ಕಲ್‌ ಬಳಿ ಅತಿಯಾಗಿ ಸರಕು ತುಂಬಿಕೊಂಡಿದ್ದ ಟ್ರಕ್‌ ಕಾರೊಂದರ ಮೇಲೆ ಉರುಳಿ ಬಿದ್ದು  ಕಾರು ಅಪ್ಪಚ್ಚಿಯಾದ ಭೀಕರ ಅಪಘಾತದಲ್ಲಿ ಐವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. 

Advertisement

ಭಾರೀ ಸರಕು ತುಂಬಿದ್ದ ಟ್ರಕ್ಕನ್ನು ಸರಿಸಿದ ಬಳಿಕವಷ್ಟೇ ತಾವು ಅದರಡಿ ಅಪ್ಪಚ್ಚಿಯಾಗಿದ್ದ  ಕಾರನ್ನು ಪತ್ತೆ ಹಚ್ಚಿದೆವು ಎಂದು ಎಸ್‌ಎಚ್‌ಓ ಕಮಲ್‌ ನಯನ್‌ ತಿಳಿಸಿದ್ದಾರೆ. 

ಕಾರಿನಲ್ಲಿದ್ದು ಸ್ಥಳದಲ್ಲೇ ಮೃತಪಟ್ಟ ಐವರನ್ನು  ರಾಹುಲ್‌, ರೋಶ್‌ನೀ, ಜ್ಯೋತಿ, ನಿತೇಶ್‌ ಮತ್ತು ಸ್ವೀಟಿ ಎಂದು ಗುರುತಿಸಲಾಗಿದೆ. 

ಕಾರು statue circle ಕಡೆಗೆ ಹೋಗುತ್ತಿದ್ದಾಗ ಈ ಅವಘಡ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next